ತುಮಕೂರು:ಪ್ರೌಢಾವಸ್ಥೆಗೆ ತಲುಪುತ್ತಿರುವ ಶಾಲಾ ಮಕ್ಕಳು ಕೆಟ್ಟ ಹವ್ಯಾಸಗಳಿಂದ ದೂರವಿದ್ದು ಉತ್ತಮ ನಡವಳಿಕೆಯನ್ನು ಅಳವಡಿಸಿಕೊಂಡು ಈ ರಾಷ್ಟçದ ಸತ್ರö್ಪಜೆಗಳಾಗಿ ಬಾಳಬೇಕು,ಯುವಕ-ಯುವತಿಯರು ಈ ದೇಶದ ನಿಜವಾದ ಆಸ್ತಿ ಎಂದು ಡಾ||ಡಿ.ವೀರೇಂದ್ರಹೆಗ್ಗಡೆರವರು ತಿಳಿಸಿದ್ದಾರೆ ಈ ನಿಟ್ಟಿನಲ್ಲಿ ಬೀಡಿ ಸಿಗರೇಟು,ಗಾಂಜಾ,ಅಫೀಮು ಮುಂತಾದ ಮಾದಕ ವಸ್ತುಗಳಿಂದ ದೂರವಿದ್ದು ನಿಮ್ಮ ಜೀವನವನ್ನು ಚೆನ್ನಾಗಿ ರೂಪಿಸಿಕೊಳ್ಳಿ ಎಂದು ಕಾವೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜಿ.ಅಶ್ವಥ್ ರವರು ತಿಳಿಸಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ತುಮಕೂರು ವತಿಯಿಂದ ಆಯೋಜಿಸಿದ್ದ ಶಾಂತಿನಗರದ ಕಾವೇರಿ ಪ್ರೌಢಶಾಲೆಯಲ್ಲಿ ಸ್ವಾಸ್ಥö್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತರು ಮತ್ತು ವಕೀಲರೂ ಆದ ಕೆ.ಬಿ.ಚಂದ್ರಚೂಡರವರು ಮಾತನಾಡುತ್ತಾ ವಿದ್ಯಾರ್ಥಿಗಳು ಇಂದು ಮಾದಕ ವಸ್ತುಗಳ ವ್ಯಸನಕ್ಕೆ ದಾಸರಾಗುತ್ತಿದ್ದಾರೆ,ನಗರದ ತುಂಬೆಲ್ಲ ಗಾಂಜಾ ಮಾರುವ ವ್ಯಕ್ತಿಗಳು ಹೆಚ್ಚಾಗಿದ್ದಾರೆ ಅವರಿಗೆಲ್ಲ ವಿದ್ಯಾರ್ಥಿಗಳೇ ಗಿರಾಕಿಗಳಾಗಿದ್ದಾರೆ,ಚಿಕ್ಕ ವಯಸ್ಸಿನಲ್ಲಿ ಮಾದಕ ವಸ್ತುಗಳಿಗೆ ದಾಸರಾದರೆ ಜೀವನ ಹಾಳಾಗುತ್ತದೆ ವಿದ್ಯಾರ್ಥಿ ಜೀವನವೇ ಸರ್ವನಾಶವಾಗುತ್ತದೆ,ಯಾರೇ ಬಂದು ಬೀಡಿ ಸಿಗರೇಟು,ಮದ್ಯ,ಗಾಂಜಾ ನೀಡಿದರೆ ಅದನ್ನು ನಯವಾಗಿ ತಿರಸ್ಕರಿಸಬೇಕು,ಅಂತಹವನ್ನು ಕಂಡರೆ ತಕ್ಷಣವೇ ಸ್ಥಳೀಯ ಪೋಲೀಸ್ ಠಾಣೆಗೆ ಸುದ್ದಿ ಮುಟ್ಟಿಸಬೇಕು,ಚೆನ್ನಾಗಿ ಓದಿ ಗುರಿಮುಟ್ಟಬೇಕು,ತಂದೆ-ತಾಯಿಗಳು ಕೂಲಿ ಮಾಡಿ ಕಷ್ಟಪಟ್ಟು ನಿಮ್ಮನ್ನು ಓದಿಸುತ್ತಿದ್ದಾರೆ ಉತ್ತಮ ಅಭ್ಯಾಸ ಹವ್ಯಾಸಗಳನ್ನು ಇಟ್ಟುಕೊಂಡು ಮೊಬೈಲ್ ತ್ಯಜಿಸಿ ನಿಮ್ಮ ಗುರಿ ಮುಟ್ಟಬೇಕು,ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಿ,ಕನ್ನಡದ ಜೊತೆ ಎಲ್ಲ ಭಾಷೆಗಳನ್ನು ಕಲಿತು ವಿದ್ಯಾವಂತರಾಗಿ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಶಾಲೆಯ ಸಂಸ್ಥಾಪಕರಾದ ಬೆಟ್ಟಸ್ವಾಮಯ್ಯ, ಸಹ ಶಿಕ್ಷಕರಾದ ಕೃಷ್ಣಪ್ಪ ಎನ್, ಏಕಲವ್ಯ, ಕಮಲ, ವಲಯದ ಮೇಲ್ವಿಚಾರಕರಾದ ಲೋಕೇಶ್.ಎಚ್.ಎಸ್, ಸೇವಾ ಪ್ರತಿನಿಧಿಯವರಾದ ಶ್ರೀಮತಿ ಪ್ರೇಮ ರವರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
