ಟಿ.ನರಸೀಪುರ : ಸರ್ಕಾರ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಯುವ ಜನತೆಗೆ ಭವಿಷ್ಯದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳುವಲ್ಲಿ ಮುಂದಾಗಬೇಕೆಂದು ಪುರಸಭೆ ಮುಖ್ಯಾಧಿಕಾರಿ ಡಿ.ಪುಟ್ಟರಾಜು ತಿಳಿಸಿದರು.
ತಾಲ್ಲೂಕಿನ ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನನ್ನವ್ವ ಸಾಂಸ್ಕೃತಿಕ ಕಲಾ ತಂಡವು ಮೇರಾ ಯುವ ಭಾರತ್ ಮೈಸೂರು ರಾಷ್ಟ್ರೀಯ ಸೇವಾ ಯೋಜನೆ ಘಟಕ, ಸರ್ಕಾರಿ ಪದವಿ ಪೂರ್ವ ಕಾಲೇಜು ಬನ್ನೂರು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕೇಂದ್ರ ಸರ್ಕಾರದ ನೇರ ಯುವ ಭಾರತ್ ಕಚೇರಿಯ ವತಿಯಿಂದ ಯುವ ಜನರಿಗೆ ತಂದಿರುವ ಹಲವಾರು ಉಪಯುಕ್ತ ಯೋಜನೆಗಳ ಮಾಹಿತಿ ಕಾರ್ಯಗಾರವನ್ನು ಆಯೋಜಿಸಿದ್ದು ಇದರಲ್ಲಿ ಸ್ವಚ್ಛ ಭಾರತ್ ಸ್ಕಿಲ್ ಇಂಡಿಯಾ ಡಿಜಿಟಲ್ ಇಂಡಿಯಾ ಜಲಜೀವನ್ ಮಿಷನ್ ವಿಷಯಗಳನ್ನ ಆಧರಿಸಿ ಒಂದು ದಿನದ ಕಾರ್ಯಗಾರವನ್ನು ಆಯೋಜಿಸಿದ್ದು ಇದರಲ್ಲಿ ನಮ್ಮ ಇಲಾಖೆಗೆ ಸಂಬಂಧ ಪಟ್ಟ ಸ್ವಚ್ಛ ಭಾರತ ಅತಿ ಮುಖ್ಯವಾದದ್ದು ಸ್ವಚ್ಛತೆ.ಆರೋಗ್ಯ ಇದ್ದಲ್ಲಿ ದೇಶ ಪ್ರಗತಿಯತ್ತ ಸಾಗಲು ಸಾಧ್ಯವಾಗುತ್ತದೆ ಎಂದರು.
ಹಿರಿಯ ಆರೋಗ್ಯ ನಿರೀಕ್ಷಕರಾದ ಹರಿಪ್ರಸಾದ್ ರವರು ಜಲಜೀವನ್ ಮಿಷನ್ ಕುರಿತು ಮಾತನಾಡಿ ಮನುಷ್ಯನ ಅತಿಯಾದ ದುರಾಸೆಗಳಿಂದ ಕುಡಿಯುವ ನೀರು ಕೂಡ ಅಂತರ್ಜಲ ಸೇರಿ ಕಲ್ಮಶವಾಗುತ್ತಿರುವುದರಿಂದ ಪ್ರತಿ ಮನೆ ಮನೆಗೂ ಶುದ್ದ ಕುಡಿಯುವ ನೀರನ್ನು ತಲುಪಿಸುವ ಉದ್ದೇಶದಿಂದ ಮಿಷನ್ ಎಂಬ ಅದ್ಭುತವಾದ ಕಾರ್ಯಕ್ರಮವನ್ನು ತಂದು ಕೇಂದ್ರ ಸರ್ಕಾರ ಪ್ರತಿ ಮನೆಮನೆಗೂ ಶುದ್ದ ಕುಡಿಯುವ ನೀರನ್ನು ತಲುಪಿಸುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ಟಿ.