ಹಾಸನ, ಅಕ್ಟೋಬರ್ 24: ಮಾಣಿಕ್ಯ ಪ್ರಕಾಶನ (ರಿ.), ಹಾಸನ ಸಂಸ್ಥೆಯು ತನ್ನ ದಶಮಾನೋತ್ಸವದ ಅಂಗವಾಗಿ ನವೆಂಬರ್ ೨ರಂದು ಭಾನುವಾರ ನಗರದ ಸಂಸ್ಕೃತ ಭವನದಲ್ಲಿ ವಾರ್ಷಿಕ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠ ಸಾಧನೆ ತೋರಿದ ರಾಜ್ಯ ಹಾಗೂ ಹೊರರಾಜ್ಯದ 17 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ.
ಆಯ್ಕೆ ಸಮಿತಿ ಮತ್ತು ಹಿನ್ನೆಲೆ
ಪ್ರಶಸ್ತಿ ಪುರಸ್ಕೃತರ ಆಯ್ಕೆಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅವರ ಅಧ್ಯಕ್ಷತೆಯಲ್ಲಿರುವ ಆಯ್ಕೆ ಸಮಿತಿಯು ನಿರ್ಧರಿಸಿದೆ.
ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ, ದೇಸು ಆಲೂರು, ಡಾ. ಪಿ. ದಿವಾಕರ ನಾರಾಯಣ, ಹಾಗೂ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಸುಶೀಲಾ ಎಲ್. ಗುರವ್ ಈ ಸಮಿತಿಯ ಸದಸ್ಯರಾಗಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸಲಿರುವವರು
ಸಾಹಿತಿ ಟಿ. ಸತೀಶ್ ಜವರೇಗೌಡ, ಪತ್ರಕರ್ತ ಹೆತ್ತೂರು ನಾಗರಾಜು — ಇವರಿಂದ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ಪ್ರದಾನವಾಗಲಿದ್ದು,
ಸಮಾಜ ಸೇವಕ ಗಣೇಶ್ ತಮ್ಲಾಪುರ — ಜನ್ನ ಕಾವ್ಯ ಪ್ರಶಸ್ತಿ,
ಸಾಹಿತಿ ಡಾ. ಎಚ್.ಕೆ. ಹಸೀನಾರವರು — ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪ್ರಧಾನ ಮಾಡುವರು.
ಹೊಯ್ಸಳ ಸಾಂಸ್ಕೃತಿಕ ರಾಜ್ಯ ಪ್ರಶಸ್ತಿ ಪುರಸ್ಕೃತರು
- ಪ್ರಕಾಶ್ ಜಿ, ಹಾಸನ — (ಸಾಹಿತ್ಯ)
- ಡಾ. ರಘುಕೋಟಿ, ಕೊಡಗು — (ಮಾಧ್ಯಮ)
- ಡಾ. ಎಚ್.ಎಲ್. ಶಿವಬಸಪ್ಪ, ಮೈಸೂರು — (ಸಾಹಿತ್ಯ)
- ಕೆ.ಎಸ್. ಮಂಜುನಾಥ್ ಪಂಡಿತ್, ಅರಸೀಕೆರೆ — (ಸಂಘಟನೆ)
- ಆರ್.ಎಸ್. ರಮೇಶ್, ಹಾಸನ — (ಕನ್ನಡ ನುಡಿಸೇವೆ)
ಜನ್ನ ಕಾವ್ಯ ರಾಜ್ಯ ಪ್ರಶಸ್ತಿ ಪುರಸ್ಕೃತರು
- ಡಿ. ಸುಜಲಾದೇವಿ, ಕೊಡಗು
- ಫ್ಲಾವಿಯಾ ಅಲ್ಬುಕರ್ಕ್, ದಕ್ಷಿಣ ಕನ್ನಡ
- ನಾಗಭೂಷಣ್ ಅರಳಿ, ಕೊಪ್ಪಳ
- ರೇಖಾ ಪ್ರಕಾಶ್, ಹಾಸನ
- ಸುಜಾತ ಎಸ್. ಹೇಮಂತ್, ಶಿವಮೊಗ್ಗ
- ಬಿ.ಯು. ಭೈರಕದಾರ, ಬೆಳಗಾವಿ
ಹೊಯ್ಸಳ ಸಾಹಿತ್ಯ ರಾಜ್ಯ ಪ್ರಶಸ್ತಿ ಪುರಸ್ಕೃತರು
- ಶರಣಪ್ಪ ತಳ್ಳಿ ಕುಪ್ಪಿಗುಡ್ಡ, ಕೊಪ್ಪಳ
- ಅಶ್ವತ್ಥಪ್ಪ ಕರ್ನೂಲು, ಆಂಧ್ರಪ್ರದೇಶ
- ಡಾ. ಪಾರ್ವತಿದೇವಿ ಪಾಟೀಲ, ಬೆಳಗಾವಿ
- ದೀಪಾಲಿ ದೀಪಕ ಸಾಂತ, ಉತ್ತರ ಕನ್ನಡ
- ವೈ.ಬಿ. ಕಾಂತರಾಜ್, ಹಾಸನ
- ಹಣಮಂತ ಎಫ್. ನಾಯಕ, ಬೆಳಗಾವಿ
ಮಾಣಿಕ್ಯ ಪ್ರಕಾಶನ ಕಳೆದ ದಶಕದಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಸೃಜನಾತ್ಮಕ ಚಟುವಟಿಕೆಗಳಿಗೆ ವೇದಿಕೆಯಾಗಿ ಕೆಲಸ ಮಾಡುತ್ತಿದ್ದು, ದಶಮಾನೋತ್ಸವವು ಆ ಪಯಣದ ಸಂಕೇತವಾಗಿದೆ.
