ಭಾರತ, ಜೂನ್ 13, 2025: ಜುಪಿಟರ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿ. (ಜೆಇಎಂ) ಇದು ಜ್ಯೂಪಿಟರ್ ವ್ಯಾಗನ್ಸ್ ಲಿ. ಯ ಎಲೆಕ್ಟ್ರಿಕ್ ಕಮರ್ಷಿಯಲ್ ವಾಹನದ ವಿಭಾಗವಾಗಿದ್ದು, ಬೆಂಗಳೂರಿನ ಹೃದಯ ಭಾಗ ಜಯನಗರದಲ್ಲಿ ತನ್ನ ಮೊದಲ ಶೋರೂಮ್ ಉದ್ಘಾಟನೆ ಮಾಡಿದೆ. ಅಲ್ಲದೆ, ತನ್ನ 1.05 ಟನ್ 4 ವೀಲರ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವಾಹನ (ಇಎಲ್ಸಿವಿ) ಜೆಇಎಂ ತೇಜ್ ಅನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆಯಿಂದಾಗಿ, ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಡೆಲಿವರಿ ವ್ಯವಸ್ಥೆಗೆಂದೇ ನಿರ್ಮಾಣ ಮಾಡಿದ ವಾಹನವನ್ನು ಜೆಇಎಂ ಒದಗಿಸಿದಂತಾಗಿದೆ. ಅಲ್ಲದೆ, ಈ ಮೂಲಕ ಸುಸ್ಥಿರ ಮತ್ತು ಸ್ವಚ್ಛ ಸಾರಿಗೆ ಸೌಲಭ್ಯದ ಕಡೆಗೆ ಭಾರತ ಪರಿವರ್ತನೆಗೊಳ್ಳಲು ಬೆಂಬಲ ನೀಡಿದೆ.
ಹೊಸದಾಗಿ ಆರಂಭಿಸಿದ ಜಯನಗರದ ಶೋರೂಮ್ ಅನ್ನು ಖರೀದಿದಾರರು ಮತ್ತು ಫ್ಲೀಟ್ ಆಪರೇಟರ್ಗಳಿಗೆ ಸಮಗ್ರ ಅನುಭವ ಕೇಂದ್ರವನ್ನಾಗಿ ವಿನ್ಯಾಸ ಮಾಡಲಾಗಿದೆ. ಈ ಕೇಂದ್ರದಲ್ಲಿ ಮಾರಾಟ ಸಲಹೆ, ಸರ್ವೀಸ್ ಸಪೋರ್ಟ್, ಹಣಕಾಸು ನೆರವು ಮತ್ತು ಖರೀದಿ ನಂತರದ ಸಲಹೆಯನ್ನು ಒದಗಿಸಲಾಗುತ್ತದೆ. ಜೆಇಎಂ ತೇಝ್ ವೈಶಿಷ್ಟ್ಯಗಳನ್ನು ಗ್ರಾಹಕರು ತಿಳಿದುಕೊಳ್ಲಬಹುದಾಗಿದ್ದು, ತರಬೇತಿ ಹೊಂದಿರುವ ಉತ್ಪನ್ನ ಪರಿಣಿತರ ಜೊತೆಗೆ ಚರ್ಚೆ ನಡೆಸಬಹುದು ಮತ್ತು ಆನ್ ಸೈಟ್ ಟೆಸ್ಟ್ ಡ್ರೆöÊವ್ಗಳನ್ನು ನಿಗದಿಪಡಿಸಿಕೊಳ್ಳಬಹುದು. ಇದರಲ್ಲಿ ವಾಸ್ತವ ಜಗತ್ತಿನಲ್ಲಿ ವಾಹನದ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೆ, ಶೋರೂಮ್ನಲ್ಲಿ ವೈಯಕ್ತಿಕಗೊಳಿಸಿದ ಬುಕಿಂಗ್ ಸಹಾಯವನ್ನೂ ಒದಗಿಸಲಾಗುತ್ತದೆ. ಈ ಮೂಲಕ ಖರೀದಿ ವ್ಯವಸ್ಥೆ ಸರಾಗ, ಮಾಹಿತಿಯುಕ್ತ ಮತ್ತು ಸಮಗ್ರವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಪ್ರಮುಖ ಸ್ಥಳದಲ್ಲಿರುವ ಸ್ಟೋರ್ನಿಂದ ಜೆಇಎಂ ಈಗ ತನ್ನ ಪಾಲುದಾರರು ಮತ್ತು ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ ಮತ್ತು ಅವರಿಗೆ ಬೆಂಬಲ ನೀಡುತ್ತಿದೆ. ಈಗಾಗಲೇ ದೇವನಹಳ್ಳಿಯಲ್ಲಿ ಪ್ರತ್ಯೇಕ ಮತ್ತು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸರ್ವೀಸ್ ಹಬ್ ಇದೆ.
