ಕೊರಟಗೆರೆ:- ಕೊರಟಗೆರೆಯ ಸುಭಾಷ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಲಿತಾಂಶ ದಾಖಲಿಸಿ ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೈದಿದ್ದು. ಈ ಸಾಧನೆಯ ವಿಶೇಷತೆ ಎಂದರೆ, ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿ ಶೇಕಡಾ 95ರಷ್ಟು ಮಂದಿ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದವರು ಹಾಗೂ ಎಲ್ಲರೂ ಗ್ರಾಮೀಣ ಹಿನ್ನೆಲೆಯವರಾಗಿರುವುದು.
ಈ ಕಾಲೇಜಿನಲ್ಲಿ ಕೇವಲ ವಿಜ್ಞಾನ ವಿಭಾಗ (PCMB) ಮಾತ್ರ ಬೋಧಿಸಲಾಗುತ್ತಿದ್ದು. ಗ್ರಾಮೀಣ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು, ತಾರ್ಕಿಕ ಚಿಂತನೆಗೆ ಪ್ರೇರೇಪಿಸುವುದು ಹಾಗೂ ಕ್ರಾಂತಿಕಾರಿ ಆಲೋಚನೆಗಳನ್ನು ರೂಪಿಸುವುದು ಈ ಸಂಸ್ಥೆಯ ಮಹೋನ್ನತ ಧ್ಯೇಯವಾಗಿದ್ದು. “ಈ ಪ್ರಪಂಚದಲ್ಲಿ ವಿಜ್ಞಾನದಿಂದ ಮಾತ್ರವೇ ಅಭಿವೃದ್ಧಿ ಸಾಧ್ಯ” ಎಂಬ ದೃಢ ನಂಬಿಕೆಯನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕಾರ್ಯವನ್ನು ಈ ಕಾಲೇಜು ಸಮರ್ಪಕವಾಗಿ ನಿರ್ವಹಿಸುತ್ತಿದೆ.
ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ತಮ್ಮ ಸಂಪೂರ್ಣ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಾತೃಭಾಷೆಯಾದ ಕನ್ನಡ ಮಾಧ್ಯಮದಲ್ಲೇ ಪೂರ್ಣಗೊಳಿಸಿರುವುದರಿಂದ, ಅವರಿಗೆ ವಿಜ್ಞಾನವನ್ನು ಸುಲಭವಾಗಿ, ಸ್ಪಷ್ಟವಾಗಿ ಹಾಗೂ ಆಳವಾಗಿ ಅರ್ಥಮಾಡಿಕೊಳ್ಳುವಂತೆ ವಿಶೇಷ ತರಬೇತಿ ನೀಡಲಾಗುತ್ತಿದ್ದು. “ವಿಜ್ಞಾನವೆಂದರೆ ಕೇವಲ ವಿಷಯವಲ್ಲ ಅದು ಬದುಕನ್ನು ನೋಡುವ ದೃಷ್ಟಿಕೋನ”
ಎಂಬ ಮೌಲ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲಾಗುತ್ತಿದ್ದು. ವಿಜ್ಞಾನದ ಸವಿಯನ್ನು ಅನುಭವಾತ್ಮಕವಾಗಿ ಪರಿಚಯಿಸಿ, ಕಲಿಕೆಯನ್ನು ಆಸಕ್ತಿದಾಯಕ ಹಾಗೂ ಅರ್ಥಪೂರ್ಣವಾಗಿಸುವಲ್ಲಿ ಕಾಲೇಜು ಯಶಸ್ವಿಯಾಗಿದೆ.
ಸುಭಾಷ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿನ ಬಜ್ಜನಹಳ್ಳಿ ಗ್ರಾಮದ ಅಮೂಲ್ಯ ಎಸ್ 570 ಅಂಕ ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾಳೆ, ಕುರುಬರಹಳ್ಳಿ ಗ್ರಾಮದ ಶ್ರೀವತ್ಸ 556 ಅಂಕ ಪಡೆದುಕೊಂಡು (ಕನ್ನಡ ವಿಷಯದಲ್ಲಿ 100/100) ಅಂಕ ಪಡೆದುಕೊಂಡು ದ್ವಿತೀಯ ರ್ಯಾಂಕ್ ಪಡೆದುಕೊಂಡಿದ್ದಾನೆ, ಶಕುನಿತಿಮ್ಮನಹಳ್ಳಿ ಗ್ರಾಮದ ಸುಭಾಷ್ ಎಸ್ ಜಿ 555 ಅಂಕ ಪಡೆದುಕೊಂಡು ತೃತೀಯ ರ್ಯಾಂಕ್ ಪಡೆದುಕೊಂಡಿದ್ದಾರೆ ಹಾಗೂ ಇನ್ನುಳಿದ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸಿ ಕಾಲೇಜಿನ ಕೀರ್ತಿಯನ್ನು ಗಗನಕ್ಕೇರಿಸಿದ್ದಾರೆ. ಇವರ ಸಾಧನೆ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಲ್ಲಿಯೂ ಅಪಾರ ಸಾಮರ್ಥ್ಯ ಅಡಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
ಸುಭಾಷ್ ಪದವಿ ಪೂರ್ವ ಕಾಲೇಜಿಗೆ ಶೇಕಡ 100/100 ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ನಿರ್ಮಲ ಗಂಗರಾಜು ಹಾಗೂ ಸಂಸ್ಥಾಪಕರಾದ ಗಂಗರಾಜು, ಉಪನ್ಯಾಸಕರುಗಳು ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸಿ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ
