ಕೆ.ಆರ್.ಪೇಟೆ:ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಶಾಸಕ ಹೆಚ್.ಟಿ ಮಂಜು ತಿಳಿಸಿದರು.
ಅವರು ತಾಲ್ಲೂಕಿನ ಸಾರಂಗಿ ಗ್ರಾಮದಲ್ಲಿ ಸಿಮೆಂಟ್ ರಸ್ತೆಗೆ ತಮ್ಮ ಅನುದಾನದಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸಾರಂಗಿ ಗ್ರಾಮ ರಾಜಕೀಯಕ್ಕೆ ಹೆಚ್ಚು ಶಕ್ತಿ ತುಂಬಿದ ಗ್ರಾಮ. ಹಾಗಾಗಿ ಈ ಭಾಗಕ್ಕೆ ಪ್ರಮುಖವಾಗಿ ಬೇಕಾಗಿದ್ದ ಪಶು ಆರೋಗ್ಯ ಕೇಂದ್ರ ತರುವಲ್ಲಿ ಶ್ರಮವಹಿಸಿದ್ದೇನೆ ಅದರಂತೆ ರಾಜ್ಯ ಸರ್ಕಾರ 10 ಕೋಟಿ ಅನುದಾನದಲ್ಲಿ ನಿರ್ಮಿತಿ ಕೇಂದ್ರ ಏಜೆನ್ಸಿ ಅಡಿಯಲ್ಲಿ ಸಾರಂಗಿ ಗ್ರಾಮಕ್ಕೆ 20ಲಕ್ಷ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದೇವೆ.

ಕಾಮಗಾರಿ ಗುಣಮಟ್ಟದಲ್ಲಿ ರಾಜೀ ಇಲ್ಲ ಸ್ಥಳೀಯರು ಎದುರಿಗಿದ್ದು, ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕು. ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳನ್ನು ಸ್ಥಳೀಯರು ಪರಿಶೀಲಿಸಬೇಕು.ಇದರಿಂದ ಸರ್ಕಾರದ ಅನುದಾನದ ಬಳಕೆ ಉಪಯುಕ್ತವಾಗುತ್ತದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದಾಗ ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನಿಸಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಹೆಚ್.ಟಿ ಮಂಜು ಹೇಳಿದರು.
ಇದನ್ನು ಓದಿ: ವೈಜ್ಞಾನಿಕ ಲೋಕದಲ್ಲಿ ಹೊಸ ಅಧ್ಯಾಯ: ಜಗತ್ತಿನ ಅತ್ಯಂತ ಅಪರೂಪದ ರಕ್ತದ ಗುಂಪು ಪತ್ತೆ
ಈ ಸಂದರ್ಭದಲ್ಲಿ ತಾ. ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಟಿ ಎ ಪಿ ಸಿ ಎಂ ಎಸ್ ನಿರ್ದೇಶಕ ಕೊರಟಿಗೆರೆ ದಿನೇಶ್, ಗ್ರಾ.ಪಂ ಅಧ್ಯಕ್ಷೆ ಹೇಮಾವತಿ ನವೀನ್, ಉಪಾಧ್ಯಕ್ಷ ರಾಜು, ಸದಸ್ಯರಾದ ರಮೇಶ್, ನಂಜಪ್ಪ, ಮಂಜುನಾಥ್, ಮಾದೇವಮ್ಮ, ಸುಲೋಚನಾ, ಕಿಟ್ಟಿ, ಆನಂದ್,ಸಾರಂಗಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ನಾಗೇಶ್, ಗ್ರಾ.ಪಂ ಮಾಜಿ ಸದಸ್ಯ ಧರ್ಮ, ಮುಖಂಡರಾದ ಮರೀಸ್ವಾಮಿ ಗೌಡ, ನಂಜುಂಡೇಗೌಡ, ಮಂಜುನಾಥ್, ಈಶ್ವರ್(ಇಶಾ), ಯೋಗೇಶ್, ನಾಗೇಶ್, ಮನು, ರಾಜಣ್ಣ, ಪಟೇಲ್ ಜಯರಾಮ್, ಡೇರಿ ಜಗದೀಶ್,ರವಿ ಚಿಕ್ಕರನಹಳ್ಳಿ ಸೇರಿದಂತೆ ಇತರರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ

[…] […]