ತುಮಕೂರು:ಒರಟ ಐ ಲವ್ ಯು ಚಿತ್ರಖ್ಯಾತಿಯ ನಿರ್ದೇಶಕಒರಟ ಶ್ರೀ ನಿರ್ದೇಶಿಸಿರುವ ‘ಶಬರಿ’ ಚಲನಚಿತ್ರ ತಂಡದವರು ಸೋಮವಾರ ಬೆಳಿಗ್ಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.ಅಲ್ಲದೆಡಾ.ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ವೇಳೆ ಶಬರಿಚಿತ್ರದ ಭಿತ್ತಿಪತ್ರ ಬಿಡುಗಡೆ ಮಾಡಿದ ಸ್ವಾಮೀಜಿ, ಇಂದುಮನುಷ್ಯಸಂಬಂಧಗಳ ನಡುವೆ ಕಂದಕಗಳು ನಿರ್ಮಾಣವಾಗಿ ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ.ತಂದೆ-ಮಗಳ ಬಾಂಧವ್ಯದ ಮಹತ್ವ ಹೊಂದಿರುವಕಥೆ ಒಳಗೊಂಡ ಶಬರಿ ಚಿತ್ರವು ಕೌಟುಂಬಿಕ ಸಾಮರಸ್ಯ ಸಾರುವ ಚಿತ್ರವಾಗಿದೆ.ಇವತ್ತಿನ ದಿನಮಾನಾಸಾ ದಲ್ಲಿಜನರಲ್ಲಿ, ಸಮಾಜದಲ್ಲಿಬಾಂಧವ್ಯ ಬೆಸೆಯುವ, ಭಾವೈಕ್ಯತೆಯ ಭಾವನೆ ಬಿತ್ತುವ ಕೆಲಸ ಆಗಬೇಕು.ತಂದೆ-ಮಗಳು, ಗಂಡ-ಹೆಂಡತಿ, ಬಂಧುಬಳಗದ ನಡುವೆ ಬಿರುಕು ಹೆಚ್ಚಾಗುತ್ತಿದೆ. ಸಂಬಂಧಗಳ ನಡುವಿನ ಬಿರುಕು ಹೋಗಲಾಡಿಸಿ ಸೇತುವೆಕಟ್ಟುವ ಮೂಲಕ ಸಮಾಜದ ಪರಿವರ್ತನೆಗೆ ಈ ಚಿತ್ರಕಾರಣವಾಗಲಿ ಎಂದು ಸಿದ್ಧಲಿಂಗ ಸ್ವಾಮೀಜಿ ಹಾರೈಸಿದರು.
ಶಬರಿಚಿತ್ರ ನಿರ್ದೇಶಕಒರಟ ಶ್ರೀ, ಕನ್ನಡ ಸೇನೆ ಜಿಲ್ಲಾಧ್ಯಕ್ಷಡಾ.ಧನಿಯಾಕುಮಾರ್, ಶಬರಿ ಪಾತ್ರದಲ್ಲಿ ಅಭಿನಯಿಸಿರುವ ಕಲರ್ಸ್ಕನ್ನಡ ವಾಹಿನಿಯ ‘ರಾಣಿ’ ಧಾರಾವಾಹಿಯರಾಣಿ ಪಾತ್ರಧಾರಿ ಧನ್ವಿ, ಚಿತ್ರದ ನಾಯಕ ಸಮರ್ಥ್, ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿರುವ ಯೋಗೀಶ್ ವೀರ್ ಮೊದಲಾದವರು ಈ ವೇಳೆ ಹಾಜರಿದ್ದರು.
ಬರವಿ ಫಿಲಂ ಬ್ಯಾನರ್ಅಡಿಯಲ್ಲಿ ಶಬರಿಚಿತ್ರ ನಿರ್ಮಾಣವಾಗಿದ್ದು, ರಮೇಶ್, ಸುಧಾಕರರೆಡ್ಡಿ, ವಿಷ್ಣುಕಾಂತ್ಚಿತ್ರ ನಿರ್ಮಾಣ ಮಾಡಿದ್ದಾರೆ.ಈ ತಿಂಗಳ 23ರಂದು ಶಬರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ,ಎಲ್ಲರೂ ಥಿಯೇಟರ್ ಗೆ ಬಂದು ಚಲನಚಿತ್ರ ವೀಕ್ಷಿಸಿ ಆಶೀರ್ವದಿಸಿ ಎಂದು ನಿರ್ದೇಶಕರು ಮನವಿ ಮಾಡಿದರು.
ವರದಿ : ಕೆ ಬಿ ಚಂದ್ರಚೂಡ್
