ಕೆ ಆರ್ ಪೇಟೆ: ತಾಲ್ಲೂಕು ಟಿಎಪಿಸಿಎಂಎಸ್ ಸಮಸ್ಥೆಯ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನ-ಉಪಾಧ್ಯಕ್ಷ ಸ್ಥಾನಗಳಿಗೆ ಇದೇ ಅ.10ರಂದು ಚುನಾವಣೆ ನಿಗಧಿಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಆರಂಭವಾಗಿದೆ.
ತಾಲ್ಲೂಕಿನ ಪ್ರತಿಷ್ಠಿತ ಸಂಸ್ಥೆ ಟಿಎಪಿಸಿಎಂಎಸ್ ನೂತನ ಆಡಳಿತ ಮಂಡಳಿ ನೂತನ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇದೇ ತಿಂಗಳು 10 ರಂದು ಚುನಾವಣೆ ನಿಗಧಿ.
ಈಗಾಗಲೇ #ಎ ವರ್ಗ ಹಾಗೂ #ಬಿ ವರ್ಗದಿಂದ 11 ಮಂದಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಲು ಸಿದ್ದರಾಗಿದ್ದಾರೆ. 3 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿ ವಿರೋಧ ಪಕ್ಷದ ಸ್ಥಾನವನ್ನು ಅಲಂಕರಿಸಿದ್ದಾರೆ.

ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಪ್ರಾದೇಶಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಎರಡನೇ ಬಾರಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಎಲ್.ದೇವರಾಜು ವಿರುದ್ದ ಸೆಡ್ಡು ಹೊಡೆದು ಅವಿಶ್ವಾಸ ನಿರ್ಣಯ ಮಂಡಿಸಿ ಕೇಲವ 1ಮತದ ಅಂತರದಿಂದ ಅವಿಶ್ವಾಸ ಗೊತ್ತುವಳಿಯಲ್ಲಿ ವಿಫಲರಾಗಿದ್ದ ಹಿರಿಯ ಸಹಕಾರಿ ಧುರೀಣರಾದ ಶೀಳನೆರೆ ಎಸ್ ಎಲ್ ಮೋಹನ್ ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಜೊತೆಗೆ ಕಳೆದ ಸಾಲಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.

ರಾಜಕೀಯ ವೈಪರೀತ್ಯಗಳಿಂದ ಅಧ್ಯಕ್ಷ ಸ್ಥಾನ ಮರೀಚಿಕೆಯಾಗಿತ್ತು. ಈಗ ಜೆಡಿಎಸ್ ಸ್ಪಷ್ಟ ಬಹುಮತ ವಿರುವ ಕಾರಣ ಅಧ್ಯಕ್ಷ ಸ್ಥಾನಕ್ಕೆ ಎಸ್.ಎಲ್.ಮೋಹನ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಎಸ್.ಎಲ್ಮೋಹನ್ ಅವರಿಗೆ ಶಾಸಕರಾದ ಹೆಚ್.ಟಿ.ಮಂಜು ಮತ್ತು ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರ ಆಶೀರ್ವಾದ ಇದ್ದು ಅಧ್ಯಕ್ಷ ಸ್ಥಾನ ಸುಲಭವಾಗಿ ದಕ್ಕಬಹುದು ಎಂಬ ಮಾತುಗಳು ಜೆಡಿಎಸ್ ವಲಯಗಳಲ್ಲಿ ಕೇಳಿ ಬರುತ್ತಿದೆ.

