ಹಾಸನ: ನಗರದ ಪೆನ್ಷನ್ಮೊಹಲ್ಲಾದ ಹುಣಸಿನಕೆರೆ ಕೋಡಿಯಲ್ಲಿ ಇಸ್ಪೀಟ್ ಅಡ್ಡೆ ಮೇಲೆ ಡಿಸಿಆರ್ಬಿ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 11 ಮಂದಿಯನ್ನು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ನಡೆದ ಈ ದಾಳಿಯಲ್ಲಿ ಜೂಜಾಟಕ್ಕೆ ಪಣಕ್ಕಿಟ್ಟಿದ್ದ ₹19,99,680 ನಗದು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಕೆಲವರು ಹಣದೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ಹೆಸರುಗಳು: ತಮ್ಮಯ್ಯ, ಜಿತೇಂದ್ರ, ಜಲೇಂದ್ರ, ವಿಜಯಕುಮಾರ, ಶಾಂತಪ್ಪ, ಶಶಿಕುಮಾರ, ಅಶೋಕ, ಸರ್ವರಖಾನ್, ಸುಮನ್ ಹಾಗೂ ಕುಮಾರ್.
ಡಿಸಿಆರ್ಬಿ ಇನ್ಸ್ಪೆಕ್ಟರ್ ವಿನಯ್ಕುಮಾರ್ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
