ಚನ್ನರಾಯಪಟ್ಟಣ: ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪತ್ರಕರ್ತರಾದ ಎ.ಎಲ್. ನಾಗೇಶ್, ಸಿದ್ದರಾಜು, ಶಾಮ್ ಸುಂದರ್ ಹಾಗೂ ಐ.ಕೆ. ಮಂಜುನಾಥ್ ಅವರನ್ನು ನವೋದಯ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನವೋದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಮುರಾರ್ಜಿ ಮಂಜಣ್ಣ, ಕಾರ್ಯದರ್ಶಿ ಜಲೇಂದ್ರ, ಸಹ ಕಾರ್ಯದರ್ಶಿ ಸಂತೋಷ್, ನಿರ್ದೇಶಕರಾದ ಕಾಳೆನಹಳ್ಳಿ ಆನಂದಕುಮಾರ್, ಜೆ.ಕೆ. ರಾಘವೇಂದ್ರ ಹಾಗೂ ದೈಹಿಕ ಶಿಕ್ಷಣ ಉಪನ್ಯಾಸಕ ಚಿಕ್ಕೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
