ಟಿ.ನರಸೀಪುರ : ಗ್ರಾಮೀಣ ಪ್ರತಿಭೆಗಳು ರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆಯ ಶಿಖರವೇರಿರುವುದು ನಮ್ಮ ಕಣ್ಣ ಮುಂದೆಯೇ ಇದೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೋಳಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಕ್ರೀಡಾಪಟುಗಳನ್ನು ಉತ್ತೇಜಿಸಿದರು.
ತಾಲ್ಲೂಕಿನ ತಲಕಾಡು ಹೋಬಳಿಯ ಮೇದನಿ ಗ್ರಾಮದಲ್ಲಿ 2025-26 ನೇ ಸಾಲಿನ ಹೋಬಳಿ ಮಟ್ಟದ ಕ್ರೀಡಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿ ಈಗಾಗಲೇ ನಮ್ಮ ತಾಲ್ಲೂಕಿನ ಹಲವಾರು ಪ್ರತಿಭೆಗಳು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ತಾಲ್ಲೂಕಿನ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ. ತಾವು ಕೂಡ ನೀವು ಭಾಗವಹಿಸುವ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ಯಶಸ್ವಿಯಾಗಬೇಕೆಂದರು.

ಗ್ರಾ.ಪಂ, ಬಗರ್ ಹುಕುಂ ಸದಸ್ಯರು ಹಾಗೂ ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷರಾದ ಎಂ.ಎನ್.ಕುಮಾರ್ ಮಾತನಾಡಿ ತಲಕಾಡು ಹೋಬಳಿಯ ಗಡಿಗ್ರಾಮವಾದ ಮೇದನಿಯಲ್ಲಿ ಹೋಬಳಿ ಮಟ್ಟದ ಕ್ರೀಡಾ ಕೂಟ ನಡೆಯತ್ತಿರುವುದು ತುಂಬಾ ಸಂತಸವನ್ನು ಉಂಟುಮಾಡಿದೆ. ನಮ್ಮ ಪ್ರೌಢಶಾಲೆಯ ಮಕ್ಕಳು ಪ್ರತಿವರ್ಷ ನಡೆಯುವ ತಾಲ್ಲೂಕು,ಜಿಲ್ಲೆ,ರಾಜ್ಯ ಹಾಗೂ ಅಂತರರಾಜ್ಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ತರುತ್ತಿದ್ದು ನಮ್ಮ ಗ್ರಾಮದ ಹೆಮ್ಮೆಯಾಗಿದೆ.ಆದ್ದರಿಂದ ಮೇದನಿ ಗ್ರಾಮದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿದರೆ ಕ್ರೀಡಾಪಟುಗಳಿಗೆ ಸಹಕಾರಿಯಾಗುತ್ತದೆ ಮುಂದಿನ ದಿನಗಳಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸ್ಥಳೀಯ ಪ್ರತಿಭೆಗಳು ತಮ್ಮ ಛಾಪನ್ನು ಮೂಡಿಸಿ ತಾಲ್ಲೂಕಿಗೆ ಒಳ್ಳೆಯ ಹೆಸರು ತರುತ್ತಾರೆ.ಈಗಾಗಲೇ ಹಲವಾರು ಭಾರಿ ನಮ್ಮ ಶಾಸಕರು ಹಾಗೂ ಸಚಿವರೂ ಆಗಿರುವ ಡಾ.ಹೆಚ್.ಸಿ.ಮಹದೇವಪ್ಪರವರು ಹಾಗೂ ಸಂಸದರಾದ ಸುನಿಲ್ ಬೋಸ್ ರವರಿಗೆ ಮನವಿ ಸಲ್ಲಿಸಿ ಮಾತನಾಡಿದ್ದು ಆದಷ್ಟು ಬೇಗ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕಲಾವತಿಯವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಉಪಾಧ್ಯಕ್ಷರಾದ ರೂಪರಾಜೇಶ್,ಜಿ.ಪಂ.ಮಾಜಿ ಸದಸ್ಯ ಟಿ.ಎಚ್.ಮಂಜುನಾಥ್, ತಾಲ್ಲೂಕು ಪಂಚಾಯತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕುಕ್ಕೂರು ಗಣೇಶ್, ಬಿ.ಆರ್.ಸಿ.ನಾಗೇಶ್, ಮುಖ್ಯ ಶಿಕ್ಷಕ ಮರಿಸ್ವಾಮಿ, ಸಹ ಶಿಕ್ಷಕರುಗಳಾದ ಪಾಲ್ ಪ್ರೇಮ್ ಚಂದ್,ಮಹೇಶ್ವರಿ,ರಾಜಮ್ಮ,ಪ್ರಭಾ,ಅನಿತಾ,ಚಂದನ್,ಪಿಡಿಒ ಕೆಂಪೇಗೌಡ,ಎಸ್.ಡಿ.ಎಂ.ಸಿ.ಅದ್ಯಕ್ಷ ಆರ್ ರವಿ,ಸಿದ್ದನಾಯಕ, ಸಿದ್ದಮ್ಮ,ಜಯಮ್ಮ,ಕುಮಾರ್ ಶಿವನಂಜು,ಗೌಡರ ಬಂಗಾರಪ್ಪ,ಮಹದೇವಸ್ವಾಮಿ,ಕಾಳ ದುಂಡನಾಯಕ, ಆರ್.ಮಹದೇವ, ಗಣೇಶ್, ವೆಂಕಟೇಶ, ಕಾಂತರಾಜು,ಜವರಯ್ಯ,ಕೃಷ್ಣ,ಮಂಜು,ರಂಗಸ್ವಾಮಿ, ಸಿದ್ದರಾಜು, ಚೆಲುರಾಜು,ಸಿದ್ದಮಲ್ಲಪ್ಪ ಸೇರಿದಂತೆ ತಲಕಾಡು ಹೋಬಳಿಯ ಎಚ್.ಪಿ.ಎಸ್. ಶಾಲೆಯ ಎಲ್ಲಾ ಮುಖ್ಯ ಶಿಕ್ಷಕರು,ದೈಹಿಕ ಶಿಕ್ಷಕರು,ತೀರ್ಪುಗಾರರು,, ಸಹಶಿಕ್ಷಕರು ಸೇರಿದಂತೆ ಹಲವರು ಹಾಜರಿದ್ದರು.
– ಎಂ.ನಾಗೇಂದ್ರಕುಮಾರ್
