ಚನ್ನರಾಯಪಟ್ಟಣ, ನ. 3: ತಾಲೂಕು ಪ್ರಾಥಮಿಕ ಕೃಷಿ ಸಹಕಾರ ಸಂಘ (ಟಿಎಪಿಸಿಎಂಎಸ್) ನ ನೂತನ ಅಧ್ಯಕ್ಷರಾಗಿ ಮೆಡಿಕಲ್ ವೆಂಕಟೇಶ್ ಹಾಗೂ ನಿರ್ದೇಶಕರಾಗಿ ಆಯ್ಕೆಯಾದ ಎನ್. ಕೃಷ್ಣೇಗೌಡ, ಎಂ.ಆರ್. ಅನಿಲ್ ಕುಮಾರ್, ಸಿ.ಜಿ. ಜಗದೀಶ್, ಕೆ.ಆರ್. ರವಿಕುಮಾರ್ ರವರನ್ನು ದಲಿತ ಮುಖಂಡರು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ವಿರೂಪಾಕ್ಷಪುರ ಪ್ರಕಾಶ್, ಟಿಎಪಿಸಿಎಂಎಸ್ನ ಮಾಜಿ ಉಪಾಧ್ಯಕ್ಷ ಗುರಿಗಾರನಹಳ್ಳಿ ಯೋಗೇಶ್, ಮಾಜಿ ಪುರಸಭಾ ಸದಸ್ಯ ಪರಮೇಶ್, ಹಿರಿಯ ದಲಿತ ಮುಖಂಡರು ಕಲ್ಕೆರೆ ರಂಗಸ್ವಾಮಿ, ಅರುವನಹಳ್ಳಿ ರಾಮಚಂದ್ರ ಸೇರಿದಂತೆ ಹಲವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ನಿರ್ದೇಶಕರು ಸಂಘದ ಅಭಿವೃದ್ಧಿಗೆ ಬದ್ಧವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
-ಮಂಜುನಾಥ್ ಐ.ಕೆ