ಕಂಪನಿಯ ಫ್ಲ್ಯಾಗ್ ಶಿಪ್ ಎಲೆಕ್ಟ್ರಿಕ್ ಲೈಟ್ ಕಮರ್ಷಿಯಲ್ ವಾಹನವಾಗಿರುವ ಜೆಇಎಂ ತೇಝ್ ಒಂದು ಉದ್ದೇಶಕ್ಕೆ ನಿಗದಿತವಾಗಿ ನಿರ್ಮಿಸಲಾದ ವಾಹನವಾಗಿದ್ದು, ನಗರದ ಸಾರಿಗೆ ಅಗತ್ಯವನ್ನು ಪೂರೈಸುತ್ತದೆ. 190 ಕಿ.ಮೀ ಪ್ರಮಾಣಿತ ರೇಂಜ್, 80 ಕಿ.ವ್ಯಾ ಪೀಕ್ ಮೋಟರ್ ಪವರ್, 23% ಗ್ರೇಡಬಿಲಿಟಿ ಮತ್ತು 1.05 ಟನ್ ಪೇಲೋಡ್ ಸಾಮರ್ಥ್ಯವನ್ನು ಇದು ಹೊಂದಿದ್ದು, ಅಧಿಕ ಕಾರ್ಯಕ್ಷಮತೆ, ಕೊನೆಯ ಸ್ಥಳದವರೆಗೂ ಡೆಲಿವರಿ ಮತ್ತು ಎಫ್ಎಂಸಿಜಿ ವಿತರಣೆಗೆ ಸೂಕ್ತವಾಗಿದೆ. ಹೆಚ್ಚು ಸಕ್ರಿಯ ಸಮಯ, ಲೋಡ್ ದಕ್ಷತೆ ಮತ್ತು ಎಮಿಷನ್ಸ್ ಕಡಿಮೆ ಸೌಲಭ್ಯಗಳನ್ನು ಇದು ಚಾಲಕರಿಗೆ ಒದಗಿಸುತ್ತದೆ.
ಬಿಡುಗಡೆಗೆ ಬೆಂಗಳೂರನ್ನು ಆಯ್ಕೆ ಮಾಡಿಕೊಂಡಿರುವುದು ಕೂಡಾ ಜೆಇಎಂನ ಒಟ್ಟಾರೆ ಬ್ಯುಸಿನೆಸ್ ಚಟುವಟಿಕೆಯ ತಂತ್ರವನ್ನು ಸೂಚಿಸುತ್ತದೆ. ಪ್ರಮುಖ ಸಾರಿಗೆ ಮತ್ತು ತಂತ್ರಜ್ಞಾನದ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಈಗಾಗಲೇ ಇವಿ ಬಳಕೆ ವ್ಯಾಪಕವಾಗಿದೆ. ಹೀಗಾಗಿ, ವಿದ್ಯುದೀಕರಣಕ್ಕೆ ಉತ್ತಮ ಸಾಧ್ಯತೆಯನ್ನು ಇದು ನೀಡುತ್ತದೆ. ಅಧಿಕ ಸಾಂದ್ರತೆಯ ವಾಣಿಜ್ಯ ಪ್ರದೇಶ ಇರುವುದರಿಂದ ಫ್ಲೀಟ್ ಆಪರೇಟರ್ಗಳು ಮತ್ತು ಲಾಜಿಸ್ಟಿಕ್ಸ್ ಪ್ಲೇಯರ್ಗಳಿಗೆ ಜಯನಗರ ಶೋರೂಮ್ ಸುಲಭವಾಗಿ ಆಕ್ಸೆಸಿಬಲ್ ಆಗಿದೆ.