ನರಸೀಪುರ ತಾಲೂಕು ಪಂಚಾಯಿತಿ ಕಾರ್ಯಕ್ರಮ ವ್ಯವಸ್ಥಾಪಕ ರೂಪಶ್ರೀ ಹಾಗೂ ತಾ.ಪಂ.ವಲಯ ಮೇಲ್ವಿಚಾರಕ ಎಂ.ಸುರೇಶ್ ರವರು ಸ್ಕಿಲ್ ಇಂಡಿಯಾ,ಡಿಜಿಟಲ್ ಇಂಡಿಯಾ ಕುರಿತು ಮಾತನಾಡಿ ವ ಪ್ರತಿಯೊಬ್ಬ ಯುವಜನರಲ್ಲೂ ಅವರದೇ ಆದ ಕೌಶಲ್ಯಗಳು ಇದ್ದೇ ಇರುತ್ತವೆ ಅಂತ ಪ್ರತಿಭೆಗಳಿಗೆ ಸರ್ಕಾರ ಸ್ಕಿಲ್ ಇಂಡಿಯಾ ಯೋಜನೆ ಮುಖಾಂತರ ನೆರವಾಗುತ್ತಿದೆ.ಜಗತ್ತು ಆಧುನಿಕರಣವಾದಂತೆ ಪ್ರತಿಯೊಂದು ಕ್ಷೇತ್ರವು ಡಿಜಿಟಲೀಕರಣವಾಗುತ್ತಿರುವುದು ಬಹಳ ಒಳ್ಳೆಯದು ಹಲವಾರು ವರ್ಷಗಳಿಂದ ಎಲ್ಲಾ ಕಚೇರಿಗಳಲ್ಲೂ ಪೇಪರ್ ಆಧಾರದ ಮೇಲೆ ನಡೆಯುತ್ತಿದ್ದವು ಇಂದು ಆಧುನಿಕರಣಗೊಂಡು ಎಲ್ಲಾ ದಾಖಲೆಗಳು ಸುರಕ್ಷಿತವಾಗಿ ಸಂರಕ್ಷಿಸಲು ಈ ಯೋಜನೆಯಿಂದ ಅನುಕೂಲವಾಗುತ್ತಿವೆ. ಸೋಶಿಯಲ್ ಮೀಡಿಯಾ, ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳು ಸಮಯ, ಹಣ ಸರಳೀಕೃತವಾಗಿವೆ.ಇವೆಲ್ಲವೂ ಸಾಧ್ಯವಾಗಿರುವುದು ಇಂಡಿಯಾ ಯೋಜನೆಯಿಂದ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಎಂ ಬಿ ನಂಜುಂಡಸ್ವಾಮಿ ರವರು ಮಾತನಾಡಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳ ಬಳಿಗೆ ಇಷ್ಟೊಂದು ವಿಚಾರವನ್ನು ತಂದು ಪ್ರಸರಿಸುತ್ತಿರುವುದು ವಿದ್ಯಾರ್ಥಿಗಳ ಸೌಭಾಗ್ಯವೇ ಸರಿ ಇಂತ ವಿಚಾರಗಳನ್ನ ಪ್ರತಿಯೊಬ್ಬ ವಿದ್ಯಾರ್ಥಿಗಳು ಯಾವುದೇ ಭಾಗದಿಂದ ಆದರೂ ಸರಿಯೇ ತಿಳಿದು ಮುಂದಿನ ಜೀವನಕ್ಕೆ ಹೆಜ್ಜೆ ಇಡುವುದು ತುಂಬಾ ಅತಿ ಮುಖ್ಯವಾದಂತ ಕಾರ್ಯಕ್ರಮ ಇದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಧರಣೇಶ್,ಕಾರ್ಯಕ್ರಮದ ವ್ಯವಸ್ಥಾಪಕ ನನ್ನವ್ವ ಸಾಂಸ್ಕೃತಿಕ ಕಲಾತಂಡದ ಅಧ್ಯಕ್ಷರಾದ ಯಾಚೇನಹಳ್ಳಿ ಮಹದೇವ್, ಕಾಲೇಜು ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
- ಎಂ. ನಾಗೇಂದ್ರ ಕುಮಾರ್
