ತುಮಕೂರು: ನಗರದ ವೀರಶೈವ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪ ಅವರು 2026ನೇ ಸಾಲಿನ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಹಕಾರರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಅಮೂಲ್ಯ ಸೇವೆ, ಪರಿಶ್ರಮ, ನಿಷ್ಠೆ ಹಾಗೂ ಸಾಧನೆಗೆ ಈ ಪ್ರಶಸ್ತಿ ಗೌರವ ಲಭಿಸಿದೆ.ಈ ಪ್ರತಿಷ್ಠಿತ ಪ್ರಶಸ್ತಿ ದೊರೆಯಲು ಸಹಕಾರ ಮತ್ತು ಪ್ರೋತ್ಸಾಹ ನೀಡಿದ ರಾಜ್ಯದ ಸಹಕಾರ ಸಚಿವ ಲಕ್ಷ್ಮಣಸವದಿ, ಮಾಜಿ ಸಚಿವರಾದ ಕೆ.ಎನ್.ರಾಜಣ್ಣ, ಸೊಗಡು ಶಿವಣ್ಣ, ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್, ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡ ಪ್ರಭಾಕರ್ ಹಾಗೂ ವೀರಶೈವ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಮಲ್ಲಿಕಾರ್ಜುನಯ್ಯ ಅವರಿಗೆ ಬ್ಯಾಂಕಿನ ಕಾರ್ಯಕಾರಿ ಮಂಡಳಿ, ಸಿಇಓ ಹಾಗೂ ಸಿಬ್ಬಂದಿ ವರ್ಗಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೆ.ಜೆ.ರುದ್ರಪ್ಪನವರಿಗೆ ಸಹಕಾರ ರತ್ನ ಪ್ರಶಸ್ತಿ ಬಂದಿರುವುದಕ್ಕೆ ವಿವಿಧ ಸಂಘ-ಸಂಸ್ಥೆಗಳು,ನಗರ ವೀರಶೈವ ಸಮಾಜ,ಮೈತ್ರಿ ಬಳಗ,ತುಮಕೂರು ಜಯನಗರ ಪತ್ತಿನ ಸೌಹಾರ್ಧ ಸಹಕಾರಿ ಸಂಘ (ನಿ)ದ ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು,ಸಿಇಓ ಶ್ರೀಮತಿ ಕೆ.ಆರ್.ಮಂಜುಳಾ,ಹಿರಿಯ ಪತ್ರಕರ್ತ ಕೆ.ಬಿ.ಚಂದ್ರಚೂಡ,ರೈತ ಪ್ರಗತಿ ಪತ್ರಿಕೆಯ ಸಂಪಾದಕರಾದ ಕೆ.ಬಿ.ಮಂಜುನಾಥ್,ತುಮಕೂರು ವೀರಶೈವ ಲಿಂಗಾಯಿತರ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎಸ್.ಆರ್.ಶಿವಶಂಕರ್,ಗೌರವಾಧ್ಯಕ್ಷರಾದ ಪಾಲನೇತ್ರಯ್ಯ,ಉಪಾಧ್ಯಕ್ಷರಾದ ಡಾ||ವಿ.ಆರ್.ಮಂಜಣ್ಣ,ಶ್ರೀಮತಿ ಸೌಭಾಗ್ಯ,ಶ್ರೀಮತಿ ಅಂಬಿಕಾ, ಪ್ರೇಮಾರಾಧ್ಯ, ವೇದಮೂರ್ತಿ, ಕುಮಾರಸ್ವಾಮಿ,ಮೋಹನ್,ವಿವಿಧ ವೀರಶೈವ ಸಂಘ ಸಂಸ್ಥೆಗಳು,ನಗರದ ಗಣ್ಯರು ಇತರರು ಶುಭ ಹಾರೈಸಿದ್ದಾರೆ.
– ಚಂದ್ರಚೂಡ ಕೆ.ಬಿ.
