ಕೆ.ಆರ್.ಪೇಟೆ. ಮಾನವರು ತಾಂತ್ರಿಕತೆಯಲ್ಲಿ ಮುಂದುವರಿದಿದ್ದಾರೆ ಆದರೆ ಸಮಾಜಕ್ಕೆ ಅಗತ್ಯವಾದ ಸಂಸ್ಕೃತಿಯನ್ನು ಮರುಪ್ರತಿಷ್ಠಾಪಿಸುವಲ್ಲಿ ನಾಟಕಗಳು ಸಹಕಾರಿ ಎಂದು ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ಪಟ್ಟಣದ ಶ್ರೀ ರಂಗ ಚಿತ್ರಮಂದಿರ ಆವರಣದಲ್ಲಿ ಡಾ.ರಾಜ್ ಕುಮಾರ್ ಕಲಾಸಂಘ ಏರ್ಪಡಿಸಿದ ನಾಟಕೋತ್ಸವದದಲ್ಲಿ ಶ್ರೀ ಜೈ ಭುವನೇಶ್ವರಿ ಕಲಾ ಸಂಘದಿಂದ ಸಂಪೂರ್ಣ ರಾಮಾಯಾಣ ಪೌರಣಿಕ ನಾಟಕ ಉದ್ಘಾಟಿಸಿ ಮಾತನಾಡಿದರು.

ಪೌರಣಿಕ ನಾಟಕಗಳು ಸಾಮಾಜಿಕ ಸಂದೇಶವನ್ನು ಬಿತ್ತಲಿವೆ ಇಂದಿನ ಕಲುಷಿತ ಸಮಾಜದಲ್ಲಿ ಎಲ್ಲರನ್ನೂ ಬೆಸೆಯುವುದು ಕಷ್ಟ.ನಾಟಕೋತ್ಸವಗಳಿಗೆ ಆಹ್ವಾನಿಸುವ ಕಲಾವಿದರು ಅಲ್ಲಿನ ಜನರಲ್ಲಿ ನಾಟಕ ಅಭಿರುಚಿಯನ್ನು ವೃದ್ಧಿಸಬೇಕು.ತಾಲ್ಲೂಕು ಡಾ.ರಾಜ್ ಕುಮಾರ್ ಕಲಾ ಸಂಘ ಮೊದಲ ಬಾರಿಗೆನಾಟಕೋತ್ಸವ ನಡೆಯುತ್ತಿದೆ.ಹಳ್ಳಿಗಳಲ್ಲಿ ಮೊದಲೆಲ್ಲ ನಾಟಕಗಳು ಪ್ರದರ್ಶಿತವಾಗುತ್ತಿದ್ದವು ಜನರೂ ಕೂತು ವೀಕ್ಷಣೆ ಮಾಡುತ್ತಿದ್ದರು ಆದರೆ ಇತೀಚೆಗೆ ಆಧುನಿಕ ಜಂಜಾಟದಿಂದ ಟಿವಿ,ಮೊಬೈಲ್ ಹಾವಳಿಯಲ್ಲೂ ಪಟ್ಟಣದಲ್ಲೂ ನಾಟಕೋತ್ಸವದ ಮೂಲಕ ನಾಟಕ ಪ್ರದರ್ಶನ ಕಾಣುತ್ತಿದೆ ಎಂದರು.
ಈ ಸಂದರ್ಭದಲ್ಲಿ ಡಾ.ರಾಜ್ ಕುಮಾರ್ ಕಲಾಸಂಘದ ಅಧ್ಯಕ್ಷ ಎಲ್.ಐ.ಸಿ ಕುಮಾರ್,ಹಿರಿಯ ಕಲಾವಿದ ಸಿ.ಹೆಚ್.ನಾಗರಾಜು,ಹರಿಹರಪುರ ಮಹದೇವೇಗೌಡ,ಶಿವಮೂರ್ತಿ, ಹರೀಶ್, ಶಂಕರೇಗೌಡ, ಕಾಳಯ್ಯ, ನಂದೀಶ್, ಚನ್ನಬಸಪ್ಪ, ಸಿದ್ದರಾಜು, ಪ್ರಭಾಕರ್, ಹೆಚ್.ವೈ ರವಿ,ನಂಜುಂಡ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
