ಹಾಸನ, ಜೂನ್ 30: ಕಾನೂನು ಸುವ್ಯವಸ್ಥೆಯ ರಕ್ಷಣೆಯಲ್ಲಿ ಪಾಲ್ಗೊಂಡು, ‘ಆಪರೇಷನ್ ಸಿಂಧೂರ’ ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಯ ಸೈನಿಕ ರಮೇಶ್ ಅವರು ಅಧಿಕೃತವಾಗಿ ಸೇವೆಯಿಂದ ನಿವೃತ್ತಿ ಹೊಂದಿ ಜುಲೈ 3 ರಂದು ನಗರಕ್ಕೆ ಆಗಮಿಸುತ್ತಿದ್ದು, ಅವರ ಬರುವಿಕೆಯನ್ನು ಅದ್ದೂರಿಯಾಗಿ ಸಂಭ್ರಮಿಸಲು ಜಾಥವನ್ನು ಆಯೋಜಿಸಲಾಗಿದೆ.
ಗುರುವಾರ ಬೆಳಗ್ಗೆ 10.30 ಕ್ಕೆ, ಹಾಸನ ಡೈರಿ ಸರ್ಕಲ್ನಿಂದ BTಕೊಪ್ಪಲುವರೆಗೆ ವಿಶೇಷ ವಿದಾಯ ಸವಾರಿ ಆಯೋಜಿಸಲಾಗಿದೆ. ಸಹೋದ್ಯೋಗಿಗಳು, ಕುಟುಂಬಸ್ಥರು ಮತ್ತು ನಾಗರಿಕರು ಈ ಜಾಥಾದಲ್ಲಿ ಭಾಗವಹಿಸಿ ಕೃತಜ್ಞತೆ ಸಲ್ಲಿಸುವ ನಿರೀಕ್ಷೆಯಿದೆ.
ಪ್ರಮುಖ ಹುದ್ದೆಗಳಲ್ಲಿ ಸೇವೆ:
ಅನೇಕ ದಕ್ಷ ಕಾರ್ಯಾಚರಣೆಗಳ ಭಾಗರಾಗಿದ್ದ ರಮೇಶ್ ಅವರು ಅಪರಾಧ ಶಾಖೆ, ಗುಪ್ತಚರ ವಿಭಾಗದಲ್ಲಿ ಸೇವೆ ಸಲ್ಲಿಸಿ, ವಿಶಿಷ್ಟ ಗುರುತು ಮೂಡಿಸಿಕೊಂಡಿದ್ದಾರೆ. ‘ಆಪರೇಷನ್ ಸಿಂಧೂರ’ ಎಂಬ ಹೆಸರಿನೊಳಗೆ ನಡೆದ ಕ್ರಿಯಾತ್ಮಕ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಿದ್ದರು.
ಸಹೋದ್ಯೋಗಿಗಳ ಪ್ರಕಾರ, ರಮೇಶ್ ಅವರು ಶಿಸ್ತು, ದಕ್ಷತೆ ಹಾಗೂ ಮಾನವೀಯ ಮೌಲ್ಯಗಳಿಗೆ ಪ್ರತೀಕವಾಗಿದ್ದರು. ನಿವೃತ್ತಿಯ ಬಳಿಕ ಅವರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ನಿರೀಕ್ಷೆ ಇದೆ.