ಕಾರ್ಯಕ್ರಮವನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಆದಾಯ ತೆರಿಗೆ -ಡಿಆರ್ ಆಯುಕ್ತರಾದ ಶ್ರೀ ಶಿವಾನಂದ ಕಲಕೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಇಒ ಗೌರವ್ ಜಲೋಟಾ ಹಾಗೂ ಬ್ಯಾಟರಿ ವಿಭಾಗದ ಸಿಇಒ ಕಾರ್ತಿಕ್ ಹಜೇಲಾ ಸೇರಿದಂತೆ ಜೆಇಎಂ ತಂಡವು ಹಾಜರಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಜೂಪಿಟರ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಲೋಹಿಯಾ “ಬೆಂಗಳೂರಿನಲ್ಲಿ ನಮ್ಮ ಮೊದಲ ಶೋರೂಮ್ ಉದ್ಘಾಟನೆ ಮಾಡಿರುವುದು ಜ್ಯೂಪಿಟರ್ ಎಲೆಕ್ಟ್ರಿಕ್ ಮೊಬಿಲಿಟಿಯ ರಾಷ್ಟ್ರೀಯ ವಿಸ್ತರಣೆ ಯೋಜನೆಯಲ್ಲಿ ಬೆಂಗಳೂರು ಎಷ್ಟು ಮುಖ್ಯವಾಗಿದೆ ಎಂಬುದನ್ನು ಸೂಚಿಸುತ್ತದೆ. ಭಾರತದ ಅತ್ಯಂತ ವಿಶಿಷ್ಟ ನಗರ ಕೇಂದ್ರಗಳಲ್ಲಿ ಒಂದಾಗಿರುವ ಬೆಂಗಳೂರು, ಇವಿಗಳಿಗೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ. ತಂತ್ರಜ್ಞಾನ ವಲಯ ಉತ್ತಮವಾಗಿದೆ, ತ್ವರಿತವಾಗಿ ಲಾಜಿಸ್ಟಿಕ್ಸ್ ವಲಯ ವಿಸ್ತರಿಸುತ್ತಿದೆ ಮತ್ತು ಸುಸ್ಥಿರ ಸಾರಿಗೆಗೆ ಆಸಕ್ತಿಯನ್ನು ಬೆಂಗಳೂರು ಉಳಿಸಿಕೊಂಡಿದೆ. ಹೀಗಾಗಿ ಜಿಎಂ ತೇಝ್ ಬಿಡುಗಡೆಗೆ ನಗರವು ಸೂಕ್ತ ವೇದಿಕೆಯಾಗಿದೆ.
