ತುಮಕೂರು: ಹೆತ್ತ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ,ಅದನ್ನು ಬಿಟ್ಟು ಮಕ್ಕಳಿಗೆ ನೀನು ಡಾಕ್ಟರ್ ಆಗು ಇಂಜಿನಿಯರ್ ಆಗು ಎಂದು ಒತ್ತಾಯ ಮಾಡುವುದು ಸರಿಯಲ್ಲ,ಅಂಕಗಳು ಮುಖ್ಯವಲ್ಲ ಸಂಸ್ಕಾರ ಮುಖ್ಯ,ಇಂದು ರೈತರು ಬೆಳೆ ಬೆಳೆಯುವುದನ್ನು ಬಿಟ್ಟು ಉಚಿತವಾಗಿ ಎಲ್ಲವನ್ನೂ ಪಡೆಯುತ್ತಿದ್ದಾನೆ ಇದು ಎಂದಿಗೂ ಸರಿಯಲ್ಲ,ಬೆವರು ಹರಿಸಿ ಶ್ರಮಪಟ್ಟು ಭೂಮಿ ತಾಯಿ ನೆಚ್ಚಿಕೊಂಡು ಉತ್ತು ಬಿತ್ತು ಬೆಳೆ ಬೆಳೆಯಬೇಕು,ಪಾಪಿ ದುಡ್ಡು ಪ್ರಾಯಶ್ಚಿತ್ತಕ್ಕಲ್ಲದೆ ಇನ್ಯಾರಿಗೆ ಸಲ್ಲುವುದು ಎಂದು ಅಂದು ಬಸವಣ್ಣನವರು ಹೇಳಿದ್ದು ಸರಿಯಾಗಿ ಇದೆ,ಹೆತ್ತ ಮಕ್ಕಳು ತಂದೆ ತಾಯಿಯವರಿಗೆ ಒಂದು ತುತ್ತು ಅನ್ನ ಹಾಕದೆ ಏನಾದರೇನು ಪ್ರಯೋಜನ?ಮೊನ್ನೆ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ವಿದ್ಯಾವಂತರೇ ಹಣ ಪಡೆದು ಮತ ನೀಡಿದ್ದು ದುರ್ದೈವ,ಅಂಕಗಳು ಪಡೆದರೆ ಸಾಲದು,ಉತ್ತಮ ಸಂಸ್ಕಾರ ಪಡೆದು ಈ ದೇಶದ ಸತ್ಪçಜೆಗಳಾಗಬೇಕು ಎಂದು ಕಾರದ ಮಠದ ಅಧ್ಯಕ್ಷರಾದ ಶ್ರೀ ವೀರಬಸವಸ್ವಾಮೀಜಿಗಳು ತಿಳಿಸಿದರು.
ಅವರು ಇಂದು ಮಲ್ಲಸಂದ್ರದ ಶ್ರೀ ಮಹಾಲಕ್ಷ್ಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ),ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜಾ ಸಮಿತಿ,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಿಂದ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಧರ್ಮಸ್ಥಳದ ಧರ್ಮಾಧಿಕಾರಿಗಳಾ ಡಾ||ಡಿ.ವೀರೇಂದ್ರಹೆಗ್ಗಡೆರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಸಮಾಜಮುಖಿಯಾದದ್ದು,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮಾಜಕ್ಕೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ,ಕೆರೆ ಊಳು ತೆಗೆಯುವುದು,ನಿರ್ಗತಿಕರಿಗೆ ಮಾಸಾಶನ,ಮನೆ ಇಲ್ಲದವರಿಗೆ ವಾತ್ಸಲ್ಯ ಯೋಜನೆ ಅಡಿಯಲ್ಲಿ ಉಚಿತ ಮನೆ,ಶುದ್ಧಗಂಗಾ ಯೋಜನೆ,ಓದುವ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್,ಎಸ್.ಬಿ.ಐ.ಬ್ಯಾಂಕಿನಿಂದ ಕಡಿಮೆ ಬಡ್ಡಿದರಲ್ಲಿ ಸಾಲ ನೀಡುತ್ತಿರುವುದು ಹೀಗೆ ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಿದೆ ಇವುಗಳನ್ನು ಉಪಯೋಗಿಸಿಕೊಂಡು ಸಂಘದ ಸದಸ್ಯರು ಮತ್ತು ಸಾರ್ವಜನಿಕರು ನೆಮ್ಮದಿಯಾಗಿ ಬದುಕಬೇಕು,ಭಾರತದ ಆರ್ಥಿಕತೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡುಗೆ ಅಪಾರವಾದುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಲಕ್ಷ್ಮಣಮೂರ್ತಿ ಉದ್ಘಾಟಿಸಿದರು,ಮಂಜುನಾಥ.ಟಿ.ಅಧ್ಯಕ್ಷತೆ ವಹಿಸಿದ್ದರು,ಮುಖ್ಯ ಅತಿಥಿಗಳಾಗಿ ಆರ್.ಕಾಮರಾಜು, ತಿಮ್ಮನಾಯಕ್.ಎ.ಆರ್, ಲಕ್ಷ್ಮೀನಾಯಾಯಣಸ್ವಾಮಿ, ವಿನಾಯಕ, ಯೋಜನಾಧಿಕಾರಿ ಪಿ.ಬಿ.ಸಂದೇಶ್,ಲಕ್ಷ್ಮಣದಾಸ್, ವರದರಾಜು, ಜಗದೀಶ್, ಚನ್ನಪ್ಪ, ಭಾಗ್ಯಮ್ಮ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ಎನ್.ರಾಘವೇಂದ್ರ, ಸಂಘದ ಮೇಲ್ವಿಚಾರಕರು,ಸೇವಾಪ್ರತಿನಿಧಿಗಳು,ಸಂಘದ ಸದಸ್ಯರು,ಸಾರ್ವಜನಿಕರು,ಊರಿನ ಗ್ರಾಮಸ್ಥರು ಇತರರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
