ಹಾಸನ, ಜೂನ್ 30: ಇತ್ತೀಚೆಗೆ ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 20ಕ್ಕೂ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲೇ, ಜಿಲ್ಲೆಯಾದ್ಯಂತ ನಾಗರೀಕರಿಗೆ ಸಿಪಿಆರ್ (Cardiopulmonary Resuscitation) ತರಬೇತಿ ನೀಡುವ ಮೂಲಕ ಸಾವಿನ ಪ್ರಕರಣಗಳನ್ನು ತಪ್ಪಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ಹಾಸನ ಘಟಕದ ಮಾಜಿ ಅಧ್ಯಕ್ಷರು,ಡಾ. ಎನ್. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತನಾಡಿ, ಆರೋಗ್ಯ ಇಲಾಖೆ,ಸ್ವಯುಂ ಸೇವಾ ಸಂಘ ಸಂಸ್ಥೆಗಳು ವೈದ್ಯಕೀಯ ಸಂಘಗಳು, ಸಾಮಾಜಿಕ ಕಳಕಳಿಯ ಎಲ್ಲಾ ಸಂಘ-ಸಂಸ್ಥೆಗಳು, ಜಿಲ್ಲೆಯ ನಾಗರೀಕರಿಗೆ, ವಿಶೇಷವಾಗಿ ಯುವಕ ಯುವತಿಯರು ವ್ಯಾಪಾರಸ್ಥರು ರೈತಾಪಿವರ್ಗದವರು ಮಹಿಳೆಯರು ಸರ್ಕಾರಿ ಸಿಬ್ಬಂದಿಗಳು ಚಾಲಕರುಗಳು ಹೀಗೆ ಪ್ರತಿಯೊಬ್ಬರಿಗೂ ಕೂಡ ಸಿಪಿಆರ್ (CPR) ಅಂದರೆ ಕಾರ್ಡಿಯೋಪುಲ್ಮನರಿ ರಿಸುಸಿಟೇಶನ್ (Cardiopulmonary Resuscitation) ಬಗ್ಗೆ ಬೃಹತ್ ಆಂದೋಲನ ರೂಪದಲ್ಲಿ ತರಬೇತಿ ಶಿಬಿರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಾಮಾನ್ಯರೂ ಸಹ ಅಮೂಲ್ಯವಾದ ಜೀವ ಉಳಿಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಿಪಿಆರ್ ( CPR- Cardiopulmonary Resuscitation) ಎಂದರೇ ?
ಸಿಪಿಆರ್ (CPR) ಎಂಬುದು ಜೀವ ರಕ್ಷಕ ತುರ್ತು ಚಿಕಿತ್ಸೆಯಾಗಿದೆ. ಹೃದಯಸ್ತಂಬನದಿಂದ ಕುಸಿದು ಬಿದ್ದ ಸಂದರ್ಭದಲ್ಲಿ ಜೀವ ಉಳಿಸುವ ತುರ್ತು ಪ್ರಥಮ ಚಿಕಿತ್ಸಾ ಪ್ರಕ್ರಿಯೆ. ಇದು ಹೃದಯ ಸ್ತಂಭನವಾದಾಗ ಅಥವಾ ಉಸಿರಾಟ ನಿಂತಾಗ ವ್ಯಕ್ತಿಯ ಜೀವವನ್ನು ಉಳಿಸಲು ಸ್ಥಳದಲ್ಲೇ ನೀಡುವ ತುರ್ತು ಪ್ರಥಮ ಚಿಕಿತ್ಸೆ. ಹೃದಯ ಮತ್ತು ಶ್ವಾಸಕೋಶಗಳನ್ನು ಪುನಶ್ಚೇತನಗೊಳಿಸಿ ರಕ್ತ ಸಂಚಾರ ಮತ್ತು ಉಸಿರಾಟವನ್ನು ಮರುಸ್ಥಾಪಿಸಲು ಸಹಾಯ ಮಾಡುತ್ತದೆ. ತನ್ಮೂಲಕ ಹೃದಯ ಸ್ತಂಭ ನದಿಂದ ಕುಸಿದು ಬಿದ್ದ ವ್ಯಕ್ತಿಯ ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ.
ವಿಶೇಷವಾಗಿ ಹೃದಯ ಸ್ತಂಭನ ಅಥವಾ ಉಸಿರಾಟ ನಿಲ್ಲುವ ಸಂದರ್ಭಗಳಲ್ಲಿ ಅದು ಅನುಪಮ ಪಾತ್ರ ವಹಿಸುತ್ತದೆ. ತರಬೇತಿ ಪಡೆದ ಸಾಮಾನ್ಯ ನಾಗರೀಕರು ಕೂಡ ಈ ಚಿಕಿತ್ಸೆಯನ್ನು ನೀಡಬಲ್ಲರು ಎಂದು ರಮೇಶ್ ಅವರು ತಿಳಿಸಿದ್ಧಾರೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಸಿಪಿಆರ್ (CPR) ನೀಡುವ ಪರಿಣಿತಿಯನ್ನು ಪ್ರತಿಯೊಬ್ಬ ನಾಗರಿಕರು ಪಡೆದಿರುತ್ತಾರೆ ಎಂಬ ಅಂಶವನ್ನು ನಾವು ಇಲ್ಲಿ ಮನಗಾಣಬೇಕಾಗಿದ್ದು, ಈ ತರಬೇತಿಯಿಂದ ಕೆಲ ಅಮೂಲ್ಯ ಜೀವಗಳನ್ನು ಉಳಿಸಬಹುದಾದ ಆಶಾಭಾವನೆಯಾಗಿದೆ ಎಂದಿದ್ದಾರೆ.

[…] ಇದನ್ನು ಓದಿ: ಹಾಸನ: ಹೃದಯಾಘಾತ ಪ್ರಕರಣಗಳ ನಡುವೆ ತುರ್ತು … […]
[…] […]