ಬೆಂಗಳೂರು, ಜುಲೈ 23: ನಗರದ ಬೃಹತ್ ಬಿಎಂಟಿಸಿ ಬಸ್ ನಿಲ್ದಾಣಗಳಲ್ಲೊಂದಾದ ಕಲಾಸಿಪಾಳ್ಯ ಬಸ್ ನಿಲ್ದಾಣದ ಶೌಚಾಲಯದ ಬಳಿ ಶಂಕಾಸ್ಪದ ಬ್ಯಾಗ್ನಿಂದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೊನೇಟರ್ ಪತ್ತೆಯಾದ ಹಿನ್ನೆಲೆ, ಸ್ಥಳದಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ಶಂಕಾಸ್ಪದ ಬ್ಯಾಗ್ನ್ನು ಕಂಡ ಸಾರ್ವಜನಿಕರು ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕಲಾಸಿಪಾಳ್ಯ ಠಾಣೆಯ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಬಾಂಬ್ ತಪಾಸಣೆ ಹಾಗೂ ನಿಷ್ಕ್ರಿಯ ದಳಗಳನ್ನು ಸಂಪರ್ಕಿಸಿದರು.
ಘಟನೆ ಹಿನ್ನೆಲೆ ಸ್ಥಳಕ್ಕೆ ಬಾಂಬ್ ತಪಾಸಣೆ ದಳ (BDS) ಮತ್ತು ಬಾಂಬ್ ನಿಷ್ಕ್ರಿಯ ದಳ (BDDS) ತಕ್ಷಣವೇ ಭೇಟಿ ನೀಡಿ ಶಂಕಾಸ್ಪದ ವಸ್ತುಗಳನ್ನು ಪರಿಶೀಲನೆ ನಡೆಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಬ್ಯಾಗ್ನಲ್ಲಿದ್ದ ವಸ್ತುಗಳು ಸಮಾರಂಭ ಅಥವಾ ಆತಂಕ ಸೃಷ್ಟಿಸಲು ಬಳಸಲಾಗಬಹುದೆಂಬ ಶಂಕೆ ವ್ಯಕ್ತವಾಗಿದೆ.
ಪೊಲೀಸರು ಸದ್ಯಕ್ಕೆ ಆ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ, ಸಾರ್ವಜನಿಕರನ್ನು ದೂರ ಉಳಿಯಲು ಸೂಚಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುವ ಕಾರ್ಯ ನಡೆಯುತ್ತಿದೆ. ಇಡೀ ಘಟನೆಯ ಬಗ್ಗೆ ಕಾನೂನುಬಾಹಿರ ಚಟುವಟಿಕೆ ಎಂಬ ಶಂಕೆ ವ್ಯಕ್ತಪಡಿಸಿ ತನಿಖೆ ಆರಂಭಿಸಿದ್ದಾರೆ.
ವಿಡೀಯೋ ನೋಡಿ:

[…] […]
[…] […]