ಬೆಂಗಳೂರು: ಭಾರತದ ಪ್ರಮುಖ ಡಿಜಿಟಲ್ ಪಾವತಿ ಹಾಗೂ ಹಣಕಾಸು ಸೇವೆಗಳ ವಿತರಣಾ ಸಂಸ್ಥೆಯಾದ Paytm, ಪ್ರಮುಖ ಓಮ್ನಿಚಾನೆಲ್ ಆಭರಣ ಬ್ರ್ಯಾಂಡ್ CaratLane ಜೊತೆ ಸಹಭಾಗಿತ್ವ ಮಾಡಿಕೊಂಡಿದ್ದು, Paytm ಆ್ಯಪ್ ಮೂಲಕ CaratLane ಆಭರಣಗಳನ್ನು ಖರೀದಿಸುವ ಸೌಲಭ್ಯವನ್ನು ಪರಿಚಯಿಸಿದೆ.
ಈ ಹೊಸ ಸೇವೆಯ ಮೂಲಕ ಉಂಗುರ, ಕಿವಿಯೋಲೆ, ಪೆಂಡೆಂಟ್, ನೆಕ್ಲೆಸ್, ಬಳೆ ಹಾಗೂ ಬ್ರೇಸ್ಲೆಟ್ ಸೇರಿದಂತೆ ವಿವಿಧ ವಿನ್ಯಾಸಗಳ ಆಭರಣಗಳನ್ನು ಖರೀದಿಸಬಹುದಾಗಿದೆ. ದೈನಂದಿನ ಬಳಕೆ, ಉಡುಗೊರೆ, ಮದುವೆ, ಹಬ್ಬ ಹಾಗೂ ವಿಶೇಷ ಸಂದರ್ಭಗಳಿಗೆ ಅನುಗುಣವಾಗಿ ವಿವಿಧ ಬೆಲೆ ಶ್ರೇಣಿಗಳಲ್ಲಿ ಆಭರಣಗಳು ಲಭ್ಯವಿರಲಿವೆ.
ಆಭರಣ ಖರೀದಿಸುವ ಸಂದರ್ಭದಲ್ಲಿ ಅನ್ವಯವಾಗುವ ಮೇಕಿಂಗ್ ಚಾರ್ಜ್ ಮತ್ತು ಜಿಎಸ್ಟಿ ಸೇರಿದಂತೆ ಒಟ್ಟು ಬೆಲೆಯನ್ನು ಮುಂಚಿತವಾಗಿಯೇ ಪ್ರದರ್ಶಿಸಲಾಗುತ್ತದೆ. Paytm UPI, ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಸೇರಿದಂತೆ ಲಭ್ಯವಿರುವ ವಿವಿಧ ಪಾವತಿ ವಿಧಾನಗಳ ಮೂಲಕ ಹಣ ಪಾವತಿಸಬಹುದು. ಇದರೊಂದಿಗೆ Paytm Digital Gold ಬಳಸಿ ಆಭರಣ ಖರೀದಿಸುವ ಅವಕಾಶವೂ ಇದೆ. Digital Goldನ ಮೌಲ್ಯವನ್ನು ಬಳಸಿದ ಬಳಿಕ ಉಳಿದ ಮೊತ್ತವನ್ನು ಇತರ ಪಾವತಿ ವಿಧಾನಗಳ ಮೂಲಕ ಪಾವತಿಸಬಹುದಾಗಿದೆ.
CaratLane ಸೇವೆ ಲಭ್ಯವಿರುವ ಪಿನ್ಕೋಡ್ಗಳ ವ್ಯಾಪ್ತಿಯಲ್ಲಿ ಆಭರಣಗಳ ಪ್ಯಾಕೇಜಿಂಗ್, ಪೂರೈಕೆ ಮತ್ತು ಹೋಂ ಡೆಲಿವರಿಯನ್ನು CaratLane ನಿರ್ವಹಿಸಲಿದೆ. ಆರ್ಡರ್ ದೃಢೀಕರಣ, ಟ್ರ್ಯಾಕಿಂಗ್ ಹಾಗೂ ಖರೀದಿ ವಿವರಗಳನ್ನು Paytm ಆ್ಯಪ್ನಲ್ಲೇ ಪರಿಶೀಲಿಸಬಹುದಾಗಿದೆ.
ಈ ಸಹಭಾಗಿತ್ವದ ಮೂಲಕ Paytmನ ಪಾವತಿ ಮತ್ತು Digital Gold ಸೇವೆಗಳನ್ನು CaratLaneನ ಆಭರಣ ಕ್ಷೇತ್ರದ ಪರಿಣತಿ ಹಾಗೂ ವಿತರಣಾ ಜಾಲದೊಂದಿಗೆ ಸಂಯೋಜಿಸಲಾಗುತ್ತಿದೆ. ಇದರಿಂದ ಗ್ರಾಹಕರಿಗೆ Digital Gold ಅನ್ನು ಆಭರಣವಾಗಿ ಪರಿವರ್ತಿಸಿಕೊಳ್ಳಲು ಮತ್ತೊಂದು ಆಯ್ಕೆ ದೊರೆಯಲಿದೆ.
