ಹಾಸನ- ಜಿಲ್ಲಾ ಕನ್ನಡ ರಂಗಭೂಮಿ ಕಲಾವಿದರ ಸಂಘ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ಜೂ.14 ರಂದು ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ರಂಗಭೂಮಿ ಕನ್ನಡ ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ರಾಮಘಟ್ಟ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30ಕ್ಕೆ ಸರಿಯಾಗಿ ನಾಟಕ ಪ್ರದರ್ಶನ ಆರಂಭವಾಗಲಿದೆ. ನಗರದ, ಜಿಲ್ಲೆಯ ಜನರು, ನಾಟಕ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವೀಕ್ಷಿಸಿ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು. ಪ್ರವೇಶ ಉಚಿತವಾಗಿದ್ದು, ಆಸಕ್ತರು ಭಾಗವಹಿಸಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.
ಸುಮಾರು 40 ಜನ ಸದಸ್ಯರಿರುವ ಸಂಘದಲ್ಲಿ ಸುಮಾರು 17 ಜನ ಕಲಾವಿದರು ಸೇರಿ ನಾಟಕ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮವನ್ನು ಜನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಹಂಪನಹಳ್ಳಿ ತಿಮ್ಮೇಗೌಡ ಉದ್ಘಾಟಿಸಲಿದ್ದು, ಮಹಾನಗರ ಪಾಲಿಕೆ ಮಹಾಪೌರg ಎಂ.ಚಂದ್ರೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ನೂ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಂಘದ ಕಾರ್ಯಾಧ್ಯಕ್ಷ ರಾಮಲಿಂಗೇಗೌಡ ಮಾತನಾಡಿ, ಕಳೆದ 30 ವರ್ಷಗಳಿಂದ ನಮ್ಮ ಸಂಘವು ರಂಗಭೂಮಿ ಕಲೆಯನ್ನು ಉತ್ತೇಜಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಜೊತೆಗೆ ಯುವ ಕಲಾವಿದರನ್ನು ಪ್ರೋತ್ಸಾಹಿಸುವುದರ ಜೊತೆಗೆ ರಂಗಭೂಮಿ ಉಳಿಸುವ ಸಲುವಾಗಿ ಸಂಘ ಕೆಲಸ ಮಾಡುತ್ತಿದೆ. ರಂಗಭೂಮಿ ಒಂದು ಗಂಡು ಕಲೆ, ಇದನ್ನು ಉಳಿಸಬೇಕು ಎಂದರೆ ಯುವಕರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಕಳೆದ 45-50 ವರ್ಷಗಳಿಂದ ಕೆಲಸ ಮಾಡಿರುವ ಹಿರಿಯ ಕಲಾವಿದರಿದ್ದು, ಅವರ ಮಾರ್ಗದರ್ಶನದಲ್ಲಿ ಹೊಸ ಕಲಾವಿದರನ್ನು ಪರಿಚಯಿಸಿ ಕಲೆಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ.
ಹಿರಿಯ ರಂಗಭೂಮಿ ಕಲಾವಿದ ರಂಗಪ್ಪದಾಸ್ ಅವರ ಮಾರ್ಗದರ್ಶನದಲ್ಲಿ ಅರಂಭವಾದ ಈ ಸಂಘದಲ್ಲಿ ಹಲವು ನಾಟಕಗಳು ಪ್ರದರ್ಶನಗೊಂಡಿವೆ ಎಂದರು.
ಹಾಲಿ ನಾಟಕವನ್ನು ಕಲಾ ತಪಸ್ವಿ ಪ್ರಶಸ್ತಿ ಪುರಸ್ಕೃತ ಬೆಳ್ಳೂರು ಕ್ರಾಸ್ನ ಡಿ.ಸಿ.ಪುಟ್ಟರಾಜು ನಿರ್ದೇಶನ ಮಾಡಿದ್ದಾರೆ ಎಂದರು.
ಸಂಘದ ಹಿರಿಯ ಕಲಾವಿದ ಅಪ್ಪಾಜಣ್ಣ ಹಲಸಿನಹಳ್ಳಿ, ಯುವ ಕಲಾವಿದ ಗುರು ಪ್ರಸಾದ್ ಸಿಂಗಟಗೆರೆ, ಗೋವಿಂದೇಗೌಡ ಕಾರ್ಲೆ, ಕಾರ್ಯದರ್ಶಿ ನಿರಂಜನ್ ಇದ್ದರು.
