ಹಾಸನ: ರೋಟರಿ ಇಂಟರ್ನ್ಯಾಷನಲ್ ಜಿಲ್ಲೆ 3182, ವಲಯ 9 ರ ವತಿಯಿಂದ ಪೋಲಿಯೋ ಮುಕ್ತ ಭಾರತ ಅಭಿಯಾನದ ಅಂಗವಾಗಿ ಶನಿವಾರ ಹಾಸನ ನಗರದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಅಸಿಸ್ಟೆಂಟ್ ಗವರ್ನರ್ ರೋಟೇರಿಯನ್ ಜೆ.ಎನ್. ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ಪಿಡಿಜಿ ಎಂ.ಕೆ.ಜಿ. ಕುಮಾರ್, ವಲಯ 9 ರ ಎಲ್ಲ ಕ್ಲಬ್ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸುಮಾರು 100 ಕ್ಕೂ ಹೆಚ್ಚು ರೋಟರಿ ಸದಸ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಜಾಗೃತಿ ಕಾರ್ಯಕ್ರಮದ ಭಾಗವಾಗಿ ಹಾಸನ ನಗರದಲ್ಲಿ ಬೈಕ್ ಜಾಥಾವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಲ್ಲಿ ಪೋಲಿಯೋ ನಿವಾರಣೆ ಕುರಿತು ಅರಿವು ಮೂಡಿಸಲಾಯಿತು. ಈ ಜಾಥಾವನ್ನು ಹಾಸನ ನಗರ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರು ಉದ್ಘಾಟಿಸಿದರು.
ಪೋಲಿಯೋ ನಿರ್ಮೂಲನೆಗಾಗಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕೆಂಬ ಸಂದೇಶದೊಂದಿಗೆ ನಗರ ಬೀದಿಗಳಲ್ಲಿ ರೋಟರಿ ಸದಸ್ಯರು ಜಾಥಾ ನಡೆಸಿ ಪ್ರಚಾರಪತ್ರಗಳನ್ನು ಹಂಚಿದರು.
ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಸಹಕರಿಸಿದ ಎಲ್ಲರಿಗೂ ಟೀಂ ಸನ್ರೈಸ್ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು ತಿಳಿಸಲಾಯಿತು.
