ತುಮಕೂರು: ವಿದ್ಯಾರ್ಥಿಗಳು ಪಡೆದ ಅಂಕಗಳಿಗಿಂತಲೂ ಅವರ ಎರಡು ವರ್ಷಗಳ ಶ್ರದ್ಧಾಪೂರ್ವಕ ಅಧ್ಯಯನ ಮತ್ತು ಪರಿಶ್ರಮವನ್ನು ಗೌರವಿಸಬೇಕು ಎಂದು ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ.ಪ್ರದೀಪ್ ಕುಮಾರ್ ಹೇಳಿದರು.
ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ಹಾಗೂ ಅತ್ಯುನ್ನತಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದಕ್ಕಾಗಿ ನಗರದ ಗಂಗಾಧರಯ್ಯ ಸ್ಮಾರಕಭವನದಲ್ಲಿ ವಿದ್ಯಾನಿಧಿ ಕಾಲೇಜು ವತಿಯಿಂದ ಆಯೋಜಿಸಲಾದ “ನಮ್ಮ ವಿದ್ಯಾರ್ಥಿ–ನಮ್ಮ ಹೆಮ್ಮೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಪೋಷಕರು, ಶಿಕ್ಷಕರು ಮತ್ತು ಸಂಸ್ಥೆಯ ನಿರಂತರ ಬೆಂಬಲವೇ ಕಾರಣ. ಇಂದಿನ ವಿದ್ಯಾರ್ಥಿಗಳ ಯಶಸ್ಸು ನಾಳಿನ ಸಮಾಜದ ಪ್ರಗತಿಗೆ ದಾರಿ ದೀಪವಾಗಿದ್ದು, ಸಾಧನೆಯ ಹಾದಿಯಲ್ಲಿ ಅವರು ಇನ್ನಷ್ಟು ಎತ್ತರಕ್ಕೆ ಏರಬೇಕೆಂದು ಪ್ರದೀಪ್ ಕುಮಾರ್ ಶುಭ ಹಾರೈಸಿದರು.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳಾದ ಹರ್ಷಿತಾ.ಎಸ್, ರೋಹನ್.ಎಂ. ನಂದಶ್ರೀ, ಪೂರ್ವಿ.ಪಿ., ಸಂಜನಾ.ಎಲ್.,ಜೆಇಇಯಲ್ಲಿ ಎಐಆರ್ 57ನೇ ರ್ಯಾಂಕ್ ವಿಜೇತೆ ಗಿರಿಜಾ.ಎನ್. ಮತ್ತು ಸಿಯಟಿಯಲ್ಲಿ 77ನೇ ರ್ಯಾಂಕ್ ಪಡೆದ ಯಶಸ್.ಎಸ್. ಶಶಾಂಕ್ ಡಿ.ಕೆ., ರಚನಾ.ಎಸ್, ನಿಹಾರಿಕಾ, ಯಶವಂತ್ ಎನ್.ಎಸ್, ಗೌತಮಿ.ಬಿ.ಎಲ್, ಕೃತಿಕಾ.ಎಂ.ಎ ಮತ್ತು ಸಿಂಚನಾ.ಎಚ್ ಅವರಿಗೆ ಟ್ಯಾಬ್ ಗಳನ್ನು ಕೊಟ್ಟು ಅಭಿನಂದಿಸಲಾಯಿತು. ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಒಟ್ಟು 708 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ವಿದ್ಯಾವಾಹಿನಿ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಅಧ್ಯಕ್ಷ ಕೆ.ಬಿ.ಜಯಣ್ಣ, ವಿದ್ಯಾನಿಧಿ ಪ್ರಾಂಶುಪಾಲರಾದ ಎಸ್.ಆರ್.ಸಿದ್ಧೇಶ್ವರಸ್ವಾಮಿ, ಸುಬ್ರಹ್ಮಣ್ಯ, ವೇದಮೂರ್ತಿ ಮತ್ತು ವಿಜ್ಞಾನ, ವಾಣಿಜ್ಯ ವಿಭಾಗಗಳ ಸಂಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ.