ಅದೇ ರೀತಿ ಶಾಸಕ ಹೆಚ್ ಟಿ ಮಂಜು ಅವರ ಕಟ್ಟಾ ಬೆಂಬಲಿಗರಾಗಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ತಾ.ಪಂ.ಮಾಜಿ ಸದಸ್ಯ, ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮಾಜಿ ಸಚಿವರಾದ ನಾರಾಯಣಗೌಡ ಅವರು ಬಿಜೆಪಿ ಪಕ್ಷಕ್ಕೆ ಸೇರಿದ ಸಂದರ್ಭದಲ್ಲಿ ಹಲವು ಆಮಿಷ ಒಡ್ಡಿದ್ದರೂ ಅದಕ್ಕೆ ಸೊಪ್ಪು ಹಾಕದೇ ಪಕ್ಷಕ್ಕೆ ನಿಷ್ಠೆ ತೋರಿದ್ದ ಮಲ್ಲೇನಹಳ್ಖಿ ಮೋಹನ್ ಅವರು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿ ವಿರುದ್ಧ ಅಮೋಘ ಜಯಭೇರಿ ಬಾರಿಸಿದ್ದರು.ಶಾಸಕ ಹೆಚ್ ಟಿ ಮಂಜು ಅವರ ಜೊತೆಗೆ ಅವಿನಾಭಾವ ಸಂಬಂಧ ಜೊತೆಗೆ ಶಾಸಕರ ಹೆಗಲಿಗೆ ಹೆಗಲು ಕೊಟ್ಟು ಎಲ್ಲಾ ಸಂದರ್ಭದಲ್ಲಿ ಶ್ರಮಿಸುತ್ತಿದ್ದಾರೆ.ಆದ್ದರಿಂದ ಶಾಸಕರು ಮಲ್ಲೇನಹಳ್ಖಿ ಮೋಹನ್ ಮೋಹನ್ ಅವರಿಗೆ ಒಂದು ಚಾನ್ಸ್ ಕೊಡುತ್ತಾರಾ? ಕಾಯಬೇಕು.

ಶಾಸಕರಾದ ಹೆಚ್ ಟಿ ಮಂಜು ಅವರ ಸಹೋದರ ಎನ್ನುವುದರ ಜೊತೆಗೆ ತಾಲ್ಲೂಕಿನಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಹಾಜರಾಗಿ ಯಶಸ್ವಿಗೊಳಿಸುವುದಲ್ಲದೇ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರುಗಳ ಜೊತೆ ಸೇರಿ ಪಕ್ಷದ ಸಂಘಟನೆಯನ್ನು ಮಾಡುತ್ತ ತಮ್ಮ ಅಣ್ಣ ಶಾಸಕರಾದ ಹೆಚ್ ಟಿ ಮಂಜು ಅವರ ಪರವಾಗಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಮತ್ತು ಈಗಾಗಲೇ ಟಿಎಪಿಸಿಎಂಎಸ್ ನಿರ್ದೇಶಕರಾಗಿ ಅನುಭವ ವಿರುವ ಹೆಚ್ ಟಿ ಲೋಕೇಶ್ ಅವರು ಈ ಬಾರಿ ಟಿಎಪಿಸಿಎಂಎಸ್ ಗಾದಿಗೆ ಅಧ್ಯಕ್ಷರಾಗುತ್ತಾರೋ? ನೋಡಬೇಕು.
ಎರಡನೇ ಬಾರಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಶಾಸಕರ ಬಲಗೈ ಬಂಟ ಎಂದು ಕರೆಯುವ ಮತ್ತು ಸಹಕಾರ ಸಂಘಗಳಲ್ಲಿ ಅನುಭವ ವಿರುವ ತೆರ್ನೇನಹಳ್ಳಿ ಬಲದೇವ್ ಅವರಿಗೆ ಶಾಸಕರಾದ ಹೆಚ್ ಟಿ ಮಂಜು ಒಲವು ತೋರುತ್ತಾರಾ? ನೋಡಬೇಕು.
ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಪರಿಶಿಷ್ಟ ಜಾತಿ ಕೋಟಾದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಈಗಾಗಲೇ ಟಿಎಪಿಸಿಎಂಎಸ್ ಉಪಾಧ್ಯಕ್ಷರಾಗಿ ಅನುಭವ ವಿರುವ ರಂಗನಾಥಪುರ ನಾಗರಾಜು ಅವರಿಗೆ ಶಾಸಕರಾದ ಹೆಚ್ ಟಿ ಮಂಜು ಅವಕಾಶ ಮಾಡಿ ಕೊಡುತ್ತಾರಾ? ಕಾದು ನೋಡಬೇಕು.
ವರದಿ: ಶ್ರೀನಿವಾಸ್. ಆರ್. ಕೆ.ಆರ್.ಪೇಟೆ

[…] ಇದನ್ನು ಓದಿ: ಕೆ.ಆರ್.ಪೇಟೆ- ಟಿಎಪಿಸಿಎಂಎಸ್ ನೂತನ ಆಡಳಿತ ಮ… […]