ನಂತರ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳನ್ನು ವಿಚಾರಿಸಿ ಅವರ ಸಮಸ್ಯೆಗಳನ್ನು ಆಲಿಸಿದರು, ಇಷ್ಟು ವರ್ಷ ಪೂಜ್ಯರ ಬಗ್ಗೆ ಕೇಳಿದ್ದು ಹಾಗೂ ವೃತ್ತ ಪತ್ರಿಕೆಗಳಲ್ಲಿ ಅವಲೋಕಿಸಿದ್ದು ಇಂದು ಸ್ವತಃ ಕಣ್ಣಾರೆ ಈ ಬೃಹತ್ ಆಸ್ಪತ್ರೆಯನ್ನು ಕಂಡು ಆಶ್ಚರ್ಯಚಕಿತರಾದರು, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೂ ಭೇಟಿಯಿತ್ತರು, ಆಸ್ಪತ್ರೆಗೆ ಪ್ರತಿ ದಿನ 300ಕ್ಕೂ ಮಿಗಿಲಾದ ರೋಗಿಗಳು ನಾನಾ ರೀತಿಯ ಚಿಕಿತ್ಸೆಗಾಗಿ ಬರುತ್ತಿರುವುದನ್ನು ಅರಿತು ದಿಗ್ಭ್ರಾಂತರಾದರು, ಪ್ರತಿ ದಿನ ದಾಸೋಹ, ಒಳರೋಗಿಗಳಿಗೆ ಊಟೋಪಚಾರಗಳು, ಔಷಧೋಪಚಾರಗಳು ಇತ್ಯಾದಿಗಳನ್ನು ಉಚಿತವಾಗಿ ನೀಡುತ್ತಿರುವ ಈ ಆಸ್ಪತ್ರೆ ಮುಂದೆ ವಿಶ್ವ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದರು.
ಈವರೆವಿಗೆ ಸರಿಸುಮಾರು ಎಂಟು ಲಕ್ಷಕ್ಕೂ ಮೀರಿದ ಹೊರ ರೋಗಿಗಳು, 45000ಕ್ಕೂ ಮಿಗಿಲಾದ ಒಳರೋಗಿಗಳು, 50000 ವನ್ನು ದಾಟಿದ ನೇತ್ರ ಶಸ್ತç ಚಿಕಿತ್ಸೆಗಳು, 15000ಕ್ಕೂ ಮಿಗಿಲಾದ ಕ್ಷಯರೋಗಿಗಳು, 3900ಕ್ಕೂ ಮಿಗಿಲಾದ ಕುಷ್ಠ ರೋಗಿಗಳು ಮತ್ತು ನೂರಾರು ಶ್ರವಣ ಸಾಧನಗಳು, ಕನ್ನಡಕಗಳು, ಹಾಗೂ ಅನೇಕಾನೇಕ ಸಮಾಜಪರ ಯೋಜನೆಗಳನ್ನು ಕೈಗೊಂಡಿರುವ ಈ ಸಂಸ್ಥೆಗೆ ತಾವು ಭೇಟಿ ನೀಡಿದ್ದು ತಮ್ಮ ಪುಣ್ಯ ಎಂದು ಸಚಿವರು ಭಾವುಕರಾಗಿ ವಿವರಿಸಿದರು.
– ಚಂದ್ರಚೂಡ ಬಿ.ಕೆ
