ಕೆ.ಆರ್.ಪೇಟೆ: ಮನುಷ್ಯನ ಅರೋಗ್ಯ ವೃದ್ಧಿಯಾಗಬೇಕಾದರೆ ಪ್ರತಿದಿನ ಕನಿಷ್ಠ 250 ಎಂ.ಎಲ್ ಹಾಲನ್ನು ಸೇವಿಸಬೇಕೆಂದು ಮನ್ಮುಲ್ ನಿರ್ದೇಶಕ ಡಾಲು ರವಿ ಸಲಹೆ ನೀಡಿದರು.
ವಿಶ್ವ ಹಾಲು ದಿನಾಚರಣೆ ಅಂಗವಾಗಿ ಕೆ.ಆರ್ ಪೇಟೆ ಪಟ್ಟಣದ ಶ್ರೀ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಒಳ-ಹೊರ ರೋಗಿಗಳಿಗೆ ಸಿಬ್ಬಂದಿ ವರ್ಗದವರಿಗೆ ಹಾಗೂ ಪಟ್ಟಣದ ಹೊರವಲಯದಲ್ಲಿರುವ ಶ್ರೀ ಮಾತೃ ಭೂಮಿ ವೃದ್ಧಆಶ್ರಮ ವಯೋ ವೃದ್ಧರಿಗೆ ಮನ್ಮುಲ್ ವತಿಯಿಂದ ನಂದಿನಿ ಹಾಲಿನ ಪುಡಿ ಪೊಟ್ಟಣ,ನಂದಿನಿ ಬಿಸ್ಕತ್ತು ಹಾಗೂ ನಂದಿನಿ ಹಾಲಿನ ಜ್ಯೂಸ್ ಹಾಗೂ ನಂದಿನಿ ಪೇಡಾ ಉತ್ಪನ್ನಗಳನ್ನು ವಿತರಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಆಸ್ಪತ್ರೆಗಳಿಗೆ ವಯಸ್ಸಾದ ತಂದೆತಾಯಿಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಆರೋಗ್ಯ ತಪಾಸಣೆ ಮಾಡಿಸಿ ಹೋಗುತ್ತಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ತಂದೆತಾಯಿಯರು ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಯುವಕರು ಸೋಮಾರಿಗಳಾಗದೇ ಕಾಲು ನಡಿಗೆ, ವ್ಯಾಯಾಮ,ಯೋಗಾಸನಗಳನ್ನು ಮಾಡುವುದರ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ತಾಯಿ ಮಗುವಿಗೆ ಜನ್ಮ ನೀಡಿದ ಕ್ಷಣಾರ್ಧದಲ್ಲಿ ವೈದ್ಯರು ಸಲಹೆಯಂತೆ ತನ್ನ ಹಾಲನ್ನು ಕುಡಿಸುತ್ತಾರೆ. ಅದರಂತೆ ಹಸು ಎಮ್ಮೆಯಿಂದ ಬರುವ ಅಮೃತ ಸಮಾನವಾದ ಹಾಲನ್ನು ನಾವುಗಳು ಸೇವಿಸುವುದರಿಂದ ಆರೋಗ್ಯವು ಬಲವರ್ಧನೆಯಾಗುತ್ತದೆ.ಆರೋಗ್ಯ ಸರಿಯಿದ್ದರೆ ಮನುಷ್ಯನಿಗೆ ನೆಮ್ಮದಿ ಇರುತ್ತದೆ .ಕೋಟಿ ಕೋಟಿ ಹಣವಿದ್ದರೂ ಮಾನವನಿಗೆ ಆರೋಗ್ಯವಿಲ್ಲದಿದ್ದರೆ ಆ ಹಣವು ವ್ಯರ್ಥವಾಗುತ್ತದೆ.ಕುಟುಂಬದಲ್ಲಿ ಅರೋಗ್ಯವಿದ್ದರೆ ಸಮಾಜ ಹಾಗೂ ಸಮುದಾಯ ಸಮೃದ್ಧಿಯಾಗಿ ಬೆಳೆಯುತ್ತವೆ.ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ದಿನನಿತ್ಯ ಹೆಚ್ಚೆಚ್ಚು ಹಾಲನ್ನು ಸೇವಿಸಬೇಕಂದು ಕಿವಿಮಾತು ಹೇಳಿದರು.

ಮನ್ಮುಲ್ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಿರ್ದೇಶಕ ಎಂ.ಬಿ ಹರೀಶ್ ಮಾತನಾಡಿ ವಿಶ್ವ ಹಾಲು ದಿನಾಚರಣೆ ಅಂಗವಾಗಿ ಪ್ರತಿ ವರ್ಷವೂ ವೃದ್ಧರು, ರೋಗಿಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ವಿತರಣೆ ಮಾಡುತ್ತಿದ್ದು, ಈ ಮೂಲಕ ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಧೋರಣೆ ಅನುಸರಿಸುತ್ತ ಬಂದಿದೆ. ಈ ವರ್ಷವೂ ಪಟ್ಟಣದ ಬಳಿ ಇರುವ ಶ್ರೀ ಮಾತೃಭೂಮಿ ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಹಾಗೂ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಾಲಿನ ಉತ್ಪನ್ನಗಳನ್ನು ವಿತರಣೆ ಮಾಡಿದ್ದೇವೆ ಎಂದರು.
ಬಳಿಕಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹುಟ್ಟುಹಬ್ಬದ ಹಿನ್ನೆಲೆ ಮನ್ಮುಲ್ ನಿರ್ದೇಶಕ ಎಂ ಬಿ ಹರೀಶ್ ನೇತೃತ್ವದಲ್ಲಿ ಶ್ರೀ ಮಾತೃಭೂಮಿ ವೃದ್ಧ ಆಶ್ರಮ ಆವರಣದಲ್ಲಿ ಗಿಡ ನೆಟ್ಟು ವೃದ್ಧ ಅನಾಥರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ರಘುವೇಂದ್ರ,ನಾಗಪ್ಪ ಅಲ್ಲಿಬಾದಿ ಮಧು, ಬಸವರಾಜು, ಸಂಧ್ಯಾ, ಭಾವನ, ಡಾ :ಉದಯ್, ಡಾ: ಪ್ರಜ್ವಲ್,ಮಾರುಕಟ್ಟೆ ಕ್ಷೆತ್ರ ಅಧಿಕಾರಿ ರವಿ,ಮುಖಂಡರಾದ ಹಾದನೂರು ಪರಮೇಶ್, ಕೈಗೊನಹಳ್ಳಿ ಜಯರಾಮ್,ತಾಲ್ಲೂಕು ಹಾಲು ಉತ್ಪಾದಕ ಸಹಕಾರಗಳ ನೌಕರರ ಸಂಘದ ಅಧ್ಯಕ್ಷ ಕುಪ್ಪಹಳ್ಳಿ ಲವಕುಮಾರ್,ಯುವ ಮುಖಂಡ ಮಡುವಿನಕೋಡಿ ದೀಪು,ರಮೇಶ್,ಮನು ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
