ಟಿ.ನರಸೀಪುರ :ಪ್ರಸ್ತುತ ಸರ್ಕಾರ ಏಕಗವಾಕ್ಷಿ ಯೋಜನೆ ಸ್ಥಗಿತಗೊಳಿಸಿರುವ ಕಾರಣ ಪ್ರಕಾಶಕರಿಗೆ ಲೇಖಕರಿಗೆ ಏಕಕಾಲದಲ್ಲಿ ಸಂಕಷ್ಟ ಎದುರಾಗಿದೆ ಎಂದು ಕವಿಗಳು ಹಾಗೂ ಲೇಖಕರೂ ಆದಂತಹ ಎಂ.ಜವರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾಕೆ ಹೀಗಾಯ್ತು? ಅನೇಕ ಪ್ರಕಾಶಕರು ಪುಸ್ತಕ ಪ್ರಕಟಿಸುವುದನ್ನೇ ನಿಲ್ಲಿಸಿರುವುದರಿಂದ ಹಾಗು ಇದರಲ್ಲಿ ಕೆಕವೇ ಕೆಲವು ಪ್ರಕಾಶಕರು ಚಾಲನೆಯಲ್ಲಿದ್ದರು ಅವರೂ ಆಯ್ದ ಕೆಲ ಲೇಖಕರ/ ಈಗಾಗಲೇ ಚಾಲ್ತಿಯಲ್ಲಿರುವ ಪರಿಚಿತ ಲೇಖಕರ ಕೃತಿಗಳನ್ನಷ್ಟೆ ಪ್ರಕಟಿಸುವುದು ಸದ್ಯದ ಟ್ರೆಂಡ್. ಈ ಟ್ರೆಂಡ್ ಹಾವಳಿಯಿಂದ ಕೆಲ ಅನುಕೂಲಸ್ಥ/ ಸರ್ಕಾರಿ ನೌಕರಿ ಇರುವ ಕೆಲ ಲೇಖಕರು ತಮ್ಮದೇ ಕೃತಿಗಳನ್ನು ಮಾರಾಟ ಮಾಡುವ/ ಓದುಗರಿಗರಿಗೆ ತಲುಪಿಸುವ ಯಾವ ಗೋಜು ಗೊಂದಲ ಇಲ್ಲದೆ ಬಿಡುಗಡೆ, ಮತ್ತಿತರೆ ಆಪ್ತರಿಗೆ ಹಾಗೂ ಪತ್ರಿಕೆಗಳ ವಿಮರ್ಶೆಗೆ ಅಂತ ಕಡಿಮೆ ವೆಚ್ಚದಲ್ಲಿ ನೂರಿನ್ನೂರು ಪ್ರತಿ ಅಚ್ಚಾಕಿಸಿಕೊಂಡು ಚಾಲನೆಯಲ್ಲಿದ್ದರೆ ಆರ್ಥಿಕವಾಗಿ/ ನೌಕರಿ ಇಲ್ಲದ ಲೇಖಕ ತಾವು ಬರೆದ ಬರಹವನ್ನು ಪ್ರಕಟಗೊಳಿಸಲು ಆಗದೆ ಪರಿತಪಿಸುವಂತಾಗಿದೆ.
ಹಾಗಾಗಿ ಸ್ಥಗಿತಗೊಳಿಸಿರುವ ಏಕಗವಾಕ್ಷಿ ಯೋಜನೆಗೆ ಮರು ಚಾಲನೆ ನೀಡಿದರೆ ಪ್ರಸ್ತುತ 2024-25 ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಪುಸ್ತಕಗಳು ಮಾತ್ರವಲ್ಲ 2020 ರಿಂದ 23 ನೇ ಸಾಲಿನಿಂದ ಬಂಡವಾಳ ಹೂಡಿ ಅಚ್ಚಾಕಿ ಕಾದು ಕುಳಿತಿರುವ ಬಾಕಿ ಪುಸ್ತಕಗಳಿಗೂ ಜೀವ ದೊರಕಿ ಪ್ರಕಾಶಕರಿಗೂ ಲೇಖಕರಿಗೂ ಜೀವ ದೊರಕಬಲ್ಲದು. ಈ ಬಗ್ಗೆ ಸರ್ಕಾರ ಕಣ್ತೆರೆದು ನೋಡಲಿ ಎಂದಿದ್ದಾರೆ.
ಎಂ.ನಾಗೇಂದ್ರಕುಮಾರ್