ಫ್ಲೀಟ್ ಮಾಲೀಕರಿಗೆ, ಲಾಜಿಸ್ಟಿಕ್ಸ್ ಕಂಪನಿಗಳಿಗೆ, ಡೆಲಿವರಿ ಕಂಪನಿಗಳಿಗೆ ವಾಣಿಜ್ಯಿಕ ಅಗತ್ಯಗಳನ್ನು ಪೂರೈಸಲು ಈ ವಾಹನವನ್ನು ವಿನ್ಯಾಸ ಮಾಡಲಾಗಿದೆ. ಇದರ ಅಧಿಕ ಕಾರ್ಯಕ್ಷಮತೆ ಸಾಮರ್ಥ್ಯಗಳು, ಪೇಲೋಡ್ ಸಾಮರ್ಥ್ಯ ಮತ್ತು ವೆಚ್ಚ ಪರಿಣಾಮಕಾರಿತ್ವವನ್ನು ಹೊಂದಿರುವ ಇದು ಉದ್ಯಮಗಳಿಗೆ ಉತ್ತಮ ಮೌಲ್ಯವನ್ನು ಒದಗಿಸುತ್ತದೆ. ಸ್ವಚ್ಛ ಸಂಚಾರ ಸೌಲಭ್ಯಗಳಿಗೆ ಜನರು ಬದಲಿಸಿಕೊಳ್ಳಲು ಪ್ರೋತ್ಸಾಹವನ್ನೂ ಇದು ನೀಡುತ್ತದೆ. ವಾಣಿಜ್ಯಿಕವಾಗಿ ಸುಸ್ಥಿರ ಮತ್ತು ವಿಸ್ತರಿಸಬಹುದಾದ ಸಂಚಾರ ವ್ಯವಸ್ಥೆಯು ವಾಸ್ತವವಾಗಬೇಕು ಎಂದು ನಾವು ಬಯಸಿದ್ದೇವೆ” ಎಂದಿದ್ದಾರೆ.
ತನ್ನ ದೀರ್ಘಕಾಲೀನ ಕಾರ್ಯತಂತ್ರದ ಭಾಗವಾಗಿ ಸಮಗ್ರ ಇವಿ ಮೌಲ್ಯ ಸರಪಳಿಯಲ್ಲಿ ಜೆಇಎಂ ಹೂಡಿಕೆ ಮಾಡುತ್ತಿದೆ. ಪೋರ್ಟರ್, ಪಲ್ಸ್ ಎನರ್ಜಿ, ಬ್ಯಾಟ್ವೀಲ್, ಆಟೋಮೋವಿಲ್, ಟ್ಯಾಪ್ಫಿನ್ ಮತ್ತು ಇತರೆಯಂತಹ ಪಾಲುದಾರಿಕೆಗಳ ಮೂಲಕ ಕಂಪನಿಯು ಒಂದು ಬಲಿಷ್ಠ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಇದರಲ್ಲಿ ಚಾರ್ಜಿಂಗ್ ನೆಟ್ವರ್ಕ್, ಹಣಕಾಸು ಸೌಲಭ್ಯಗಳು ಮತ್ತು ಆಫ್ಟರ್ ಸೇಲ್ಸ್ ಸರ್ವೀಸ್ ಫ್ರೇಮ್ವರ್ಕ್ಗಳನ್ನು ಕೂಡಾ ಸೇರಿಸಲಾಗಿದೆ. ಜೆಇಎಂ ತೇಝ್ನ ಚಾಲಕರು ಮತ್ತು ಮಾಲೀಕರಿಗೆ ಜೆಇಎಂ ಉಡಾನ್ ಕಾರ್ಯಕ್ರಮದಿಂದ ಅನುಕೂಲವಾಗಲಿದ್ದು, ಇದರ ಅಡಿಯಲ್ಲಿ ಖಾತರಿ ಬ್ಯುಸಿನೆಸ್ ಅಸಿಸ್ಟೆನ್ಸ್ ಸಿಗಲಿದೆ.
ಬೆಳವಣಿಗೆಯನ್ನು ಬೆಂಬಲಿಸಲು, ಇಂದೋರ್ನ ಪೀಥಾಂಪುರದಲ್ಲಿ 2.5 ಎಕರೆ ಉತ್ಪಾದನೆ ಘಟಕವನ್ನು ಇತ್ತೀಚೆಗೆ ಜೆಇಎಂ ಆರಂಭಿಸಿದ್ದು, ವಾಹನ ಅಸೆಂಬ್ಲಿ ಸಾಮರ್ಥ್ಯಕ್ಕೆ ಇನ್ ಹೌಸ್ ಸ್ಕೇಟ್ಬೋರ್ಡ್ ಇದೆ. ಘಟಕವು ವಾರ್ಷಿಕ 8,000 ಇಂದ 10,000 ಇಎಲ್ಸಿವಿ ಉತ್ಪಾದನೆ ಸಾಮರ್ಥ್ಯವಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವುದಕ್ಕೆ ವಿಸ್ತರಣೆ ಅವಕಾಶವೂ ಇದೆ.
