ಕೆ.ಆರ್.ಪೇಟೆ,ಡಿ.13: ತಾಲ್ಲೂಕು ದಸ್ತಾವೇಜು ಪತ್ರ ಬರಹಗಾರರ ಸಂಘದ ಸದಸ್ಯರಿಂದ ಉಪ ನೊಂದಣಾಧಿಕಾರಿಗಳ ಕಚೇರಿಯ ಮುಂದೆ ಲೇಖನಿ ಸ್ಥಗಿತ ಮುಷ್ಕರ ನಡೆಸಿದರು.
ಕರ್ನಾಟಕ ರಾಜ್ಯ ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟದ ಕರೆಯ ಮೇರೆಗೆ ಲೇಖನಿ ಸ್ಥಗಿತ ಮಾಡಿ ಬೆಳಿಗ್ಗೆ ಸಂಜೆಯವರೆವಿಗೂ ಧರಣಿ ನಡೆಸಿದ ಪತ್ರ ಬರಹಗಾರರು ರಾಜ್ಯ ಸರ್ಕಾರವು ಜಾರಿ ಮಾಡಲು ಉದ್ದೇಶಿಸಿರುವ ಪೇಪರ್ಲೆಸ್ ನೊಂದಣೀ ಮಾಡಿಸುವ ಕಾವೇರಿ 3.0 ತಂತ್ರಾಂಶವನ್ನು ರದ್ದು ಮಾಡಬೇಕು. ಪರವಾನಗಿ ಪಡೆದ ದಸ್ತಾವೇಜು ಬರಹಾಗಾರರಿಗೆ ನೊಂದಣೀ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶದಲ್ಲಿ ಪ್ರತ್ಯೇಕ ಲಾಗಿನ್ ಸೃಜಿಸಿಕೊಡಬೇಕು. ಕಾವೇರಿ 2.0 ತಂತ್ರಾಂಶದ ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ. ದಾನಪತ್ರ, ಕ್ರಯಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು ಸಹ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ.

ಸುಧಾರಣೆಯ ನೆಪದಲ್ಲಿ ಪತ್ರ ಬರಹಗಾರರ ಅಸ್ತಿತ್ವಕ್ಕೆ ದಕ್ಕೆ ತರಲು ಹೊರಟಿರುವುದು. ಪತ್ರ ಬರಹಗಾರರಿಗೆ ಮಾತ್ರವಲ್ಲದೇ ಜನಸಾಮಾನ್ಯರಿಗೂ ಪೇಪರ್ ಲೆಸ್ ನೊಂದಣಿ ಯೋಜನೆಯಲ್ಲಿ ಭಾರಿ ತೊಂದರೆಯಾಗುವ ಸಾಧ್ಯತೇಯೇ ಹೆಚ್ಚಾಗಿದೆ ಹಾಗಾಗಿ ಕೂಡಲೇ ಸರ್ಕಾರವು ತರಲು ಉದ್ದೇಶಿಸಿರುವ ಕಾವೇರಿ 3.0 ತಂತ್ರಾಂಶವನ್ನು ರದ್ದು ಮಾಡಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 16ಸಾವಿರ ದಸ್ತಾವೇಜು ಪತ್ರ ಬರಹಗಾರರು ಮತ್ತು ಅವರ ಕುಟುಂಬವನ್ನು ರಕ್ಷಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಇದನ್ನು ಓದಿ:ಕೆ.ಆರ.ಪೇಟೆ: ತಾಲ್ಲೂಕಿನ ಕಸಬಾ ಹೋಬಳಿಯ ಕತ್ತರಘಟ್ಟ ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ
ಪೇಪರ್ ಲೆಸ್ ನೊಂದಣಿಯಿಂದ ಜನಸಾಮಾನ್ಯರಿಗೆ ಹೆಚ್ಚು ಮೋಸವಾಗುವ ಸಾಧ್ಯತೆ ಇರುತ್ತದೆ. ಆಧಾರ್ ಕಾರ್ಡ್ ಮಾನದಂಡ ಇಟ್ಟುಕೊಂಡು ನೊಂದಣೀ ಮಾಡುವ ಪ್ರಕ್ರಿಯೆ ಮೋಸದ ನೊಂದಣಿಗೆ ರಹದಾರಿಯಾಗುತ್ತದೆ. ಇದು ಜನ ಸಾಮಾನ್ಯರು ಆಸ್ತಿಯನ್ನು ಕಳೆದುಕೊಂಡು ಬೀದಿಗೆ ಬೀಳುವಂತೆ ಮಾಡುತ್ತದೆ. ಯಾರು ಬೇಕಾದರೂ ಆಧಾರ್ ಲಿಂಕ್ ಆಗಿರುವ ಆರ್.ಟಿ.ಸಿ ಮತ್ತು ಮೊಬೈಲ್ ಓಟಿಪಿ ಮೂಲಕ ನೊಂದಣೀಯನ್ನು ಮಾಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ. ಪೇಪರ್ ಲೆಸ್ ನೊಂದಣೀಯಿಂದ ಪತ್ರ ಬರಹಾರರಿಗೆ ಕೆಲಸ ಇಲ್ಲದಂತಾಗುತ್ತದೆ.

