ತುಮಕೂರು: ವಕೀಲರು ರಂಗಭೂಮಿ ಕಲಾವಿದರಾಗಿ ಕುರುಕ್ಷೇತ್ರ ಎಂಬ ಸುಂದರ ಪೌರಾಣಿಕ ನಾಟಕದಲ್ಲಿ ಅಭಿನಯಿಸುತ್ತಿರುವುದು ನಮಗೆ ಸಂತೋಷ ತಂದಿದೆ, ವಕೀಲರು ಸದಾ ಒತ್ತಡದಲ್ಲಿರುತ್ತಾರೆ, ನ್ಯಾಯಾಲಯ,ಕೇಸು,ಕಕ್ಷಿದಾರರು ಹೀಗೆ ತಮ್ಮ ಕೆಲಸದಲ್ಲಿ ಮುಳುಗಿ ಹೋಗಿರುತ್ತಾರೆ,ಅವರಲ್ಲಿರುವ ಕಲಾ ಸರಸ್ವತಿಯ ಮೂಲಕ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಅಮೋಘ ಅಭಿನಯದ ಮೂಲಕ ಪೇಕ್ಷಕರನ್ನು ರಂಜಿಸುತ್ತಿರುವುದು ಹೆಮ್ಮೆಯ ವಿಚಾರ,ಚಿಕ್ಕಂದಿನಲ್ಲಿಯೇ ರಂಗಭೂಮಿಯ ಹುಚ್ಚು ಕೆಲವರಲ್ಲಿರುತ್ತದೆ,ಆದರೆ ತಮ್ಮ ಕೆಲಸ ಕಾರ್ಯಗಳಲ್ಲಿ ಸದಾ ಮಗ್ನನಾಗಿರುವುದರಿಂದ ಸಮಯ ಸಿಗುವುದಿಲ್ಲ, ಆದರೆ ವಕೀಲರು ತಮ್ಮ ಕರ್ತವ್ಯದ ಮಧ್ಯೆ ಇಂತಹ ಉತ್ತಮ ಪೌರಾಣಿಕ ನಾಟಕವನ್ನು ಆಡುತ್ತಿರುವುದು ಕಲೆಗೆ ಬೆಲೆ ತಂದುಕೊಡುವುದರ ಜೊತೆಗೆ ಕಲಾ ಸರಸ್ವತಿಯನ್ನು ಪೋಷಿಸಿ,ಆರಾಧಿಸುತ್ತಿರುವುದು ಹೆಮ್ಮೆಯ ವಿಚಾರ, ಎಲ್ಲ ವಕೀಲರಿಗೆ ಶುಭವಾಗಲಿ,ನಾಟಕ ಉತ್ತಮವಾಗಿ ಮೂಡಿಬರಲಿ,ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಸೂರೆಗೊಳ್ಳಲಿ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಯಂತಕುಮಾರ್ ರವರು ತಿಳಿಸಿದರು.

