ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್.(ರಿ) ತುಮಕೂರು (ತಾ) ಹೊನ್ನುಡಿಕೆ ವಲಯದ ಹೊಳಕಲ್ಲು ಕಾರ್ಯಕ್ಷೇತ್ರದ, ಕಾಳಿಂಗಯ್ಯನ ಪಾಳ್ಯ ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀಧರ್ಮಸ್ಥಳ ಕ್ಷೇತ್ರದಿಂದ ಮಂಜೂರಾದಂತಹ 1,50,000/- (ಒಂದು ಲಕ್ಷದ ಐವತ್ತು ಸಾವಿರ ರೂಗಳು) ಮೊತ್ತದ ಡಿಡಿ ವಿತರಣೆಯನ್ನು ತಾಲ್ಲೋಕು ಯೋಜನಾಧಿಕಾರಿಗಳಾದ ಪ್ರಭಾಕರ್ರಾಮ್ ನಾಯಕ್ ರವರು ದೇವಾಲಯದ ಕಮಿಟಿಯ ಅಧ್ಯಕ್ಷರಾದ ಎಂ.ಮುದ್ದಯ್ಯರವರಿಗೆ ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಕಮಿಟಿಯ ಸದಸ್ಯರು, ಸಂತೋಷ್,ಸುರೇಶ್,ನಾಗರಾಜು,ರಮೇಶ್, ಮಂಜುನಾಥ್ ವಲಯದ ಮೇಲ್ವಿಚಾರಕರಾದ ಕುಮಾರಿತನುಜಾ, ಸೇವಾಪ್ರತಿನಿಧಿ ಶಾರದಾ, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