ಇವರನ್ನೇ ನಂಬಿರುವ ಕಂಪ್ಯೂಟರ್ ಡಿಟಿಪಿ ಆಪರೇಟರ್, ಜೆರಾಕ್ಸ್ ಮಾಡುವವರು, ಇಸ್ಟಾಂಪಿಂಗ್ ಮಾರುವವರಿಗೆ ಕೆಲಸವೇ ಇಲ್ಲದಂತಾಗುತ್ತದೆ. ಇದರಿಂದ ನಿರುದ್ಯೋಗಿ ಸಮಸ್ಯೆ ಹೆಚ್ಚಾಗುತ್ತದೆ. ಇಂತಹ ಅವ್ಯವಸ್ಥೆಗೆ ದಾರಿಯಾಗುವ ನೂತನ ಕಾವೇರಿ 3.0 ನೊಂದಣೀ ಯೋಜನೆ ಎಂಬ ದುಸ್ಸಾಹಸಕ್ಕೆ ಕೈ ಹಾಕಬಾರದು. ರಾಜ್ಯ ಸರ್ಕಾರವು ರಾಜ್ಯ ಸರ್ಕಾರವು ಜಾರಿ ಮಾಡಲು ಉದ್ದೇಶಿಸಿರುವ ಕಾವೇರಿ 3.0 ತಂತ್ರಾಂಶವನ್ನು ರದ್ದು ಮಾಡಬೇಕು. ಪರವಾನಗಿ ಪಡೆದ ದಸ್ತಾವೇಜು ಬರಹಾಗಾರರಿಗೆ ನೊಂದಣೀ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0ತಂತ್ರಾಂಶದಲ್ಲಿ ಪ್ರತ್ಯೇಕ ಲಾಗಿನ್ ಸೃಜಿಸಿಕೊಡಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ದಸ್ತಾವೇಜು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ಪಿ.ಎಸ್.ಶಿವಲಿಂಗೇಗೌಡ, ಕಾರ್ಯದರ್ಶಿ ಕೆ.ಆರ್.ಹರೀಶ್ಕುಮಾರ್, ಉಪಾಧ್ಯಕ್ಷ ಕೆ.ಎಸ್.ನಾಗರಾಜು, ಖಜಾಂಚಿ ಮುದುಗೆರೆ ಶಂಕರ್ನಾಗ್, ಸಹ ಕಾರ್ಯದರ್ಶಿ ಬಿ.ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ಮುರುಗೇಶ್, ಕಾರ್ಯಕಾರಿ ಸಮಿತಿ ನಿರ್ದೇಶಕರಾದ ಕೆ.ಸಿ.ವೆಂಕಟರಾಮು, ಎಂ.ಎಸ್.ಮಹಾದೇವು, ಕೆ.ಟಿ.ಮಂಜುನಾಥ್, ಎಂ.ಎಸ್.ಮಹಾದೇವಸ್ವಾಮಿ, ಕೆ.ಎಸ್.ಬಸವರಾಜು, ಅಕ್ಕಿಹೆಬ್ಬಾಳು ಎ.ಎನ್.ರಮೇಶ್, ಡಿ.ಜೆ.ರೇವಣ್ಣ, ಸಿ.ಜೆ.ಸಣ್ಣಸ್ವಾಮಿ, ಎಂ.ಎನ್.ಶ್ರೀನಿವಾಸಮೂರ್ತಿ, ಸಾವಿತ್ರಿಹೆಗ್ಗಡೆ, ಎಸ್.ಆರ್.ನಾಗರಾಜು, ಡಿಟಿಪಿ ಆಪರೇರ್ಸ್ ಸೌಮ್ಯ, ಮಂಗಳ, ಶೋಭ, ರಜಿನಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
-ಶ್ರೀನಿವಾಸ್ ಆರ್.
