ಹಾಸನ : ಅನಾರೋಗ್ಯ ಪೀಡಿತ ತಾಯಿ ಪದ್ಮಮ್ಮ ಅವರಿಗೆ ಮಗನಿಂದ ಅನ್ಯಾಯವಾಗಿದ್ದು ವಾಸಕ್ಕೆ ಮನೆ ಬಿಟ್ಟುಕೊಡದೆ ದೌರ್ಜನವೆಸಗಿದ್ದಾರೆ ಎಂದು ಪುತ್ರಿ ಗೀತಾ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಂದೆ ಹನುಮೇಗೌಡ ಸಾವಿನ ನಂತರ ಅನುಕಂಪದ ಆಧಾರದ ಮೇಲೆ ಮಗ ಕುಮಾರಸ್ವಾಮಿ ಅವರಿಗೆ ಸರ್ಕಾರಿ ನೌಕರಿ ದೊರೆಯಿತು .ಬಳಿಕ ತಂದೆಯ ಕೆಲಸ ಪಡೆದು ಪುತ್ರ ತಾಯಿಗೆ ದ್ರೋಹವೆಸಗಿ ಆಸ್ತಿ ಮನೆ ಎಲ್ಲವನ್ನು ತನ್ನ ಹೆಸರಿಗೆ ಮಾಡಿಸಿಕೊಂಡು. ತಮ್ಮನ್ನು ಹೊರ ಹಾಕಿದ್ದಾರೆ ಎಂದು ದೂರಿದರು .
ಇದೀಗ ಮನೆ ಇಲ್ಲದೆ ತಾಯಿ ಪದ್ಮಮ್ಮ ಹಾಗೂ ನಾನು ಪೀಜಿ ಯಲ್ಲಿ ವಾಸವಿದ್ದೇವೆ. ತಾಯಿ ಅನಾರೋಗ್ಯ ಪೀಠಿತರಾಗಿದ್ದು ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತಿಲ್ಲ .ಈ ಸಂಬಂಧ ಉಪವಿಭಾಗಾಧಿಕಾರಿ ಅವರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರು ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿಯೂ ಸಚಿವರ ಗಮನಕ್ಕೆ ತರಲಾಗಿದ್ದು ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಂದಿನ 15 ದಿನದಲ್ಲಿ ನಮಗೆ ಸೂಕ್ತ ನ್ಯಾಯ ದೊರೆಯದಿದಲ್ಲಿ ದಯಾ ಮರಣಕ್ಕೆ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಮಗನಿಂದ ಮನೆ ಕೊಡಿಸುವಂತೆ ಜಿಲ್ಲಾಧಿಕಾರಿ ಅವರಲ್ಲಿ ಮನವಿ ಮಾಡಿದಾಗ ಉಪವಿಭಾಗಾಧಿಕಾರಿಗೆ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದರು ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಇದೀಗ ಅನಾರೋಗ್ಯ ಪೀಡಿತ ತಾಯಿ ಯೊಂದಿಗೆ ಪಿಜಿಯಲ್ಲಿ ವಾಸವಿದ್ದು ಕೂಡಲೇ ನಮಗೆ ನ್ಯಾಯ ಒದಗಿಸುವಂತೆ ಗೀತಾ ಒತ್ತಾಯಿಸಿದರು.
ಪದ್ಮಮ್ಮ ಅವರ ಮಗ ಕುಮಾರಸ್ವಾಮಿ ಉಪ ತಹಶೀಲ್ದಾರಾಗಿ ಕಾರ್ಯನಿರ್ವಹಿಸುತ್ತಿದ್ದು ರಾಜಕೀಯ ವಾಗಿ ಹಾಗೂ ತನ್ನ ಅಧಿಕಾರ ಬಳಸಿಕೊಂಡು ಇಷ್ಟು ವರ್ಷ ಕಿರುಕುಳ ನೀಡಿದ್ದು ದಯಾಮರಣಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನ ಮಾಡಿರುವುದಾಗಿ ತಮ್ಮ ಅಳಲು ತೋಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪದ್ಮಮ್ಮ ಇದ್ದರು.
