ಚನ್ನರಾಯಪಟ್ಟಣ: ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರವೇ ಪ್ರಾರಂಭವಾಗಿರುವ ಟ್ರಸ್ಟ್ ವತಿಯಿಂದ ಮಹಾಬುಜ ಮಾರುತಿ ಇಂಡಿಯನ್ ಟ್ರಸ್ಟ್ ಅಡಿಯಲ್ಲಿ ನ.23 ರಂದು ಕುರುಕ್ಷೇತ್ರ ಅಥವಾ ಗದಾಯುದ್ಧ ನಾಟಕ ಪ್ರದರ್ಶನವು ಸರ್ಕಾರಿ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಎನ್ ಲೋಕೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಬೆಳಿಗ್ಗೆ 10.00 ರಿಂದ ರಾತ್ರಿ 12.00 ರವರೆಗೆ ನಾಟಕ ಪ್ರದರ್ಶನಕ್ಕೆ ತಯಾರಿ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಲಾರಸಿಕರು ಆಗಮಿಸುವ ಮೂಲಕ ನಾಟಕ ಪ್ರದರ್ಶನ ಯಶಸ್ವಿ ಗೊಳಿಸಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಾಟಕ ತರಬೇತುದಾರ ಪ್ರಜ್ವಲ್, ನಾಟಕ ಆಯೋಜಕರಾದ ರಾಜೇಶ್, ಕಸಾಪ ಅಧ್ಯಕ್ಷರಾದ ಎಚ್ಎನ್ ಲೋಕೇಶ್, ರಾಜಕುಮಾರ್, ಸುರೇಶ್ ಗೌಡ ಸೇರಿದಂತೆ ಇತರರು ಹಾಜರಿದ್ದರು.
ವರದಿ : ಐ ಕೆ ಮಂಜುನಾಥ್

[…] […]