ಹಾಸನ: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಯೋಗ ಚೇತನ ಕೇಂದ್ರ ಅಡಗೂರು ಹಾಗೂ ಹಾಸನಾಂಬ ಲಯನ್ಸ್ ಕ್ಲಬ್ ಹಾಸನ ಇವರ ಸಂಯುಕ್ತ ಆಶ್ರಯದಲ್ಲಿ, ರಾಜೀವ್ ಆಯುರ್ವೇದಿಕ್ ಆಸ್ಪತ್ರೆಯ ಸಹಯೋಗದೊಂದಿಗೆ, ಹಾಸನದ ಕೆ.ಎಸ್.ಆರ್.ಟಿ.ಸಿ ತರಬೇತಿ ಕೇಂದ್ರದ ಚಾಲಕರು ಮತ್ತು ನಿರ್ವಾಹಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಸ್ತೆ ಸುರಕ್ಷತೆ ಕುರಿತು ಅರಿವು ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ತರಬೇತಿ ಕೇಂದ್ರದ ಪ್ರಾಂಶುಪಾಲರು ಉದ್ಘಾಟಿಸಿದರು. ಕ್ಲಬ್ಬಿನ ಅಧ್ಯಕ್ಷರು ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಲಯನ್ಸ್ ಕ್ಲಬ್ನ ಮಂಜುನಾಥ್ ಅವರು ಅಪಘಾತದ ಸಂದರ್ಭಗಳಲ್ಲಿ ಅನುಸರಿಸಬೇಕಾದ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಕೇಂದ್ರದ ಬೋಧಕ ಮಂಜೇಗೌಡ ಅವರು ರಸ್ತೆ ಸುರಕ್ಷತಾ ಚಾಲನೆ ಕುರಿತು ಸಲಹೆ ನೀಡಿದರು. ರಾಜೀವ್ ಆಯುರ್ವೇದಿಕ್ ಆಸ್ಪತ್ರೆಯ ಡಾ. ಉದಯ ಗಣೇಶ್ ಅವರು ಪ್ರಥಮ ಚಿಕಿತ್ಸೆ ಕುರಿತು ಪ್ರಾಯೋಗಿಕ ಜ್ಞಾನ ಹಂಚಿಕೊಂಡರು.

ಸುಮಾರು 80 ಕ್ಕೂ ಹೆಚ್ಚು ಚಾಲಕರು ಮತ್ತು ನಿರ್ವಾಹಕರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದರು. ಕ್ಲಬ್ ಕಾರ್ಯದರ್ಶಿ ಹಾಗೂ ಸದಸ್ಯರಾದ ಮಂಜುನಾಥ್, ಕರುಣೇಶ ಸೇರಿದಂತೆ ಹಲವರು ಹಾಜರಿದ್ದರು. ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಆಯೋಜಕರು ಅಭಿನಂದನೆ ಸಲ್ಲಿಸಿದರು.
