ತುಮಕೂರು- ವೀರಶೈವರು ಬೇರೆ ಅಲ್ಲ ಲಿಂಗಾಯಿತರು ಬೇರೆ ಅಲ್ಲ ಎಲ್ಲರೂ ಒಂದೇ, ಸಮಾಜದ ಎಲ್ಲರೂ ಸಂಘಟಿತರಾಗಿ ವೀರಶೈವಲಿಂಗಾಯಿತ ಧರ್ಮವನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ,ತಾಯಂದಿರು ಮಕ್ಕಳಿಗೆ ವೀರಶೈವ ಧರ್ಮದ ಬಗ್ಗೆ ನಮ್ಮ ಧರ್ಮದ ಪೂರ್ವಜರ ಬಗ್ಗೆ ಧರ್ಮ ಸಂಸ್ಥಾಪಕರ ಬಗ್ಗೆ,ವಚನಕಾರರ ಬಗ್ಗೆ,ಮಠದ ಸ್ವಾಮೀಜಿಗಳ ಬಗ್ಗೆ,ಆಚಾರ ವಿಚಾರಗಳು,ಶಿವಪೂಜಾ ವಿಧಿವಿಧಾನಗಳ ಬಗ್ಗೆ ತಿಳಿಹೇಳಬೇಕು ಆಗ ಮಕ್ಕಳಲ್ಲಿ ಧರ್ಮದ ಬಗ್ಗೆ ಜಾಗೃತಿ ಹೆಚ್ಚಿ ಉತ್ತಮ ಸಂಸ್ಕಾರವಂತರಾಗುತ್ತಾರೆ,ಧರ್ಮಕ್ಕಾಗಿ ತನು,ಮನ,ಧನ ಅರ್ಪಿಸಿದಾಗ ಧರ್ಮ ಉಳಿಯುತ್ತದೆ,ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದಂತೆ ನಡೆಯಬೇಕು,ಪೂಜ್ಯರು ಹಾಕಿಕೊಟ್ಟ ಮಾರ್ಗದರ್ಶನದಂತೆ ನಡೆದಾಗ ಸಮಾಜದಲ್ಲಿ ಶಾಂತಿ ಮೂಡಿ ಭಾವೈಕ್ಯತೆ ಮೂಡುತ್ತದೆ ಎಂದು ಎಸ್.ಆರ್.ಶಿವಶಂಕರ್ ಹೇಳಿದರು.
ಅವರು ನಗರದ ಶೆಟ್ಟಿಹಳ್ಳಿ ಮುಖ್ಯರಸ್ತೆ ಜಯನಗರ ಪಶ್ಚಿಮ ಬಡಾವಣೆಯ ಕಿಡ್ಸ್ ಕಾಲೋನಿ ಸ್ಕೂಲ್ ಆವರಣದಲ್ಲಿ ನಡೆದ ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿ(ರಿ)ಯ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಎಸ್.ವೀರಪ್ಪದೇವರು ಮಾತನಾಡುತ್ತಾ ನಗರದಲ್ಲಿ ವೀರಶೈವರು ಸಂಘಟಿತರಾಗಬೇಕು, ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿಗೆ ಎಲ್ಲರೂ ಸದಸ್ಯರಾಗಬೇಕು,ಮನೆಮನೆಗಳಲ್ಲಿ ವಚನಸಾಹಿತ್ಯ,ವಚನಕಾರರ ಬಗ್ಗೆ ವೀರಶೈವಧರ್ಮದ ಬಗ್ಗೆ ಉಪನ್ಯಾಸಗಳು ನಡೆಯಬೇಕು,ನಮ್ಮ ಸಮಿತಿಯಿಂದ ಪ್ರತಿ ಸೋಮವಾರ ಈ ರೀತಿಯ ಕಾರ್ಯಕ್ರಮಗಳನ್ನು ಮಾಡಲಿದ್ದೇವೆ,ಎಲ್ಲರೂ ಒಗ್ಗೂಡಿ ಧರ್ಮವನ್ನು ಉಳಿಸಿ,ವೀರಶೈವರಲ್ಲಿ ಉತ್ತಮ ಅಧಿಕಾರಿಗಳಿದ್ದಾರೆ, ವಕೀಲರು, ನ್ಯಾಯಾಧೀಶರು, ವೈದ್ಯರು, ಕೈಗಾರಿಕೋದ್ಯಮಿಗಳು,ಲೆಕ್ಕಪರಿಶೋಧಕರು ಇದ್ದಾರೆ ಎಲ್ಲರೂ ಸಮಾಜಕ್ಕಾಗಿ,ಸಮಾಜದ ಅಭ್ಯುದಯಕ್ಕಾಗಿ ತನು-ಮನ-ಧನ ಅರ್ಪಿಸಿ ಎಂದು ಮನವಿ ಮಾಡಿದರು.

