ಹಾಸನ ಜೂ.21:- ಭಾರತ ದೇಶದ ಪವಿತ್ರತೆಯ, ಪರಂಪರೆಯ ಸಂಕೇತ ಯೋಗ. ಎಲ್ಲರೂ ಯೋಗವನ್ನು ಮೈಗೂಡಿಸಿಕೊಂಡು ಉತ್ತಮ ಆರೋಗ್ಯ ಹೊಂದುವಂತೆ ಸಂಸದರಾದ ಶ್ರೇಯಸ್ ಪಟೇಲ್ ಅವರು ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಅರಣ್ಯ ಇಲಾಖೆ, ಭಾರತ ಸ್ಕೌಟ್ಸ್& ಗೈಡ್ಸ್, ಮೇರಾ ಯುವ ಭಾರತ್, ಎನ್.ಸಿ.ಸಿ, ಭಾರತ ಸೇವಾದಳ ಹಾಗೂ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ವಿವಿಧ ಯೋಗ ಸಂಘ ಸಂಸ್ಥೆಗಳ ಸಹಯೋಗದಲ್ಲಿಂದು ಜಿಲ್ಲಾ ಕ್ರೀಡಾಂಗಣದ ಹಾಕಿ ಮೈದಾನದಲ್ಲಿ ನಡೆದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದಿನನಿತ್ಯದ ಕೆಲಸಗಳಲ್ಲಿ ಯೋಗವು ಒಂದು ಭಾಗವಾಗಿದೆ. ಶಾಲಾ ಕಾಲೇಜುಗಳಲ್ಲಿಯೂ ಯೋಗಾಭ್ಯಾಸವನ್ನು ಮಾಡಿಸುತ್ತಿದ್ದೇವೆ. ನಮ್ಮ ದೇಶದ ಪತಂಜಲಿ ಯೋಗವು ಇಡೀ ಪ್ರಪಂಚಕ್ಕೆ ಶುಭ ಸಂಕೇತ ಎಂದು ಹೇಳಿದರು.

ಜಿಲ್ಲಾಧಿಕಾರಿ ಲತಾ ಕುಮಾರಿ ಕೆ. ಎಸ್ ಅವರು ಮಾತನಾಡಿ, ನಮ್ಮ ದೇಶ ಮತ್ತು ದೇಹ ಒಂದೇ ಆಗಿದೆ. ನಮ್ಮ ದೇಹವನ್ನು ಹೇಗೆ ಸದೃಢವಾಗಿ ಇಟ್ಟುಕೊಳ್ಳಬೇಕು ಹಾಗೆಯೇ ನಮ್ಮ ದೇಶವನ್ನು ಸುಭದ್ರವಾಗಿ ಇಟ್ಟುಕೊಳ್ಳಬೇಕು. ಸದೃಢ ದೇಹ ಸದೃಢ ದೇಶದ ಗುರುತು ಹಾಗಾಗಿ ನಾವೆಲ್ಲರೂ ಯೋಗವನ್ನು ಮಾಡುವ ಮುಖಾಂತರ ಸದೃಢ ದೇಹದೊಂದಿಗೆ ಸದೃಢ ದೇಶವನ್ನು ನಿರ್ಮಾಣ ಮಾಡೋಣ. ಇದಕ್ಕೆ ಯೋಗವು ಬಹಳ ಮುಖ್ಯ. ಯೋಗವು ನಮ್ಮ ದೇಹ ಮನಸ್ಸು, ಆತ್ಮ ಈ ಮೂರನ್ನು ಒಂದುಗೂಡಿಸುತ್ತದೆ. ನಮಗೆ ನಿಜವಾದ ಜೀವನದ ದಾರಿಯನ್ನು ತೋರಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಚಂದ್ರೇಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ಬಿ.ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಿ.ಪಿ. ಕೃಷ್ಣೆಗೌಡ ಮತ್ತಿತರರು ಉಪಸ್ಥಿತರಿದ್ದರು. ಯೋಗ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿದ್ದರು.
ಹಾಸನ- ಪ್ರಾಚೀನ ಸಂಸ್ಕೃತಿ ಯೋಗ ಉಳಿವಿಗೆ ಕೇಂದ್ರ ಶ್ರಮ- ಕೇಂದ್ರ ಸಚಿವ ವಿ. ಸೋಮಣ್ಣ

[…] […]