ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಯೋಜನೆಯ ಮನೆಗೊಂದು ಗ್ರಂಥಾಲಯ ಜಾಗೃತಾ ಸಮಿತಿ ಹಾಸನ ಜಿಲ್ಲೆ ಸಂಚಾಲಕರಾಗಿ ಹಾಸನದ ಸಾಹಿತಿ ಶ್ರೀ ಗೊರೂರು ಅನಂತರಾಜು ಅವರನ್ನು ಆಯ್ಕೆ ಮಾಡಿ ಹಾಸನದಲ್ಲಿ ಇತ್ತೀಚಿಗೆ ಲೇಖಕರು ವಿಶ್ವಾಸ ಡಿ. ಗೌಡ ಇವರ ನಿವಾಸದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಮತ್ತು ಪ್ರಾದ್ಯಾಪಕರು ಡಾ. ಕುಶಾಲ್ ಬರಗೂರು ಅರ್ಹತಾ ಪತ್ರ ವಿತರಣೆ ಮಾಡಿ ಶುಭ ಹಾರೈಸಿದರು.
ಇದೇ ಸಂದಭ೯ ಮನೆಗೊಂದು ಗ್ರಂಥಾಲಯ ಜಾಗೃತ ಸಮಿತಿ ಸದಸ್ಯರಾಗಿ ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ, ಸುಂದರೇಶ್ ಡಿ. ಉಡುವಾರೆ, ಪರಮೇಶ್ ಬಿ. ಅರಸೀಕೆರೆ, ಚಿನ್ನೇನಹಳ್ಳಿ ಸ್ವಾಮಿ ಇವರುಗಳಿಗೆ ಅರ್ಹತಾ ಪತ್ರವನ್ನು ಡಾ. ಕುಶಾಲ್ ಬರಗೂರು ವಿತರಣೆ ಮಾಡಿ ಸಮಿತಿಯು ಮುಂದಿನ ದಿನಗಳಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಯಶಸ್ಸಿಯಾಗಿ ಮುನ್ನೆಡಸಬೇಕೆಂದು ಆಶಿಸಿ ಶುಭ ಹಾರೈಸಿದರು.
ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ನಿರಂತರ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀ ಗೊರೂರು ಅನಂತರಾಜು ಅವರು ಕರ್ನಾಟಕ ರಾಜ್ಯ ಬರಹಗಾರರ ಸಂಘದ ಗೌರವ ಅಧ್ಯಕ್ಷರಾಗಿದ್ದಾರೆ.
ಇವರ ಸಲಹೆ ಮಾರ್ಗದರ್ಶನದಲ್ಲಿ ಸಂಘವು ರಾಜ್ಯಾದ್ಯಂತ ಸಂಘಟನೆ ವಿಸ್ತಾರಗೊಂಡು ಯಶಸ್ವಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ. ಜ್ಞಾನ ಪ್ರಸಾರ, ಓದುಗರಲ್ಲಿ ಪುಸ್ತಕ ಪ್ರೇಮ ಬೆಳೆಸುವ ಕಾರ್ಯಕ್ರಮ ತುಂಬಾ ಮಹತ್ವದ್ದಾಗಿದೆ. ಮನೆ ಮನೆಗಳಲ್ಲಿ ಗ್ರಂಥಾಲಯಗಳ ಬೆಳವಣಿಗೆಗೆ ಪ್ರೋತ್ಸಾಹಿಸಿ ಅಭಿನಂದಿಸುವುದು ಶ್ಲಾಘನೀಯ ಕಾರ್ಯವಾಗಿದೆ. ಲೇಖಕರ ಮನೆಗಳಲ್ಲಿ ಅವರ ಪುಸ್ತಕದ ಬಗ್ಗೆ ವಿಮರ್ಶಕರಿಂದ ವಿಮರ್ಶೆ ಮಾಡಿಸುವುದು ಉತ್ತಮ ಕಲ್ಪನೆಯಾಗಿದೆ.
ಗೊರೂರು ಅನಂತರಾಜು ಅವರು ಸಾಹಿತ್ಯ ಮತ್ತು ಸಾoಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲ ವ್ಯಕ್ತಿತ್ವವುಳ್ಳವರಾಗಿ ಇವರ ಪುಸ್ತಕ ಪ್ರೀತಿ ಜನತೆಯ ಮನಸ್ಸು ಪುಸ್ತಕ ಓದಿನತ್ತಾ ಸೆಳೆಯುವಲ್ಲಿ ಫಲಪ್ರದವಾಗಲಿ ಎಂದು ಶುಭ ಹಾರೈಸುತ್ತೇನೆ.
ಮಧುನಾಯ್ಕ.ಲಂಬಾಣಿ
ಸಂಸ್ಥಾಪಕ ಅಧ್ಯಕ್ಷರು,
ಕರ್ನಾಟಕ ರಾಜ್ಯ ಬರಹಗಾರರ ಸಂಘ,ಹೂವಿನ ಹಡಗಲಿ.
