ತುಮಕೂರು: ತುಮಕೂರು ದಸರಾ ಸಮಿತಿಯ 36ನೇ ವರ್ಷದ 3 ದಿನಗಳ ದಸರಾ ಉತ್ಸವ ಕಾರ್ಯಕ್ರಮಗಳಿಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೋಮವಾರ ಚಾಲನೆ ನೀಡಿದರು.ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಗಣಪತಿ ಪೂಜೆ, ದುರ್ಗಾ ಹೋಮ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ದಸರಾ ಸಮಿತಿ ಅಧ್ಯಕ್ಷ ಬಿ.ಎಸ್.ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಮಹೇಶ್, ಕಾರ್ಯದರ್ಶಿ ಪರಶುರಾಮಯ್ಯ, ಖಜಾಂಚಿ ಜಿ.ಎಸ್.ಬಸವರಾಜು, ಸಂಯೋಜಕ ಕೆ.ಎನ್.ಗೋವಿಂದರಾವ್, ಸಹ ಸಂಯೋಜಕ ಕಿರಣ್, ಸಂಚಾಲಕರಾದ ಗ.ಸಿ.ಶ್ರೀನಿವಾಸಮೂರ್ತಿ, ಮುಖಂಡರಾದ ನಾಗೇಂದ್ರ ಪ್ರಸಾದ್, ಎಂ.ಕೆ. ನಾಗರಾಜರಾವ್,ರೇಖಾ ಶಿವಕುಮಾರ್, ಪದಾಧಿಕಾರಿಗಳಾದ ನಾಗರಾಜ ಶೆಟ್ಟಿ, ಓಂಕಾರೇಶ್ವರಿ, ಕಲ್ಪನಾ ಪ್ರಸಾದ್, ಅನಿತಾರಮೇಶ್, ಮಂಜುಳಾ ಲೋಕೇಶ್, ವಿಜಯರವೀಂದ್ರ, ಚೈತ್ರ ಮಂಜುನಾಥ್, ಶೃತಿ, ಹೆಚ್.ಎಂ. ರವೀಶಯ್ಯ, ವಿಜಯಕುಮಾರ್, ಸಿದ್ಧಗಂಗಯ್ಯ ಮೊದಲಾದವರು ಪೂಜಾಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶ್ರೀರಾಮ ಮಂದಿರದ ಪ್ರಧಾನಅರ್ಚಕರಾದ ಸಂತೋಷ್ಜೀಅವರ ನೇತೃತ್ವದಲ್ಲಿ ಹೋಮ, ಪೂಜಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಸರಾ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಸ್ಪರ್ಧೆ ವಿಜೇತರಿಗೆಆಕರ್ಷಕ ನಗದು ಬಹುಮಾನ ನೀಡಲಾಗುತ್ತಿದೆ.20ರಂದು ಮಧ್ಯಾಹ್ನ 12 ಗಂಟೆಗೆರಂಗಗೀತೆಗಾಯನದರಂಗಮಾಧುರ್ಯ ಸ್ಪರ್ಧೆ, ಮಧ್ಯಾಹ್ನ 3 ಗಂಟೆಗೆ ಭಜನಾ ಸ್ಪರ್ಧೆ, 21ರಂದು ಬೆಳಿಗ್ಗೆ 11.30ಕ್ಕೆ ರಂಗವಲ್ಲಿ ಸ್ಪರ್ಧೆ, ಸಂಜೆ 5 ಗಂಟೆಗೆ ನೃತ್ಯ ವೈಭವ, ರಾತ್ರಿ 8 ಗಂಟೆಗೆದಾಂಡಿಯಾ ಸಾಮೂಹಿಕ ಸಾಂಸ್ಕೃತಿಕ ನೃತ್ಯಕಾರ್ಯಕ್ರಮ ಆಯೋಜಿಸಲಾಗಿದೆ.
21ರಂದು ವಿಜಯದಶಮಿ ಅಂಗವಾಗಿ ಮಧ್ಯಾಹ್ನ 3 ಗಂಟೆಗೆ ಸಾಮೂಹಿಕ ಶಮೀಪೂಜೆ ಏರ್ಪಡಿಸಿದ್ದು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷ್ಮೀಕಾಂತ್, , ದಸರಾ ಸಮಿತಿಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಸಮಿತಿಕಾರ್ಯಾಧ್ಯಕ್ಷಡಾ.ಎಸ್. ಪರಮೇಶ್, ಮೆರವಣಿಗೆ ಸಮಿತಿ ಅಧ್ಯಕ್ಷಕೋರಿ ಮಂಜುನಾಥ್, ನಿಕಟಪೂರ್ವಅಧ್ಯಕ್ಷಡಾ.ಆರ್.ಎಲ್. ರಮೇಶ್ಬಾಬು ಭಾಗವಹಿಸುವರು.
