ದೀಪಾವಳಿಯ ಸಮಯದಲ್ಲಿ ಕೆಲಸಕ್ಕೆಂದು ನಗರಗಳಿಂದ ತಮ್ಮ ಸ್ವಂತ ಊರಿಗೆ ಹೋಗುವವರ ಸಂಖ್ಯೆ ಹೆಚ್ಚಿರುತ್ತದೆ. ಅಷ್ಟೇ ಅಲ್ಲ ಇದಕ್ಕಾಗಿ ರೈಲು ಪ್ರಯಾಣದ ಮೇಲೆ ಸಾಕಷ್ಟು ಜನ ಅವಲಂಬಿತರಾಗಿರುತ್ತಾರೆ. ಆದರೆ ಈ ಕುರಿತು ರೈಲ್ವೆ ಇಲಾಖೆ ಮುಂದಿನ ತಿಂಗಳಿನಿದ ಹೊಸ ನಿಯಮವೊಂದನ್ನು ಜಾರಿಗೊಳಿಸಿದೆ.
ರೈಲು ಪ್ರಯಾಣಿಕರಿಗೆ ಎಚ್ಚರಿಕೆ! ಅಕ್ಟೋಬರ್ 1, 2025 ರಿಂದ, IRCTC ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಹೊಸ ನಿಯಮ ಜಾರಿಗೆ ಬರುತ್ತಿದೆ. ಈ ನಿಯಮದ ಪ್ರಮುಖ ಉದ್ದೇಶ, ರೈಲು ಟಿಕೆಟ್ಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಬ್ರೋಕರ್ಗಳನ್ನು ತಡೆಯುವುದು.
ಹೀಗಾಗಿ, ಮೊದಲ 15 ನಿಮಿಷಗಳ ಕಾಲ, ಆಧಾರ್ಗೆ ಲಿಂಕ್ ಮಾಡಲಾದ IRCTC ಖಾತೆ ಹೊಂದಿರುವ ಪ್ರಯಾಣಿಕರು ಮಾತ್ರ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು. ಉದಾಹರಣೆಗೆ, ಬೆಳಿಗ್ಗೆ 10 ಗಂಟೆಗೆ ಬುಕ್ಕಿಂಗ್ ತೆರೆಯುವಾಗ, ಆಧಾರ್ ದೃಢೀಕೃತ ಬಳಕೆದಾರರು 10:00 ರಿಂದ 10:15 ರವರೆಗೆ ಮಾತ್ರ ಟಿಕೆಟ್ಗಳನ್ನು ಬುಕ್ ಮಾಡಬಹುದಾಗಿದೆ. 15 ನಿಮಿಷದ ಬಳಿಕ, ಎಲ್ಲ IRCTC ಖಾತೆ ಹೊಂದಿರುವ ಪ್ರಯಾಣಿಕರು ಸಾಮಾನ್ಯವಾಗಿ ಬುಕ್ ಮಾಡಬಹುದು.
ಭೌತಿಕ PRS ಕೌಂಟರ್ಗಳಲ್ಲಿ ಟಿಕೆಟ್ ಬುಕ್ಕಿಂಗ್ನಲ್ಲಿ ಯಾವುದೇ ಬದಲಾವಣೆ ಇಲ್ಲ. ಟಿಕೆಟ್ ಬುಕ್ ಮಾಡುವವರಿಗೆ ಆಧಾರ್ ಲಿಂಕ್ ಇಲ್ಲದಿದ್ದರೂ ಕೌಂಟರ್ ಮೂಲಕ ಸಹ ಬುಕ್ ಮಾಡಬಹುದಾಗಿದೆ. ಹೀಗೆಯೇ, ತತ್ಕಾಲ್ ಟಿಕೆಟ್ ಬುಕ್ಕಿಂಗ್ನಲ್ಲಿ ಈಗಾಗಲೇ ಆಧಾರ್ ದೃಢೀಕರಣ ಯಶಸ್ವಿಯಾಗಿ ಅನುಸರಿಸಲಾಗುತ್ತಿದೆ.
- ನಿಮ್ಮ IRCTC ಖಾತೆಗೆ ಆಧಾರ್ ಲಿಂಕ್ ಮಾಡುವ ಕ್ರಮ:
- IRCTC ವೆಬ್ಸೈಟ್ ಅಥವಾ ಅಪ್ಲಿಕೇಶನ್ನಲ್ಲಿ ಲಾಗಿನ್ ಆಗಿ.
- ‘ನನ್ನ ಪ್ರೊಫೈಲ್’ ವಿಭಾಗಕ್ಕೆ ಹೋಗಿ.
- ‘ಆಧಾರ್ ದೃಢೀಕರಣ’ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಮ್ಮ 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ.
- ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಅನ್ನು ನೀಡಿ ಪರಿಶೀಲನೆ ಮುಗಿಸಿ.
ಈ ಕ್ರಮದಿಂದ, ನೀವು ನಿಜವಾದ ವ್ಯಕ್ತಿ ಎಂದು ದೃಢೀಕರಿಸಲಾಗುತ್ತದೆ. ನಕಲಿ ಖಾತೆಗಳ ಮೂಲಕ ಟಿಕೆಟ್ಗಳನ್ನು ಕೊಳ್ಳುವ ಬ್ರೋಕರ್ಗಳಿಗೆ ಈ ನಿಯಮ ಯಾವುದೇ ಅವಕಾಶ ನೀಡುವುದಿಲ್ಲ. ಇಂದಿನಿಂದ, ಸಾಮಾನ್ಯ ಮೀಸಲಾತಿ ಟಿಕೆಟ್ಗಳಿಗೂ ಈ ವ್ಯವಸ್ಥೆಯನ್ನು ಅನ್ವಯಿಸಲಾಗಿದೆ.
