ಕೆ.ಆರ್.ಪೇಟೆ:ತಾಲ್ಲೂಕು ಛಲವಾದಿ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜು ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ನಡೆಯವ ಎರಡನೇ ಶನಿವಾರ ಮಾಸಿಕ ಸಭೆಯು ನಡೆಯಿತು.
ಬಳಿಕ ತಾಲ್ಲೂಕು ಛಲವಾದಿ ಮಹಾಸಭಾದ ತಾಲ್ಲೂಕು ಘಟಕ ಅಧ್ಯಕ್ಷ ಊಚನಹಳ್ಳಿ ನಟರಾಜು ಮಾತನಾಡಿ ಛಲವಾದಿ ಮಹಾಸಭಾ ರಾಜ್ಯ ಘಟಕದ ಆಡಳಿತ ಮಂಡಳಿಯ ಚುನಾವಣೆಯು ಕೆಲವು ತಿಂಗಳಲ್ಲಿ ನಡೆಯಲಿದೆ.ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಉಳ್ಳವರು ಅಥವಾ ಮತ ಚಲಾಯಿಸಬೇಕಾದರೆ ಕಡ್ಡಾಯವಾಗಿ ರಾಜ್ಯ ಸಮಿತಿಯ ಸದಸ್ಯರಾಗಿಬೇಕು.ಆದ್ದರಿಂದ ಇನ್ನೂ ಸಮಯವಿರುವುದರಿಂದ ತಾಲ್ಲೂಕಿನ ಛಲವಾದಿ ಬಂಧುಗಳು ಛಲವಾದಿ ಮಹಾಸಭಾದ ರಾಜ್ಯ ಘಟಕದ ಸದಸ್ಯರಾಗಲು ನಮ್ಮನ್ನು ಭೇಟಿ ಮಾಡಿ ಸದಸ್ಯರಾಗುವಂತೆ ಮನವಿ ಮಾಡಿದರು. ಛಲವಾದಿ ಮಹಾಸಭಾದ ಸದಸ್ಯರು ಯಾರೇ ಆಗಲಿ ಯಾವುದೇ ಗ್ರಾಮವಾಗಲಿ ಛಲವಾದಿ ಬಂಧುಗಳಿಗೆ ಅನ್ಯಾಯ ಅಥವಾ ತೊಂದರೆ ಸಿಲುಕಿದರೆ ಅವರ ಪರವಾಗಿ ರಾಜ್ಯ ಹಾಗೂ ತಾಲ್ಲೂಕು ಘಟಕ ನಿಲ್ಲುತ್ತದೆ.ಛಲವಾದಿ ಬಂಧುಗಳು ಸ್ವಾಭಿಮಾನ ಬಿಟ್ಟು ಕೊಡಬಾರದು.ಛಲವಾದಿ ಬಂಧುಗಳು ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು.ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ನೆರವಾಗಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಗೌರವ ಸಲಹೆಗಾರರಾದ ಸಿಂಧಘಟ್ಟ ಸೋಮಸುಂದರ್, ಪುರಸಭಾ ಸದಸ್ಯ ಗಿರೀಶ್,ಬಿಎಸ್ಪಿ ಗಂಗಾಧರ್,ಛಲವಾದಿ ಮಹಾಸಭಾದ ಕಾರ್ಯದರ್ಶಿ ಹರಿಹರಪುರ ನರಸಿಂಹ ಶಿಕ್ಷಕ ಸದಾನಂದ,ತೆಂಡೇಕೆರೆ ಶಿವಕುಮಾರ್, ಬೂಕನಕೆರೆ ತಮ್ಮಯ್ಯ,ನಾಟನಹಳ್ಳಿ ಮಂಜುನಾಥ್, ನಿವೃತ್ತ ಶಿಕ್ಷಕ ಕುಂದೂರಯ್ಯ,ಜಯಕುಮಾರ್,ಪುಟ್ಟರಾಜು, ಬಸವರಾಜು ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
