ಕೆ.ಆರ್.ಪೇಟೆ,ಸೆ.20: ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ 14ಮಂದಿ ನಿರ್ದೇಶಕರ ಆಯ್ಕೆಗೆ ಇದೇ 29ಮಂದಿ ಅಂತಿಮವಾಗಿ ಕಣದಲ್ಲಿ ಉಳಿದ್ದಾರೆ. ಸೆ.28ರಂದು ಚುನಾವಣೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಇಂದು ಕಡೆಯ ದಿನಾಂಕವಾಗಿತ್ತು. ಸಲ್ಲಿಕೆಯಾಗಿದ್ದ 41 ನಾಮಪತ್ರಗಳ ಪೈಕಿ 12 ನಾಮಪತ್ರಗಳನ್ನು ಅಭ್ಯರ್ಥಿಗಳು ವಾಪಸ್ ಪಡೆದಿದ್ದು, ಅಂತಿಮವಾಗಿ 29ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಎ.ವರ್ಗದಿಂದ 12ಮಂದಿ, ಬಿ.ವರ್ಗದಿಂದ 17ಮಂದಿ ಕಣದಲ್ಲಿ ಉಳಿದಿದ್ದಾರೆ ಎಂದು ಟಿಎಪಿಸಿಎಂಎಸ್ ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ತಿಳಿಸಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳ ಮೂಲಕ ಆಯ್ಕೆಯಾಗಬೇಕಾಗಿರುವ ಎ.ತರಗತಿಯ ಅಭ್ಯರ್ಥಿಗಳ ವಿವರ: ಕ್ರಮಸಂಖ್ಯೆ, ಚಹ್ನೆ 1) ಎ.ಟಿ.ಕರಿಶೆಟ್ಟಿ(ಗರಗಸ), 2)ಎಂ.ಎಸ್.ಕಾಂತರಾಜು(ಗಾಜಿನಲೋಟ), 3)ಬಿ.ಎಂ.ಕಿರಣ್(ಮಿಕ್ಸಿ), 4)ಕುರುಬಹಳ್ಳಿ ಕೆ.ಬಿ.ನಾಗೇಶ್(ಹೊಲಿಗೆಯಂತ್ರ), 5)ಟಿ.ಬಲದೇವ್(ಗ್ಯಾಸ್ಸಿಲಿಂಡರ್), 6)ಕೋಡಿಮಾರನಹಳ್ಳಿ ಮಂಜೇಗೌಡ(ಬ್ಯಾಟ್), 7)ಬಲ್ಲೇನಹಳ್ಳಿ ರಮೇಶ್(ಹಣ್ಣುಗಳಬುಟ್ಟಿ), 8)ಮಡುವಿನಕೋಡಿ ಎಂ.ಪಿ.ಲೋಕೇಶ್(ಕಿರೀಟ), 9)ಹರಳಹಳ್ಳಿ ಹೆಚ್.ಟಿ.ಲೋಕೇಶ್(ಆಟೋರಿಕ್ಷಾ), 10)ಅಘಲಯ ಎ.ವೈ.ವಿಜಯಕುಮಾರ್(ಪ್ರೇಷರ್ ಕುಕ್ಕರ್), 11)ಸಾರಂಗಿ ಎಸ್.ಬಿ.ವಿಶ್ವನಾಥ್(ಉಂಗುರ), 12)ಕಿಕ್ಕೇರಿ ಸುರೇಶ್(ಗಾಳಿಪಟ) ಚಿಹ್ನೆ ಅಡಿಯಲ್ಲಿ ಸ್ಪರ್ಧೆ ಮಾಡಿರುತ್ತಾರೆ.
