ತುಮಕೂರು: ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗಲೆಂದು ವಿದ್ಯಾನಿಧಿ ಕಾಲೇಜು ವತಿಯಿಂದ ನೀಡುತ್ತಿರುವ ಗಣಿತ ಮತ್ತು ವಿಜ್ಞಾನ ಮಾರ್ಗದರ್ಶಿ ‘ವಿದ್ಯಾರ್ಥಿ ಮಿತ್ರ’ವನ್ನು ವಿದ್ಯಾವಾಹಿನಿ ಗ್ರೂಪ್ ನ, ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಬಿಡುಗಡೆಗೊಳಿಸಿದರು.
ವಿದ್ಯಾರ್ಥಿಮಿತ್ರವು ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಅಂಕ ಗಳಿಸಲು ಬಹಳ ನೆರವಾಗುತ್ತದೆ ಎಂಬುದಕ್ಕೆ ಈ ಹಿಂದಿನ ಫಲಿತಾಂಶಗಳೇ ಸಾಕ್ಷಿ. ಸಂಸ್ಥೆ ನಡೆಸುವ ವಿ-ಮಾಸ್ಟರ್ ಮೈಂಡ್ ಸ್ಕಾಲರ್ಷಿಪ್ ಪರೀಕ್ಷೆಯಲ್ಲಿ ಮೊದಲಿಗರಾಗುವ ಮಕ್ಕಳೇ ತಮ್ಮ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿಯೂ ಜಿಲ್ಲೆಗೆ ಪ್ರಥಮಸ್ಥಾನ ಪಡೆಯುತ್ತಿದ್ದಾರೆ ಎಂದು ಬಿ.ಪ್ರದೀಪ್ ಕುಮಾರ್ ಹೇಳಿದರು.
ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ಅಧ್ಯಾಯದಿಂದಲೂ ಸಂಭಾವ್ಯ ಪ್ರಶ್ನೆಗಳು ಮತ್ತು ಮಾದರಿ ಪ್ರಶ್ನೆಪತ್ರಿಕೆಗಳು ಈ ಪುಸ್ತಕದಲ್ಲಿವೆ. ಪರಿಣಿತರಿಂದ ರೂಪಿಸಲ್ಪಟ್ಟಿರುವ ಈ ಪುಸ್ತಕವು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಿದ್ದು, ಆಸಕ್ತ ವಿದ್ಯಾರ್ಥಿಗಳು ವಿದ್ಯಾನಿಧಿ ಕಾಲೇಜಿಗೆ ಭೇಟಿಕೊಟ್ಟು ಪಡೆದುಕೊಳ್ಳಬಹುದು.ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಪ್ರೊ.ಎಸ್.ಆರ್.ಸಿದ್ದೇಶ್ವರಸ್ವಾಮಿ,ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7019781264, 9844857419 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
– ಚಂದ್ರಚೂಡ ಕೆ.ಬಿ.