ಅವರು ಇಂದುನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶ್ರೀಸಂಕಷ್ಠಹರ ಗಣಪತಿ ವಕೀಲರ ಕಲಾ ಬಳಗ(ರಿ) ಮತ್ತು ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲ ಕಲಾವಿದರು ಅಭಿನಯಿಸುತ್ತಿರುವ ಕುರುಕ್ಷೇತ್ರ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಸಂಕಷ್ಠಹರ ಗಣಪತಿ ವಕೀಲರ ಕಲಾ ಬಳಗ(ರಿ)ದ ಅಧ್ಯಕ್ಷರಾದ ಎಂ.ಸಿ.ಚಂದ್ರಯ್ಯನವರು ಇಂದು ವಕೀಲರೇ ತಂಡ ರಚಿಸಿಕೊಂಡು ತಿಂಗಳುಗಟ್ಟಲೆ ತಯಾರಿ ನಡೆಸಿ ಇಂದು ಕುರುಕ್ಷೇತ್ರ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ,ವಕೀಲರಲ್ಲೂ ಕಲಾ ಸರಸ್ವತಿ ಇದ್ದಾಳೆ,ವಕೀಲರು ಕಲಾ ಪ್ರೇಮಿಗಳು,ಕಲಾ ಪೋಷಕರು,ಕಲೆಗೆ ಬೆಲೆಕೊಡುವವರು ಆದ್ದರಿಂದ ಇಂದು ಕುರುಕ್ಷೇತ್ರ ನಾಟಕದ ಪ್ರದರ್ಶನ ಪ್ರೇಕ್ಷಕರಿಗೆ ರಸದೌತಣ ಸಿಗಲಿದೆ,ಈ ನಾಟಕದಲ್ಲಿ ಉತ್ತಮ ಪಾತ್ರಧಾರಿಗಳು,ಉತ್ತಮ ವಾದ್ಯಗೋಷ್ಠಿ,ಸ್ತ್ರೀ ಪಾತ್ರಧಾರಿಗಳು ಇದ್ದು ಎಲ್ಲರೂ ಉತ್ತಮ ಪಾತ್ರಗಳಲ್ಲಿ ಅಭಿನಯಿಸುತ್ತಿರುವುದು ನಮ್ಮ ಕಲಾಬಳಗಕ್ಕೆ ಹೆಮ್ಮೆ ಇದೆ,ಸಹಸ್ರಾರು ಸಂಖ್ಯೆಯಲ್ಲಿ ಕಲಾ ಪೋಷಕರು,ವಕೀಲರ ಕುಟುಂಬವರ್ಗ,ಕಕ್ಷಿದಾರರು ಆಸೀನರಾಗಿದ್ದು ಅವರೆಲ್ಲರಿಗೂ ನಮ್ಮ ಕಲಾಬಳಗದಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಪ್ರಧಾನ ಹಿರಿಯ ಸಿವಿಲ್ ಮತ್ತು ಸಿಜೆಎಂ ನ್ಯಾಯಾಧೀಶರಾದ ಸುನಿಲ್.ಎಸ್.ಹೊಸಮನಿ,ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಗೌರವಾಧ್ಯಕ್ಷರು ಮತ್ತು ಹಿರಿಯ ವಕೀಲರಾದ ಡಿ.ಶಿವಮಹದೇವಯ್ಯ,ಬಿ.ವಿ.ವಸಂತಕುಮಾರ್,ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಎಂ.ಎನ್.ಮಧುಸೂಧನ್,ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಹಿರೇಹಳ್ಳಿಮಹೇಶ್,ಜಂಟಿಕಾರ್ಯದರ್ಶಿ ಧನಂಜಯ.ಟಿ.ಎಂ, ಖಜಾಂಚಿಸಿಂಧು,ಪಾತ್ರದಾರಿಗಳಾದ ಬಿ.ಸಿ.ಪಾಲಾಕ್ಷಯ್ಯ, ಸಿ.ಸುರೇಶ್ ಕುಮಾರ್, ಡಿ.ಗಂಗಪ್ಪ, ಹೆಚ್.ಕೆ.ರವಿಶಂಕರ್, ಶಿವಶಂಕರಯ್ಯ, ಸಿದ್ದರಾಜು, ಎಂ.ಬಿ.ನವೀನ್, ವಿ.ಆರ್.ವೆಂಕಟೇಶಪ್ಪ, ಆರ್.ಟಿ.ತಿಪ್ಪೇಸ್ವಾಮಿ, ಕುಮಾರ್, ಕೆ.ಎನ್.ಹರೀಶ್,ಕುಮಾರ್(ಆರ್.ಜೆ), ಸಿ.ಜಿ.ಲಕ್ ಶ್, ಭಾರತಿ, ಕೆ.ಸಿ.ವೆಂಕಟೇಶ್ ಇತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