ಬಿ.ತರಗತಿಯಿಂದ 4888ಮಂದಿ ಶೇರುದಾರರಿಂದ ಆಯ್ಕೆಯಾಗಬೇಕಾದ ಅಭ್ಯರ್ಥಿಗಳ ವಿವರ: ಹೆಸರು ಮತ್ತು ಚಿಹ್ನೆ: 1)ಹೊನ್ನೇನಹಳ್ಳಿ ಹೆಚ್.ಎ.ಕೃಷ್ಣೇಗೌಡ,ಬಿಸಿಎಂಬಿ.(ಬ್ಯಾಟ್),2)ಕೆ.ಎನ್.ಕೋಮಲ.ಸಾ.ಮ(ಹಣ್ಣುಗಳ ಬುಟ್ಟಿ), 3)ಕೆ.ಟಿ.ಗಂಗಾಧರ್(ಹೊಲಿಗೆಯಂತ್ರ), 4)ಚೆಲುವಯ್ಯ.ಪ.ಜಾ.(ಆಟೋರಿಕ್ಷಾ), 5)ಜಯರಾಂನಾಯಕ,ಪ.ಪಂ.(ಕೋಟು), 6)ಎಂ.ಡಿ.ಜ್ಯೋತಿ(ಬ್ಯಾಟರಿ ಟಾರ್ಚ್), 7)ಎನ್.ಕೆ.ದಿಲೀಪ್ಕುಮಾರ್,ನಾಗರಘಟ್ಟ,ಬಿಸಿಎಂ.ಎ(ದೂರದರ್ಶನ), 8) ಬಿ.ಎಲ್.ದೇವರಾಜು(ಮಿಕ್ಸಿ), 9)ರಂಗನಾಥಪುರ ನಾಗರಾಜು,ಪ.ಜಾ(ಗ್ಯಾಸ್ ಸಿಲಿಂಡರ್),10) ಕೆ.ಬಿ.ಮಧು,ಕಿಕ್ಕೇರಿ(ಉಂಗುರ) 11)ಮಹಾದೇವ,ಬಿಸಿಎಂಎ(ಗಾಜಿನ ಲೋಟ), 12) ಮಲ್ಲೇನಹಳ್ಳಿ ಎಂ.ಮೋಹನ್(ಟೆಲಿಪೋನ್), 13)ಶೀಳನೆರೆ ಎಸ್.ಎಲ್.ಮೋಹನ್(ಕಿರೀಟ), 14)ಬೊಮ್ಮೇನಹಳ್ಳಿ ಮಂಜುನಾಥ್,ಪ.ಪಂ.(ಸ್ಟೂಲ್), 15)ಬಿ.ಆರ್.ಲತಾಮಣಿ,ಸಾ.ಮ(ಪ್ರೇಷರ್ ಕುಕ್ಕರ್), 16)ಶಶಿಧರ್ ಸಂಗಾಪುರ(ಕ್ಯಾರೇಟ್), 17) ಸುಕನ್ಯಲಕ್ಷ್ಮಣ್(ಟೇಬಲ್) ಚಿಹ್ನೆ ಅಡಿಯಲ್ಲಿ ಸ್ಪರ್ಧಾ ಕಣದಲ್ಲಿ ಇದ್ದಾರೆ ಎಂದು ತಹಸೀಲ್ದಾರ್ ಡಾ.ಎಸ್.ಯು ಅಶೋಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಚಿಹ್ನೆಗಳನ್ನು ಆಯ್ಕೆ ಮಾಡಲಾಯಿತು. ಸಹ ಚುನಾವಣಾಧಿಕಾರಿಯಾಗಿ ತಾಲ್ಲೂಕು ಚುನಾವಣಾ ಶಾಖೆಯ ಶಿರಸ್ತೇದಾರ್ ಕೆ.ಎಸ್.ಹರೀಶ್, ಟಿಎಪಿಸಿಎಂಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಬೋರೇಗೌಡ, ರವಿಕುಮಾರ್ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಟಿಎಪಿಸಿಎಂಎಸ್ ಚುನಾವಣೆಯು ಮೈತ್ರಿ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಪ್ರತಿಷ್ಠೆಯ ಚುನಾವಣೆಯಾಗಿದೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಈ ಚುನಾವಣೆಯು ಭಾರೀ ಪ್ರತಿಷ್ಠೆಯ ಕಣವಾಗಿದೆ. ಅದೇ ರೀತಿ ಮಂಡ್ಯ ಜಿಲ್ಲೆಯಲ್ಲಿ ಏಕೈಕ ಜೆಡಿಎಸ್ ಶಾಸಕ ಎಂಬ ಹೆಗ್ಗಳಿಕೆಗೆ ಹೊಂದಿರುವ ಕೆ.ಆರ್.ಪೇಟೆಯ ಶಾಸಕ ಹೆಚ್.ಟಿ.ಮಂಜು ಅವರಿಗೂ ತಮ್ಮ ಶಕ್ತಿ ಪ್ರದರ್ಶನ ಮಾಡಲು ಟಿಎಪಿಸಿಎಂಎಸ್ ಚುನಾವಣೆಯ ಗೆಲುವು ಭಾರಿ ಪ್ರತಿಷ್ಠೆಯ ಕಣವಾಗಿದ್ದು 14ಕ್ಷೇತ್ರಗಳಿಗೂ ಚುನಾವಣೆಯ ನಡೆಯುತ್ತಿದ್ದು, ತೀವ್ರ ಜಿದ್ದಾಜಿದ್ದಿಯ ಹೋರಾಟ ಕಂಡು ಬರುತ್ತಿದೆ. ಅಂತಿಮವಾಗಿ ಗೆಲುವು ಯಾವ ಪಕ್ಷಕ್ಕೆ ಒಲಿಯುತ್ತದೆ ಎಂಬುದನ್ನು ಸೆ.28ರ ಫಲಿತಾಂಶದವರೆವಿಗೂ ಕಾದು ನೋಡಬೇಕಾಗಿದೆ.
– ಶ್ರೀನಿವಾಸ್ ಆರ್.
