ಕೆ.ಆರ್.ಪೇಟೆ, ನ.6: ವಯೋವೃದ್ದ ರೈತನೊಬ್ಬ ಬೇಸಾಯಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ್ದ ಕೃಷಿ ಪಂಪ್ಸೆಟ್ ಮತ್ತು ಪಂಪ್ಸೆಟ್ ಮನೆ ಹಾಡಹಗಲೇ ಧ್ವಂಸಗೊಳಿಸಿ, ರೈತ ಕುಟುಂಬದ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ರಂಗನಾಥಪುರ ಗ್ರಾಮದ ವಯೋವೃದ್ದ ರೈತ ಜವರಯ್ಯ ಅವರು ತಮ್ಮ ಪಿತ್ರಾರ್ಜಿತ ಜಮೀನಾದ ಸರ್ವೆ ನಂ. 39/2ರಲ್ಲಿ (ಸುಮಾರು 1 ಎಕರೆ 6 ಗುಂಟೆ) ಕೊಳವೆಬಾವಿ ಕೊರೆಸಿ, ಕೃಷಿ ಪಂಪ್ಸೆಟ್ ಅಳವಡಿಸಿ, ಮೀಟರ್ ಮತ್ತು ಪರಿಕರಗಳ ರಕ್ಷಣೆಗೆ ಪಂಪ್ಸೆಟ್ ಮನೆ ನಿರ್ಮಿಸಿದ್ದರು. ಈ ಕೆಲಸಕ್ಕೆ ಸುಮಾರು ₹5 ಲಕ್ಷವೆಚ್ಚವಾಗಿ
ಆದರೆ ಯ ವೈಮನಸ್ಸಿನ ಹಿನ್ನಲೆಯಲ್ಲಿ ಗ್ರಾಮದ ಪುಟ್ಟಮ್ಮ, ಪ್ರಕಾಶ್, ಜಯಲಕ್ಷ್ಮಿ ಮತ್ತು ಅರುಣ್ ಎಂಬವರು ಪಂಪ್ಸೆಟ್ ಮನೆಯ ಮೇಲ್ಚಾವಣಿ ಮತ್ತು ಬಾಗಿಲು ಧ್ವಂಸ ಮಾಡಿ, ಕೊಳವೆ ಬಾವಿಗೆ ಹಾಕಿದ್ದ ಕೇಬಲ್ ಹಾಗೂ ವಿದ್ಯುತ್ ಸಂಪರ್ಕ ವೈರ್ಗಳನ್ನು ಕಿತ್ತು ನಾಶಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಸುಮಾರು 20 ಕೆ.ಜಿ ತೂಕದ ಮೋಟಾರ್ ಕೇಬಲ್ ವೈರ್ ಕಳವು ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯನ್ನು ಕಣ್ಣಾರೆ ಕಂಡ ಜವರಯ್ಯ ಅವರ ಪತ್ನಿಯ ಮೇಲೆ ಆರೋಪಿಗಳು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜವರಯ್ಯ ಅವರು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ರಕ್ಷಣೆಗೆ ಮೊರೆ:
ನೊಂದ ವಯೋವೃದ್ದ ರೈತ ಜವರಯ್ಯ ಮತ್ತು ಅವರ ಪತ್ನಿ ನಾಗಮ್ಮ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿ, “ಪಂಪ್ಸೆಟ್ ಮತ್ತು ಕೇಬಲ್ ನಾಶಮಾಡಿ, ನಮ್ಮ ಮೇಲೆ ಹಲ್ಲೆ ನಡೆದಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಧಿಕಾರಿಗಳು ಗಮನಹರಿಸಿ ನಮ್ಮ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು,” ಎಂದು ಮನವಿ ಮಾಡಿದರು.
–ಶ್ರೀನಿವಾಸ್ ಆರ್.
