ಚನ್ನರಾಯಪಟ್ಟಣ: ತಾಲೂಕು ಗ್ರಂಥಾಲಯಕ್ಕೆ ಮುಂದಿನ ದಿನಗಳಲ್ಲಿ ಹೆಚ್ಚಿನ ಆನುದಾನ ನೀಡಲಾಗುವುದು ಎಂದು ಶಾಸಕ ಸಿ. ಎನ್. ಬಾಲಕೃಷ್ಣ ತಿಳಿಸಿದರು.
ಅವರು ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಪುಸ್ತಕ ಓದು ಹವ್ಯಾಸ ಉಳ್ಳವರು ಎಲ್ಲೇ ಹೋದರೂ ಸಂತೋಷವಾಗಿರುತ್ತಾನೆ, ಓದಿನಿಂದ ನಿಮ್ಮ ಗುರಿಯನ್ನು ಸಾಧಿಸಬಹುದು. ಮಾನಸಿಕ ಸಮತೋಲನೆಯನ್ನು ಇಟ್ಟುಕೊಳ್ಳಲು ಓದಿನಿಂದ ಮಾತ್ರ ಸಾಧ್ಯ. ಪಟ್ಟಣದಲ್ಲಿರುವ ಗ್ರಂಥಾಲಯವು ಸುಸಜ್ಜಿತವಾಗಿದ್ದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ಇಲ್ಲಿ ಓದಿದ ಎಷ್ಟೋ ಜನ ಸರ್ಕಾರಿ ಕೆಲಸಗಳನ್ನು ಪಡೆದುಕೊಂಡಿದ್ದು ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಪುಸ್ತಕವನ್ನು ಸ್ನೇಹಿತರನ್ನಾಗಿ ನೋಡಿ ದೇವಸ್ಥಾನ ಎಷ್ಟು ಮುಖ್ಯವೋ ಗ್ರಂಥಾಲಯ ಕೂಡ ಅಷ್ಟೇ ಮುಖ್ಯವಾಗಿದೆ. ತಾಲೂಕಿನ ಹಲವು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಡಿಜಿಟಲ್ ಗ್ರಂಥಾಲಯದ ಅನುಕೂಲತೆ ಇದ್ದು ಗ್ರಾಮೀಣ ಪ್ರದೇಶದಲ್ಲೂ ಓದುವ ಹವ್ಯಾಸವನ್ನು ಬಲಪಡಿಸಿದಂತಾಗಿದೆ ಎಂದರು.
ಹಿರಿಯ ಹೋರಾಟಗಾರ ಪುಟ್ಟಣ್ಣಗೋಕಾಕ್ ಮಾತನಾಡಿ ಗ್ರಂಥಾಲಯಕ್ಕೆ ಯಾವುದೇ ಜಾತಿ, ಧರ್ಮ, ಮೇಲು, ಕೀಳು ಎಂಬ ಕಿರಿಮೆ ಇಲ್ಲದೆ ಯಾವ ವಯಸ್ಸಿನ ನಿರ್ಬಂಧವಿಲ್ಲದ ದೇಗುಲ ಗ್ರಂಥಾಲಯವಾಗಿದೆ, ಯಾರಿಗೆ ಓದುವ ದಾಹವಿರುತ್ತದೋ ಅವರಿಗೆ ಜ್ಞಾನದ ದಾಹ ನೀಗುತ್ತದೆ.
ಡಿವೈಎಸ್ಪಿ ಕುಮಾರ್ ಮಾತನಾಡಿ ವಿದ್ಯಾರ್ಥಿ ಜೀವನ ಗೋಲ್ಡ್ ಲೈಫ್ ನಿಜ, ಆದರೆ ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಟಿವಿ, ಸೀರಿಯಲ್ಗೆ ಮಾರು ಹೋಗಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ಹೆಚ್ಚು ನೋಡಿದರೆ ಕಣ್ಣಿನಲ್ಲಿ ನೀರು ಬರುತ್ತದೆ, ಜ್ಞಾಪಕಾ ಶಕ್ತಿ ಕಡಿಮೆಯಾಗುತ್ತದೆ ಎಂದು ಇಂದಿನ ಅಧ್ಯಯನ ತಜ್ಞರು ತಿಳಿಸುತ್ತಿದ್ದಾರೆ. ಸಮಾಜದ ಆಸ್ತಿ ಮತ್ತು ಶಕ್ತಿಯಂತವರಾಗಬೇಕಾದರೆ ಪುಸ್ತಕದ ಅಧ್ಯಯನ ಹೆಚ್ಚು ಬೇಕು. ತಾವು ಶ್ರೀರಂಗಪಟ್ಟಣದಲ್ಲಿ ಗ್ರಂಥಾಲಕಯದ ಬಳಕೆಯನ್ನು ಮಾಡಿಕೊಂಡಿದ್ದು ನನ್ನ ಜೀವನಕ್ಕೆ ತುಂಬಾ ಉಪಯೋಗವಾಯಿತು. ವಿಜ್ಞಾನ ಮತ್ತು ಗಣಿತಿ ನನ್ನ ನೆಚ್ಚಿನ ವಿಷಯವಾಗಿದ್ದು ಚಿನ್ನದ ಪದಕವನ್ನು ಸಹ ಪಡೆದಿದ್ದು ಇಂದು ಸಹ ಹಲವು ಪುಸ್ತಕಗಳನ್ನು ಸಂಗ್ರಹಿಸಿದ್ದೇನೆ ಎಂದು.
ಸಾಹಿತಿ ಜಯಂತಿ ಚಂದ್ರಶೇಖರ್ರವರ ಸಕ್ಕರೆ ಬಟ್ಟಲು ಪುಸ್ತಕವನ್ನ ಬಿಡುಗಡೆ ಮಾಡಲಾಯಿತು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಸುಮತಿ ಜೈನ್, ಗ್ರಂಥಪಾಲಕ ದೇವರಾಜ್, ಕನ್ನಡವಾಸು, ಮಹೇಶ್, ರೇವಣ್ಣ, ವಿಜಯಕುಮಾರ್ ಮತ್ತಿತರಿದ್ದರು.
ವರದಿ : ಐ ಕೆ ಮಂಜುನಾಥ್
