ಚನ್ನರಾಯಪಟ್ಟಣ– ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯಲ್ಲಿ ವಿಶ್ವದಾದ್ಯಂತ 24 ಸಾವಿರ ಕಲಾವಿದರ ಸದಸ್ಯತ್ವವನ್ನು ಹೊಂದಿದ್ದು ಶಾಸ್ತ್ರೀಯ ನೃತ್ಯಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ 8 ವಿಧದ ಶಾಸ್ತ್ರೀಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ ನೃತ್ಯವನ್ನು ಕಲಿಯುತ್ತಿರುವ, ಕಲಿತಿರುವ ವೇದಿಕೆ ಎಂದು ಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಗಣಪತಿ ಗುರುಸಿದ್ಧ ಬಾದಾಮಿರವರು ಹೇಳಿದರು.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಇತ್ತೀಚೆಗೆ ಬೆಂಗಳೂರಿನ ಜ್ಞಾನಸೌಧ ಆಡಿಟೋರಿಯಂ ನಲ್ಲಿ 67 ನೇ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 2017 ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯಲ್ಲಿ ಕಲಾವಿದರಿಗಾಗಿ ರಾಷ್ಟ್ರೀಯ ನೃತ್ಯೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ.
ಭಾರತದ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ್, ಮಧ್ಯಪ್ರದೇಶ್, ಉತ್ತರ ಪ್ರದೇಶ್ , ತೆಲಂಗಾಣ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಭರತನಾಟ್ಯ ಕಲಾವಿದರುಗಳು 5 ರಿಂದ 60 ವರ್ಷದ ವಯಸ್ಸಿನ 180ಕ್ಕೂ ಹೆಚ್ಚು ಪ್ರತಿಭಾವಂತ ಕಲಾವಿದರು ಭಾಗವಹಿಸಿ ತಮ್ಮ ಕಲೆಯನ್ನು ಅತ್ಯುತ್ತಮ ಪ್ರದರ್ಶನ ನೀಡಲು ಆಗಮಿಸಿರುವ ಎಲ್ಲಾ ಕಲಾವಿದರಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ನೃತ್ಯೋತ್ಸವ ಕಾರ್ಯಕ್ರಮ ಕೇವಲ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಸೀಮಿತವಾಗದೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ನೃತ್ಯೋತ್ಸವಗಳು ಪ್ರಸಿದ್ಧ ಸ್ಥಳಗಳಲ್ಲಿ ನಡೆಸುವಂತೆ ಅಕಾಡೆಮಿ ಮುಖ್ಯಸ್ಥರಿಗೆ ತಿಳಿಸಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೆ ನಾಟ್ಯಪ್ರಿಯ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ವೇಳೆ ರಾಷ್ಟ್ರೀಯ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಕೆ ಆರ್ ಅನಿತಾಪ್ರಕಾಶ್, ಆಯೋಜನ ಕಾರ್ಯದರ್ಶಿ ಸ್ವಾತಿ ಪಿ ಭಾರದ್ವಾಜ್ ಸೇರಿದಂತೆ ಇತರರು ಹಾಜರಿದ್ದರು.
- ವಂಜುನಾಥ್ ಐ ಕೆ
