ತುಮಕೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನಲೆಯಲ್ಲಿ ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ನೇತೃತ್ವದಲ್ಲಿ ನಗರದ ರಾಜಬೀದಿಗಳಲ್ಲಿ ಆರ್.ಎಸ್.ಎಸ್.ಪಥ ಸಂಚಲನ ನಡೆಯಿತು.
ಹಿರಿಯರು,ಮಹಿಳೆಯರು,ಮಕ್ಕಳಿಂದ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಭಾರತ ಮಾತೆಗೆ ಜೈ ಎಂದು ಘೋಷಣೆ ಕೂಗುತ್ತಾ ಭಾರತಮಾತೆಗೆ ಹೂವಿನ ಮಳೆಗೆರೆದರು.
ಇದನ್ನು ಓದು: ತುಮಕೂರಿನ ವಾಸನ್ ಐ ಕೇರ್ನಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ನೇತ್ರ ಪರೀಕ್ಷಾ ಶಿಬಿರ : ಡಾ.ಸ್ಮಿತಾ
ನಗರದ ಬೀದಿಗಳಲ್ಲಿ ಮಹಿಳೆಯರಿಂದ ರಸ್ತೆಗೆ ನೀರು ಹಾಕಿ ಸ್ವಚ್ಛಗೊಳಿಸಿ ಹೂವಿನ ಅಲಂಕಾರ,ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸ್ವಯಂ ಸೇವಕರನ್ನು ಬರಮಾಡಿಕೊಂಡರು.ಸಾವಿರಾರು ಸ್ವಯಂಸೇವಕರು ಗಣವೇಷ ತೊಟ್ಟು ಪಥ ಸಂಚಲನದಲ್ಲಿ ಪಾಲ್ಗೊಂಡರು.

ಹೈಸ್ಕೂಲ್ ಮೈದಾನದಿಂದ,ಬಿ.ಹೆಚ್.ರಸ್ತೆ,ಎಂ.ಜಿ.ರಸ್ತೆ ಸೇರಿದಂತೆ ನಗರದ ರಸ್ತೆಗಳಲ್ಲಿ ಭಾರತ ಮಾತೆ ಫೋಟೋದೊಂದಿಗೆ ಪಥಸಂಚಲನ ಸಾಗಿತು.
ಚಿಕ್ಕ ಮಕ್ಕಳು,ಶಾಲಾ ಮಕ್ಕಳು,ಯುವಕರು,ಕಾಲೇಜು ವಿದ್ಯಾರ್ಥಿಗಳು,ಹಿರಿಯ ನಾಗರೀಕರು ಸೇರಿದಂತೆ ಎಲ್ಲರೂ ಗಣವೇಷ ತೊಟ್ಟು ಪಥ ಸಂಚಲನದಲ್ಲಿ ಭಾಗಿಯಾದರು.
– ಕೆ.ಬಿ.ಚಂದ್ರಚೂಡ
