ತುಮಕೂರು, ನ.13 — ತುಮಕೂರಿನ ಹಿರಿಯ ಪತ್ರಕರ್ತರೂ, ಪ್ರಜಾಪ್ರಗತಿ ಪತ್ರಿಕೆಯ ಉಪಸಂಪಾದಕರಾದ ಟಿ.ಎನ್. ಮಧುಕರ್ ಅವರ 46ನೇ ಹುಟ್ಟುಹಬ್ಬವನ್ನು ಸಹ ಪತ್ರಕರ್ತರು ಹಾಗೂ ಸ್ನೇಹಿತರು ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಕೆಯುಡ್ಲ್ಯೂಜೆ ರಾಜ್ಯ ಸಮಿತಿ ಸದಸ್ಯರಾದ ಚಿ.ನಿ. ಪುರುಷೋತ್ತಮ್, ಹರೀಶ್ ಆಚಾರ್ಯ, ಕೆ.ಟಿ. ಮಾರುತಿ, ಯೋಗೀಶ್ ಮೆಳೆಕಲ್ಲಹಳ್ಳಿ, ಚಿಕ್ಕೀರಪ್ಪ, ಜಯಣ್ಣ ಬೆಳಗೆರೆ, ರಂಗಧಾಮಯ್ಯ, ಅನುಶಾಂತರಾಜು, ನಿವೃತ್ತ ಜಂಟಿ ಕಾರ್ಯದರ್ಶಿ ಟಿ.ಸಿ. ಕಾಂತರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಹೋದ್ಯೋಗಿಗಳು ಮಧುಕರ್ ಅವರಿಗೆ ಹೂಗುಚ್ಛ ನೀಡಿ ಸಿಹಿನೀಡಿ ನೀಡಿ ಶುಭ ಹಾರೈಸಿದರು.
– ಕೆ.ಬಿ.ಚಂದ್ರಚೂಡ