ಸಮಿತಿಯ ಖಜಾಂಚಿಯಾದ ಶಾಂತರಾಜುರವರು ಮಾತನಾಡುತ್ತಾ ಸಮಿತಿಯ ಸದಸ್ಯತ್ವ ಶುಲ್ಕವನ್ನು ತುಮಕೂರು ವೀರಶೈವ ಸಹಕಾರ ಬ್ಯಾಂಕ್ ನಲ್ಲಿ ಚಾಲ್ತಿ ಖಾತೆಯಲ್ಲಿ ಇಡಲಾಗಿದೆ,ಸದಸ್ಯತ್ವದ ಶುಲ್ಕವನ್ನು ಹಾಗೆಯೇ ಇಟ್ಟು ಕಾರ್ಯಕ್ರಮಗಳಿಗೆ ದೇಣಿಗೆ ರೂಪದಲ್ಲಿ ಕೊಟ್ಟಾಗ ಸಮಿತಿಗೆ ಮೂಲಬಂಡವಾಳವಾಗುತ್ತದೆ, ಎಲ್ಲರೂ ಸಮಿತಿಗೆ ಸದಸ್ಯತ್ವದ ಶುಲ್ಕದ ಜೊತೆಗೆ ದೇಣಿಗೆಯನ್ನು ನೀಡಿ,ನಮ್ಮ ಸಮಿತಿಯಿಂದ ಮುಂದೆ ಉಚಿತ ಆರೋಗ್ಯಶಿಬಿರ,ನೇತ್ರ ಪರೀಕ್ಷೆ,ದಂತಪರೀಕ್ಷೆ,ರಕ್ತದಾನಶಿಬಿರ,ಸಮಾಜದ ಮಕ್ಕಳು ಉನ್ನತ ಶಿಕ್ಷಣದಲ್ಲಿ ಸಾಧಿಸಿದರೆ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು,ಅದರಂತೆ ನಮ್ಮ ಸಮಾಜದ ವಕೀಲರು, ನ್ಯಾಯಾಧೀಶರು, ಲೆಕ್ಕಪರಿಶೋಧಕರು, ಕೈಗಾರಿಕೋದ್ಯಮಿಗಳನ್ನು ಸಹ ಸನ್ಮಾನಿಸಿ ಗೌರವಿಸಲಾಗುವುದು ಆದ್ದರಿಂದ ಎಲ್ಲರೂ ಈ ಕಾರ್ಯಕ್ಕೆ ಕೈಜೋಡಿಸಿ ವೀರಶೈವ ಸಮಿತಿಗೆ ಆಶೀರ್ವದಿಸಿ ಮುನ್ನೆಡೆಸಿರಿ ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ರೇಣುಕಪ್ರಸನ್ನ, ಡಾ||ವಿ.ಆರ್.ಮಂಜಣ್ಣ, ಶಿವಶಂಕರ್, ಶಂಕರಪ್ಪ, ಪ್ರೇಮಾರಾಧ್ಯ, ಮೃತ್ಯುಂಜಯಪ್ಪ, ಹೆಚ್.ಎಂ.ರವೀಶಯ್ಯ,ಲತಾಸುರೇಶ್ ಮುಂತಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
