ತುಮಕೂರು: ಇಲ್ಲಿನ ಯಲ್ಲಾಪುರದ ಸಿದ್ಧಗಿರಿ ನಗರದ ‘ಕನಸು ನಿಲಯ’ದ ನಿವಾಸಿಗಳಾದ ಆನಂದ್.ಎನ್. ಮತ್ತು ಶ್ರೀಮತಿ ನಿತ್ಯಶ್ರೀ.ಜಿ. ದಂಪತಿಗಳ ಎರಡು ವರ್ಷದ ಮುದ್ದಾದ ಮಗಳು ವೈಷ್ಣವಿ ಎಸ್.ಎ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ಸ್ಪರ್ಧೆಯಲ್ಲಿ ಆಕರ್ಷಕ ‘ರಾಧೆ’ಯ ವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾಳೆ. ಕೈಯಲ್ಲಿ ಅಲಂಕೃತ ಮಡಕೆ ಹಿಡಿದು, ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ ಈ ಪುಟಾಣಿಯ ಮುದ್ದಾದ ನೋಟ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಕಳೆ ನೀಡಿತ್ತು.
– ಚಂದ್ರಚೂಡ ಕೆ.ಬಿ.