ಬೆಂಗಳೂರಿನಲ್ಲಿ ಈ ಮಹತ್ವದ ವಿಸ್ತರಣೆಯ ಮೂಲಕ ಎಲೆಕ್ಟ್ರಿಕ್ ಸಂಚಾರ ಬ್ಯುಸಿನೆಸ್ನಲ್ಲಿ ತನ್ನ ಹಿಡಿತವನ್ನು ಜೆಇಎಂ ಇನ್ನಷ್ಟು ಬಲಪಡಿಸಿದೆ. ಸಂಸ್ಥೆಯು ಗ್ರಾಹಕ ಕೇಂದ್ರಿತವಾಗಿದೆ ಮತ್ತು ಇಎಲ್ಸಿವಿ ಗ್ರಾಹಕರಿಗೆ ರಿಟೇಲ್ ಅನುಭವವನ್ನು ಇನ್ನಷ್ಟು ವರ್ಧಿಸುವ ಗುರಿಯನ್ನು ಹೊಂದಿದೆ. ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆಯ ಕಾರ್ಯತಂತ್ರವಾಗಿ, ಸಂಭಾವ್ಯ ಇವಿ ಮಾರ್ಕೆಟ್ಗಳಲ್ಲಿ ವ್ಯಾಪಾರವನ್ನು ಜೆಇಎಂ ವಿಸ್ತರಿಸಲಿದೆ. ದೆಹಲಿ, ಹೈದರಾಬಾದ್, ಮುಂಬೈ, ಅಹಮದಾಬಾದ್, ಕೋಲ್ಕತಾ ಮತ್ತು ಚೆನೈ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ವಿಸ್ತರಣೆಗೆ ಈಗಾಗಲೇ ಗುರಿ ಹಾಕಿಕೊಳ್ಳಲಾಗಿದೆ.
ಎಲ್ಲರಿಗೂ ಆಹ್ವಾನ
ಫ್ಲೀಟ್ ಮಾಲೀಕರು, ಲಾಜಿಸ್ಟಿಕ್ಸ್ ಅಗ್ರಿಗೇಟರ್ಗಳು, ಸಾಂಸ್ಥಿಕ ಖರರೀದಿದಾರರು ಮತ್ತು ಇವಿ ಎಕೋಸಿಸ್ಟಮ್ ಪಾಲುದಾರರನ್ನು ಜೆಇಎಂ ಆಹ್ವಾನಿಸುತ್ತಿದ್ದು, ಜೆಇಎಂ ತೇಝ್ನ ಅನುಭವವನ್ನು ಇವರು ಇಲ್ಲಿ ಪಡೆದುಕೊಳ್ಳಬಹುದು. ಡೆಮೋ ಬುಕ್ ಮಾಡಲು ಅಥವಾ ಬ್ಯುಸಿನೆಸ್ ಸಹಭಾಗಿತ್ವವನ್ನು ತಿಳಿದುಕೊಳ್ಳಲು ನಮ್ಮ ಬೆಂಗಳೂರು ಶೋರೂಮ್ಗೆ ಭೇಟಿ ನೀಡಿ. ವಿಳಾಸ: ಮೆಸರ್ಸ್ ಸಾಯಿ ತನುಶ್ರೀ ಆಟೋಮೊಬೈಲ್ಸ್, 1519ಎ(39), 39ನೇ ಅಡ್ಡ ರಸ್ತೆ, ಈಸ್ಟ್ ಎಂಡ್ ರಸ್ತೆ, 9ನೇ ಬ್ಲಾಕ್, ಜಯನಗರ, ಬೆಂಗಳೂರು 560069. ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆ. ಅಥವಾ ನಮ್ಮನ್ನು ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು: +91 96868 60223 ನಮ್ಮ ತಂಡವನ್ನು ಇಲ್ಲೂ ಕೂಡಾ ನೀವು ಸಂಪರ್ಕಿಸಬಹುದು: www.jupiterelectricmobility.com
