ತುಮಕೂರು:ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಜಿಲ್ಲಾ ವಕೀಲರ ಸಂಘ,ಸ್ವಾಸ್ಥ್ಯ ಹೆಲ್ತ್ ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ನ್ಯಾಯಾಧೀಶರುಗಳಿಗೆ,ವಕೀಲರುಗಳಿಗೆ,ನ್ಯಾಯಾಂಗಸಿಬ್ಬಂದಿ ವರ್ಗದವರಿಗೆ ಉಚಿತ ಕಣ್ಣು ತಪಾಸಣಾ ಶಿಬಿರ,ಬಿಪಿ,ಶುಗರ್,ದಂತ ಪರೀಕ್ಷೆಗಳನ್ನು ತಜ್ಞ ವೈದ್ಯರುಗಳಿಂದ ನಡೆಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿ ಮಹೇಶ್,ಖಜಾಂಚಿ ಶ್ರೀಮತಿ ಸಿಂಧು,ವಕೀಲರಾದ ಡಿ.ಸಿ.ಹಿಮಾನಂದ್, ಶಿವಕುಮಾರ್, ಬಿ.ಆರ್.ರಾಮಕೃಷ್ಣಯ್ಯ, ನರಸಿಂಹಯ್ಯ, ಎಸ್.ಎಂ.ಕೃಷ್ಣಮೂರ್ತಿ,ಹೆಗ್ಗೆರೆ ವಿಜಯ್ ಕುಮಾರ್, ಅಮ್ಮಸಂದ್ರಸೋಮಶೇಖರ್ ಇತರರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
