ಕೆ.ಆರ್.ಪೇಟೆ: ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಟಿ ಮಂಜು ರವರ 51ನೇ ವರ್ಷದ ಹುಟ್ಟುಹಬ್ಬದ ಹಿನ್ನಲೆ. ತಾಲ್ಲೂಕು ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳ ನೇತೃತ್ವದಲ್ಲಿ ಕೆ.ಆರ್.ಪೇಟೆ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಹೊರ-ಒಳ ರೋಗಿಗಳಿಗೆ ಹಣ್ಣು ಅಂಪಲು ವಿತರಿಸಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರಿಗೆ ತೆಂಗಿನ ಸಸಿ ನೀಡಿ ಹಾಗೂ ಕೇಕ್ ಕತ್ತರಿಸುವ ಮೂಲಕ ಶಾಸಕ ಹೆಚ್.ಟಿ ಮಂಜು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್ ಮಾತನಾಡಿ ನಮ್ಮ ನಾಯಕ ಹಾಗೂ ಕ್ಷೇತ್ರದ ಕ್ರಿಯಾಶೀಲ ಶಾಸಕರಾಗಿರುವ ಹೆಚ್.ಟಿ ಮಂಜು ಅವರ ಹುಟ್ಟುಹಬ್ಬ ಹಿನ್ನಲೆ ನಮ್ಮ ಜೆಡಿಎಸ್ ಕಾರ್ಯಕರ್ತರ ನೇತೃತ್ವದಲ್ಲಿ ಆಡಂಬರವಾಗಿ ಆಚರಿಸದೆ ಅವರ ಆಶಯಗಳಂತೆ ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ಆಚರಿಸಿದ್ದೇವೆ. ತಾಲೂಕಿನ ಅಭಿವೃದ್ಧಿಗೆ ಆಗಲು – ಇರುಳು ಶ್ರಮಿಸುತ್ತಾ ಜನಸಾಮಾನ್ಯರಿಗೆ ಸ್ಪಂದನೆಯಾಗಿ ಅಧಿಕಾರ ನಡೆಸುತ್ತ ಜಿಲ್ಲೆಯಲ್ಲೆ ಏಕೈಕ ಜೆಡಿಎಸ್ ಶಾಸಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಅದರಂತೆ ಅವರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತ ಸ್ಥಾನಮಾನಗಳು ಸಿಗಲಿ ಎಂದರು.

ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತರಿಗೆ ತೆಂಗಿನ ಸಸಿ ವಿತರಿಸಿ ಮಾತನಾಡಿದ ಯುವ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ವಕೀಲ ಕುರುಬಹಳ್ಳಿ ನಾಗೇಶ್ ನಮ್ಮ ಪಕ್ಷದಲ್ಲಿ ಹೃದಯವಂತಿಕೆ ನಾಯಕ ಹಾಗೂ ಶಾಸಕರಾದ ಹೆಚ್.ಟಿ ಮಂಜು ಅವರು ಸದೃಢ ಸಮಾಜಕ್ಕೆ ಚಿಂತಿಸುವ ರಾಜಕಾರಣಿ. ಇಂತಹ ಮನಸುಳ್ಳ ವ್ಯಕ್ತಿಯ ಜನುಮದಿನವನ್ನು ಸಂಭ್ರಮಿಸುವುದು ಜೆಡಿಎಸ್ ಕಾರ್ಯಕರ್ತರ ಆದ್ಯ ಕರ್ತವ್ಯ ಹಾಗಾಗಿ ಅವರ ಯೋಚನೆಯಂತೆ ಕಾರ್ಯಕರ್ತರು ಅಭಿಮಾನಿಗಳು ಒಳಗೂಡಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡು ಶುಭಕೋರಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕರ ಸಹೋದರ ಟಿ.ಎ.ಪಿ.ಸಿ.ಎಂ.ಎಸ್ ಮಾಜಿ ನಿರ್ದೇಶಕ ಹೆಚ್.ಟಿ ಲೋಕೇಶ್,ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್, ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ತೆರ್ನೇನಹಳ್ಳಿ ಬಲದೇವ್, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಘಾಲಯ ಅಜಯ್, ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಬೈರಪುರ ಹರೀಶ್,ಜೆಡಿಎಸ್ ಹೋಬಳಿಯ ಅಧ್ಯಕ್ಷರಾದ ಮಾಕವಳ್ಳಿ ವಸಂತ್ ಕುಮಾರ್,ರವಿ ಕುಮಾರ್,ಅಕ್ಕಿಹೆಬ್ಬಾಳು ಬಸವಲಿಂಗಪ್ಪ,ಹಿರಿಯ ಮುಖಂಡ ಬ್ಯಾಲದಕೆರೆ ನಂಜೇಗೌಡ, ನಾಟನಹಳ್ಳಿ ಮಹೇಶ,ಪುರಸಭೆ ಸದಸ್ಯ ಗಿರೀಶ್,ಬಂಡಿಹೊಳೆ ಕಾಯಿ ಮಂಜೇಗೌಡ, ಮುಖಂಡರಾದ ವಡ್ಡರಹಳ್ಳಿ ವಕೀಲ ವಿ.ಎಸ್ ಧನಂಜಯ್ ಕುಮಾರ್,ಹೆಗ್ಗಡಹಳ್ಳಿ ಅಲೋಕ್ ಕುಮಾರ್, ಬ್ಯಾಲದಕೆರೆ ಮರಿಗೌಡ,ಬಿಕನಹಳ್ಳಿ ಈರೇಗೌಡ,ಹಿರಿಕಳಲೆ ಗಣೇಶ್,ಕುಂದನಹಳ್ಳಿ ವೆಂಕಟೇಶ್,ಬಳ್ಳೆಕೆರೆ ಕುಮಾರ್, ಉದಯ್,ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್,ಮಾಕವಳ್ಳಿ ಕುಮಾರಸ್ವಾಮಿ,ಯುವ ಮುಖಂಡರಾದ ಚಟ್ಟೆನಹಳ್ಳಿ ದೀಪು,ಮಲ್ಲೇನಹಳ್ಳಿ ಸುರೇಶ, ನಾಟನಹಳ್ಳಿ ದಿಲೀಪ್,ಯಡಹಳ್ಳಿ ಪ್ರಶಾಂತ್,ಲೋಹಿತ್,ರಾಕೇಶ್,ಜೀವನ್, ಶಶಾಂಕ್,ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
