ಕೆ.ಆರ್.ಪೇಟೆ,ಅ.13: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿಕಾವಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅತೀಕ್ ಅಹಮದ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾದ ಗುಡುಗನಹಳ್ಳಿ ಜಿ.ಜೆ.ವೆಂಕಟೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಅತೀಕ್ ಅಹಮದ್ ಹೊರತು ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಶು ಇಲಾಖೆ ಸಹಾಯ ನಿರ್ದೇಶಕ ಡಾ.ದೇವರಾಜು, ಸಹ ಚುನಾವಣಾಧಿಕಾರಿಯಾಗಿ ಗ್ರಾ.ಪಂ ಪಿಡಿಓ ಮಾರ್ಗೋನಹಳ್ಳಿ ಶಿವಕುಮಾರ್ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಅತೀಕ್ ಅಹಮದ್ ಮಾತನಾಡಿ ಎಲ್ಲಾ ಸದಸ್ಯರು ಹಾಗೂ ಮುಖಂಡರು ನನ್ನನ್ನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಿರುವುದಕ್ಕೆ ಎಲ್ಲರಿಗೂ ಕೃತಜ್ಞತೆಗಳನ್ನು ತಿಳಿಸುತ್ತೇನೆ. ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲಾ ಸದಸ್ಯರು ಹಾಗೂ ನೌಕರರ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ಪಂಚಾಯಿತಿಯ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ. ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕವಾದ ಪ್ರಯತ್ನ ಮಾಡಿತ್ತೇನೆ ಎಂದು ಭರವಸೆ ನೀಡಿದರು.

ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ನಮ್ಮ ಅಲಂಬಾಡಿಕಾವಲು ಗ್ರಾಮ ಪಂಚಾಯಿತಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದೆ ಹಾಗಾಗಿ ಪಕ್ಷ ಬೇಧ ಧರ್ಮ ಮರೆತು ಅತಿಕ್ ಅಹಮದ್ ಅವರನ್ನ ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸಹಕಾರ ನೀಡಿದ್ದೇವೆ ಅದಕ್ಕೆ ಋಣಿಯಾಗಿ ಸಿಕ್ಕ ಕಾಲಾವಧಿಯಲ್ಲಿ ನಮ್ಮೆಲ್ಲ ಸದಸ್ಯರ ಸಲಹೆ ತೆಗೆದುಕೊಂಡು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗ್ರಾಮಗಳ ಅಭಿವೃದ್ಧಿಗೆ ಶ್ರಮವಹಿಸಬೇಕು ಎಂದು ಮಲ್ಲಿಕಾರ್ಜುನ್ ಸಲಹೆ ನೀಡಿದರು.

.
ನೂತನವಾಗಿ ಅಧ್ಯಕ್ಷರಾಗಿ ಅತೀಕ್ ಅಹಮದ್ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಕಾರ್ಯಕರ್ತರು ಅಭಿನಂದಿಸಿ ಪಟಾಕಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕರೀಶೆಟ್ಟಿ, ಭಾಗ್ಯಮ್ಮ, ಜಿ.ಜೆ ವೆಂಕಟೇಶ್, ಶ್ರೀನಿವಾಸ್, ಚಂದ್ರಕಲಾ, ನಾಗೇಶ್, ಮುಜಾಹಿದ್, ವೇದಾಂಬ, ರೂಪ, ಸಾಕಮ್ಮ, ಎ.ರಾಜು, ಮುಖಂಡರಾದ ಜಿ.ಎ. ರಾಯಪ್ಪ, ಜಿ.ಸಿ.ಶ್ರೀನಿವಾಸ್, ಪಠಾಣ್ಬಾಬು, ಡಾ.ಬಸವರಾಜ್, ತನ್ವೀರ್ಪಾಷಾ, ಅಲ್ತಾಫ್ಸಾಬ್, ಧರ್ಮ, ಎನ್.ಶಿವಣ್ಣ, ಬೋರಲಿಂಗೇಗೌಡ, ರಘುನಾಥ್, ಅನಿಲ್ ಕುಮಾರ್, ಶ್ರೀಕಾಂತ್, ಮಹಮದ್ಗೌಸ್, ವಹೀದಾಬಾನುಖಾಜಿಂ, ಅಕ್ರಂಪಾಷ, ಸೇರಿದಂತೆ ನೂರಾರು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
-ಶ್ರೀನಿವಾಸ್ ಆರ್.
