ಬೆಂಗಳೂರು, ಜುಲೈ 24: ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರ ಹೇಳಿಕೆಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಮಹದಾಯಿ ಯೋಜನೆಗೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡುವುದಿಲ್ಲ ಎಂಬ ಗೋವಾ CM ಪ್ರಮೋದ್ ಸಾವಂತ್ ಅವರ ಹೇಳಿಕೆ ಖಂಡನೀಯ. ಸುಪ್ರೀಂ ಕೋರ್ಟ್ನಲ್ಲಿ ನಾವು ಸಲ್ಲಿಸಿರುವ ಅರ್ಜಿ ಹಿಂಪಡೆದು, ಶೀಘ್ರವೇ ಕಾಮಗಾರಿ ಆರಂಭಿಸುತ್ತೇವೆ. ಅವರು ಅದನ್ನು ತಡೆಯಲಿ, ನಾನೂ ನೋಡುತ್ತೇನೆ” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ವಿಧಾನಸೌಧ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, “ಗೋವಾ ಸಿಎಂ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿ ಹೇಳಿಕೆ ನೀಡಿದ್ದಾರೆ. ಅವರಿಗೆ ದೇಶದ ಒಕ್ಕೂಟ ವ್ಯವಸ್ಥೆಯ ಮೇಲೂ ಗೌರವವಿಲ್ಲ. ಯೋಜನೆ ಜಾರಿಗೆ ನ್ಯಾಯಾಧಿಕರಣ ತೀರ್ಪು ಬಂದಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಕಾಮಗಾರಿಗೂ ಚಾಲನೆ ನೀಡಲಾಗುತ್ತದೆ” ಎಂದು ಸ್ಪಷ್ಟಪಡಿಸಿದರು.
ಇದನ್ನು ಓದಿ: ಮಂಗಳೂರು: ಜೈಲಿನಲ್ಲಿ ಸುಲಿಗೆ ಆರೋಪದ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಪೊಲೀಸರು ಕೆಸಿಒಸಿಎ ಪ್ರಕರಣ ದಾಖಲು
‘ಯೋಜನೆ ಜಾರಿಗೆ ಕೇಂದ್ರ ತಡೆಯಲು ಸಾಧ್ಯವಿಲ್ಲ’
“ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿಯೇ ಕೇಂದ್ರದ ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಬಿಜೆಪಿ ನಾಯಕರು ಯೋಜನೆ ಜಾರಿಗೊಳಿಸಲು ಬಾಗಿಲು ತೆರೆದು ಸಂಭ್ರಮಿಸಿದ್ರು. ಈಗ ಗೋವಾ ಸಿಎಂ ಮಾತ್ರ ತಡೆಯೋಣ ಎನ್ನುತ್ತಿದ್ದಾರೆ. ಇದು ನಾಚಿಕೆಗಾರ ವಿಷಯ,” ಎಂದು ಡಿಕೆಶಿ ಟೀಕಿಸಿದರು.
‘ಎಲ್ಲಾ ಸಂಸದರು ಒಂದಾಗಬೇಕು’
“ಇದು ರಾಜ್ಯದ ಸ್ವಾಭಿಮಾನದ ವಿಷಯ. ನಮ್ಮ 28 ಲೋಕಸಭಾ ಸದಸ್ಯರು, 12 ರಾಜ್ಯಸಭಾ ಸದಸ್ಯರು ಈ ವಿಷಯದಲ್ಲಿ ಒಂದಾಗಿ ಹೋರಾಡಬೇಕು. ಕೇವಲ ಗೋವಾದ ಒಂದು ಸಂಸದರ ಹಿತಕ್ಕಾಗಿ ಕರ್ನಾಟಕವನ್ನು ಮಾರಲು ಬಿಡಲು ಸಾಧ್ಯವಿಲ್ಲ. ನಾನು ಎಲ್ಲ ಸಂಸದರನ್ನು ಭೇಟಿಯಾಗಿ, ಕೇಂದ್ರದ ಜಲಶಕ್ತಿ ಸಚಿವರು ಹಾಗೂ ಪ್ರಧಾನಿ ಅವರನ್ನು ಭೇಟಿಯಾಗಿ ನಮ್ಮ ಹಕ್ಕಿನ ಬಗ್ಗೆ ಸ್ಪಷ್ಟನೆ ಕೊಡಿಸುತ್ತೇನೆ,” ಎಂದರು.
‘ಅರಣ್ಯ ಮತ್ತು ಜಲಶಕ್ತಿ ಇಲಾಖೆ ರಾಜಕೀಯ ಮಾಡುತ್ತಿಲ್ಲ’
ಡಿಕೆ ಶಿವಕುಮಾರ್, “ಅರಣ್ಯ ಸಚಿವರು, ಜಲಶಕ್ತಿ ಸಚಿವರು ಎರಡೂ ಈ ಯೋಜನೆಗೆ ತೊಡಗಿರುವ ರಾಜಕೀಯ ಕಸ ಹರಿಯಲು ತಯಾರಿಲ್ಲ. ನನ್ನ ಅನುಭವದಲ್ಲಿ ಅವರು ಅಭಿವೃದ್ಧಿಗೆ ಅನುಕೂಲಕರ ನಿಲುವು ಹೊಂದಿದ್ದಾರೆ. ಸಮಸ್ಯೆ ಗೋವಾದಲ್ಲಿ ಇದೆ. ಅದನ್ನು ನಿವಾರಿಸಲು ನಾವು ಕೈಜೋಡಿಸಬೇಕು” ಎಂದಿದ್ದಾರೆ.
ಇದನ್ನು ನೋಡಿ :ಅಂಬೇಡ್ಕರ್ ವಿರೋಧಿಗಳಿಗೆ ತಕ್ಕ ಶಾಸ್ತಿ: ಬೆಂವಿವಿ ಗೆ ಅಂಬೇಡ್ಕರ್ವಾದಿಗಳ ತೀವ್ರ ಎಚ್ಚರಿಕೆ
ಟಿ.ನರಸೀಪುರ: ಭ್ರಷ್ಟಾಚಾರದ ಆರೋಪ – ಪುರಸಭೆ ಸೂಪರ್ಸೀಡ್ ಮಾಡಬೇಕೆಂದು ಬಿಜೆಪಿ ಆಗ್ರಹ

[…] ಮಹದಾಯಿ ಯೋಜನೆ ಪ್ರಾರಂಭಿಸುತ್ತೇವೆ, ಯಾರು … […]