Paytmನ ಉಪಾಧ್ಯಕ್ಷ ವೀರ್ ಮಿಶ್ರಾ ಮಾತನಾಡಿ, “Paytm Digital Goldನ ಬಳಕೆಯನ್ನು ಕೇವಲ ಉಳಿತಾಯಕ್ಕೆ ಸೀಮಿತಗೊಳಿಸದೆ, ಆಭರಣ ಖರೀದಿಗೂ ವಿಸ್ತರಿಸಲು CaratLane ಜೊತೆ ಈ ಸೇವೆಯನ್ನು ಪರಿಚಯಿಸಿದ್ದೇವೆ. ಭಾರತದಲ್ಲಿ ಚಿನ್ನಕ್ಕೆ ವಿಶೇಷ ಸ್ಥಾನವಿದೆ. ಈಗ ಗ್ರಾಹಕರು ತಮ್ಮ Paytm Digital Gold ಅನ್ನು CaratLane ಆಭರಣಗಳ ಖರೀದಿಗೆ ಬಳಸಬಹುದು. ವಿವಿಧ ಬೆಲೆ ಶ್ರೇಣಿಗಳಲ್ಲಿನ ವಿನ್ಯಾಸಗಳನ್ನು ಆಯ್ಕೆ ಮಾಡಿಕೊಂಡು, ಉಳಿದ ಮೊತ್ತವನ್ನು ಇತರ ಪಾವತಿ ವಿಧಾನಗಳ ಮೂಲಕ ಪಾವತಿಸುವ ಅವಕಾಶವೂ ಇದೆ” ಎಂದರು.
CaratLane ವ್ಯವಸ್ಥಾಪಕ ನಿರ್ದೇಶಕ ಸೌಮೆನ್ ಭೌಮಿಕ್ ಮಾತನಾಡಿ, “ಚಿನ್ನವನ್ನು ಕೇವಲ ಸಂಗ್ರಹಿಸುವುದಷ್ಟೇ ಅಲ್ಲದೆ, ಅದನ್ನು ಧರಿಸುವ, ಉಡುಗೊರೆಯಾಗಿ ನೀಡುವ ಮತ್ತು ಸಂಭ್ರಮಿಸುವ ಅವಕಾಶವೂ ಇರಬೇಕು. Paytm ಜೊತೆಗಿನ ಸಹಭಾಗಿತ್ವವು Digital Gold ಹೊಂದಿರುವವರಿಗೆ ತಮ್ಮ ಉಳಿತಾಯವನ್ನು CaratLaneನ ಆಭರಣ ವಿನ್ಯಾಸಗಳಾಗಿ ಸುಲಭವಾಗಿ ಪರಿವರ್ತಿಸಿಕೊಳ್ಳಲು ನೆರವಾಗಲಿದೆ” ಎಂದು ಹೇಳಿದರು.
Paytmನಲ್ಲಿ Digital Gold ಹಾಗೂ Silverನಲ್ಲಿ ಒಮ್ಮೆಗೇ ಅಥವಾ ದೈನಂದಿನ, ವಾರದ ಮತ್ತು ಮಾಸಿಕ SIP ಮೂಲಕ ಉಳಿತಾಯ ಮಾಡುವ ಸೌಲಭ್ಯವೂ ಲಭ್ಯವಿದೆ. Paytm Digital Gold ಅನ್ನು MMTC-PAMP ಪೂರೈಸುತ್ತಿದ್ದು, ಇದು 24 ಕ್ಯಾರೆಟ್ ಶುದ್ಧ ಚಿನ್ನವಾಗಿದೆ. ಖರೀದಿಸಿದ Digital Goldಗೆ ಸಮಾನವಾದ ಭೌತಿಕ ಚಿನ್ನವನ್ನು ವಿಮೆ ಹೊಂದಿರುವ ಸುರಕ್ಷಿತ ವಾಲ್ಟ್ಗಳಲ್ಲಿ ಸಂಗ್ರಹಿಸಲಾಗುತ್ತದೆ. Digital Gold ಮತ್ತು Silver ಖರೀದಿಗೆ ಅನ್ವಯವಾಗುವ ಜಿಎಸ್ಟಿ ವಿಧಿಸಲಾಗುತ್ತದೆ. ಆದರೆ ಆಭರಣಗಳ ಖರೀದಿಯಲ್ಲಿರುವಂತೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕ ಇರುವುದಿಲ್ಲ.
Paytmನಲ್ಲಿ CaratLane ಆಭರಣ ಖರೀದಿಸುವುದು ಹೇಗೆ?
- 1. Paytm ಆ್ಯಪ್ ತೆರೆಯಿರಿ ಮತ್ತು Jewellery ವಿಭಾಗಕ್ಕೆ ತೆರಳಿ.
- 2. CaratLane ಆಭರಣಗಳ ಕ್ಯಾಟಲಾಗ್ ವೀಕ್ಷಿಸಿ.
- 3. ನಿಮಗೆ ಇಷ್ಟವಾದ ಆಭರಣವನ್ನು ಆಯ್ಕೆ ಮಾಡಿ.
- 4. ಲಭ್ಯವಿರುವ Paytm Digital Gold ಬಳಸಿ ಅಥವಾ ಇತರ ಪಾವತಿ ವಿಧಾನಗಳ ಮೂಲಕ ಹಣ ಪಾವತಿಸಿ. ಎರಡನ್ನೂ ಒಟ್ಟಿಗೆ ಬಳಸುವ ಆಯ್ಕೆಯೂ ಇದೆ.
- 5. ಡೆಲಿವರಿ ವಿಳಾಸವನ್ನು ಖಚಿತಪಡಿಸಿ ಆರ್ಡರ್ ಮಾಡಿ.
- 6. Paytm ಆ್ಯಪ್ನಲ್ಲೇ ಆರ್ಡರ್ನ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
