ಬೆಂಗಳೂರು: 2021ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಕಟವಾದ 402 ಪೊಲೀಸ್ ಉಪನಿರೀಕ್ಷಕರ (PSI) ನೇಮಕಾತಿ ಅಧಿಸೂಚನೆಯ ನಂತರ ಈಗಾಗಲೇ ನಾಲ್ಕು ವರ್ಷಗಳು ಕಳೆದಿವೆ. ಪರೀಕ್ಷೆ 2024 ಅಕ್ಟೋಬರ್ 3ರಂದು ನಡೆಯಿತು ಮತ್ತು ಫಲಿತಾಂಶ 2024 ಡಿಸೆಂಬರ್ 26ರಂದು ಪ್ರಕಟವಾಗಿದ್ದರೂ ಸಹ, ನೇಮಕಾತಿಗೆ ಸಂಬಂಧಿಸಿದ ಅಂತಿಮ ಆದೇಶಪ್ರತಿ ಇನ್ನೂ ಬಿಡುಗಡೆ ಆಗಿಲ್ಲ ಎಂಬುದು ಅಭ್ಯರ್ಥಿಗಳ ಅಕ್ಷೇಪಿಸಿ ಇಂದು ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ನಡೆಸಿದರು.
ಪರೀಕ್ಷೆ, ಪರಿಶೀಲನೆ, ವೈದ್ಯಕೀಯ ಎಲ್ಲ ಮುಗಿದರೂ ನಿರೀಕ್ಷೆ ಮುಂದುವರಿಕೆ
ಅಭ್ಯರ್ಥಿಗಳ ದಾಖಲೆ ಪರಿಶೀಲನೆ, ವೈದ್ಯಕೀಯ ತಪಾಸಣೆ, ಹಾಗೂ ಹಿಂದೂತ್ವ ಪ್ರಮಾಣ ಪತ್ರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ ಕಳೆದ ಏಳು ತಿಂಗಳುಗಳಿಂದ ಅವರು ಗೃಹ ಮಂತ್ರಿಗಳ ಮತ್ತು ವಿವಿಧ ಅಧಿಕಾರಿಗಳ ಕಚೇರಿಗಳ ಮಧ್ಯೆ ಸುತ್ತಾಡುತ್ತಲೇ ಇದ್ದಾರೆ. ಮಂತ್ರಿಗಳು ಪ್ರತಿ ಬಾರಿ “ಇನ್ನೊಂದು ವಾರ”, “ಇನ್ನೊಂದು 15 ದಿನಗಳಲ್ಲಿ ಆದೇಶ” ಎಂಬ ಭರವಸೆಯನ್ನಷ್ಟೆ ನೀಡುತ್ತಿದ್ದಾರೆ. ಆದರೆ ಯಾವುದೇ ದೃಢವಾದ ಕ್ರಮಗಳು ಇನ್ನೂ ಕೈಗೆ ಬಂದಿಲ್ಲ.
ಕಲ್ಯಾಣ ಕರ್ನಾಟಕದ 21 ಹುದ್ದೆಗಳ ಫೈನಲ್ ಲಿಸ್ಟ್ ಕೂಡ ಸ್ಥಗಿತ
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಹೊಂದಿರುವ 21 ಹುದ್ದೆಗಳ ಅಂತಿಮ ಆಯ್ಕೆ ಪಟ್ಟಿಯೂ ಇನ್ನೂ ಪ್ರಕಟವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳು ವಿವಿಧ ನೆಪಗಳನ್ನು ಮುಂದಿಟ್ಟುಕೊಳ್ಳುತ್ತಲೇ ಪ್ರಕ್ರಿಯೆ ಮುಂದೂಡುತ್ತಿದ್ದಾರೆ. ಸಿಂಧುತ್ವ ಪ್ರಮಾಣ ಪತ್ರವನ್ನು ನಾವಿಲ್ಲದೇ ಮುಂದಿನ ಪ್ರಕ್ರಿಯೆಗೆ ಅವಕಾಶ ನೀಡಬೇಕು ಎಂಬ ಅಭ್ಯರ್ಥಿಗಳ ಕೋರಿಕೆಗೆ ಸ್ಪಷ್ಟ ಮಾರ್ಗಸೂಚಿಗಳಿದ್ದರೂ ಸಹ, ಪೊಲೀಸ್ ನೇಮಕಾತಿ ವಿಭಾಗ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.

ಮೂಕ ಪ್ರತಿಭಟನೆ: ಮತ್ತೊಮ್ಮೆ ನಿರ್ಣಾಯಕ ಹೋರಾಟಕ್ಕೆ ಸಜ್ಜು
ಈ ಸಂದರ್ಭದಲ್ಲಿ ಮೇ 13ರಂದು ಸ್ವಾತಂತ್ರ ಉದ್ಯಾನವನದಲ್ಲಿ peaceful ಧರಣಿ ನಡೆಸಿದರೂ ಯಾವುದೇ ಸ್ಪಂದನೆ ದೊರಕಲಿಲ್ಲ. ಇದೀಗ ಎಲ್ಲಾ ಅಭ್ಯರ್ಥಿಗಳು ತಮ್ಮ ಪೋಷಕರೊಂದಿಗೆ ಇಂದು ಮತ್ತೊಮ್ಮೆ ಬೃಹತ್ ಪ್ರತಿಭಟನೆ ನಡೆಸಿದ್ದು. ಅಭ್ಯರ್ಥಿಗಳ ಏಕೈಕ ಒತ್ತಾಯ – “ಐದು ವರ್ಷಗಳ ತಡವೇ ಸಾಕು, ಇನ್ನೆಂದೂ ತಡವಾಗಬಾರದು.”

ಅಭ್ಯರ್ಥಿಗಳ ಮನವಿ:
- ಮುಂದಿನ 15 ದಿನಗಳಲ್ಲಿ ಆದೇಶ ಪ್ರತಿ ಬಿಡುಗಡೆ ಮಾಡಬೇಕು
- 402 ಅಭ್ಯರ್ಥಿಗಳು ಮತ್ತು ಅವರ ಕುಟುಂಬದ ಜೀವನದ ಭವಿಷ್ಯ ಉಳಿಸಬೇಕು
- ಸರ್ಕಾರದ ನಿರ್ಧಾರ ಇನ್ನೂ ವಿಳಂಬವಾಗದಂತೆ ಖಚಿತಗೊಳಿಸಬೇಕು
ಇನ್ನೂ ನಮ್ಮಿ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.

[…] ಇದನ್ನು ಓದಿ: 402 PSI ನೇಮಕಾತಿ: ಐದು ವರ್ಷಗಳ ನಿರೀಕ್ಷೆ ಬಳಿಕ St… […]